Chair Cleaning : ಬಿಳಿ ಕುರ್ಚಿ ಕೊಳೆಯಾಗಿದೆಯೇ? ಈ ಟಿಪ್ಸ್ ಅನುಸರಿಸಿ, ಫಳಫಳ ಹೊಳೆಯುತ್ತೆ ಕುರ್ಚಿ!!!
ಸಾಮಾನ್ಯವಾಗಿ ಮನೆಗೆ ಅತಿಥಿಗಳು ಬಂದಾಗ ಕೂರಲು ಕುರ್ಚಿ ಬೇಕಾಗುತ್ತದೆ, ಹೆಚ್ಚಾಗಿ ಪ್ಲಾಸ್ಟಿಕ್ ಕುರ್ಚಿಗಳನ್ನೇ ಬಳಕೆ ಮಾಡುತ್ತಾರೆ. ಕುರ್ಚಿ, ಟೇಬಲ್‌ಗಳನ್ನು ಹೊಸತಾಗಿ ತಂದಾಗ ಶುಭ್ರವಾಗಿ, ನೋಡಲು ಸುಂದರವಾಗಿರುತ್ತದೆ. ಅದರಲ್ಲೂ ಬಿಳಿ ಕುರ್ಚಿಗಳು ನೋಡಲು ಆಕರ್ಷಣೀಯವಾಗಿರುತ್ತದೆ ಅಲ್ಲವೇ! ಆದರೆ
ಈ ಕುರ್ಚಿ ಮತ್ತು ಟೇಬಲ್ ಗಳ ಸುದೀರ್ಘವಾದ ಬಳಕೆಯ ನಂತರ ಅದರಲ್ಲಿ ಕೊಳಕು ದಪ್ಪ ಪದರದಂತೆ ಸಂಗ್ರಹವಾಗಿ, ಕ್ರಮೇಣ ಬಿಳಿ ಕುರ್ಚಿ ಮತ್ತು ಟೇಬಲ್ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಅದರ ಶುಚಿಗೊಳಿಸುವಿಕೆ ತುಂಬಾ ಕಷ್ಟಕರವಾಗಿರುತ್ತದೆ. ಹಾಗಾದರೆ ಕುರ್ಚಿ ಮೇಜುಗಳನ್ನ ಶುಚಿಯಾಗಿಟ್ಟುಕೊಳ್ಳಲು ಸುಲಭವಾದ ಕ್ರಮಗಳು ಇಲ್ಲಿವೆ.
• ಅರ್ಧ ಲೀಟರ್ ನೀರನ್ನು ತೆಗೆದುಕೊಂಡು ಅದಕ್ಕೆ 3 ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಿ ನಂತರ ಅದನ್ನು ಕುರ್ಚಿ ಅಥವಾ ಮೇಜಿನ ಮೇಲೆ ಇರಿಸಿ, ಇದು ಮೇಜಿನ ಮೇಲಿರುವ ಕೊಳೆಯನ್ನು ಮೃದುಗೊಳಿಸುತ್ತದೆ ಮತ್ತು ಸ್ವಚ್ಛಗೊಳಿಸಲು ಸುಲಭವಾಗುತ್ತದೆ. ಸ್ವಲ್ಪ ಸಮಯದ ನಂತರ ಕುರ್ಚಿ ಮತ್ತು ಟೇಬಲ್ ಉಜ್ಜುವ ಮೂಲಕ ಸ್ವಚ್ಛಗೊಳಿಸಿ ಮತ್ತು ಅದು ಸುಲಭವಾಗಿ ಕೊಳೆ ತೆಗೆದುಹಾಕುತ್ತದೆ.
• ಬಿಳಿ ಕುರ್ಚಿ ಮತ್ತು ಮೇಜುಗಳನ್ನು ಸ್ವಚ್ಛಗೊಳಿಸಲು ನೀವು ಅಡುಗೆ ಸೋಡಾವನ್ನು ಕೂಡ ಬಳಸಬಹುದು. ಹೇಗೆಂದರೆ 2/3 ಕಪ್ ನೀರಿಗೆ 2 ಚಮಚ ಅಡುಗೆ ಸೋಡಾವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ ನಂತರ ಒಂದು ಚಮಚ ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿ. ಇದಾದ ನಂತರ, ಸುಮಾರು 5 ನಿಮಿಷಗಳ ಬಳಿಕ ಮಿಶ್ರಣವನ್ನು ಮೇಜಿನ ಮೇಲೆ ಹಾಕಿ ಮತ್ತು 10 ನಿಮಿಷಗಳ ನಂತರ ಅದನ್ನು ಬ್ರಷ್‌ನಿಂದ ಉಜ್ಜುವ ಮೂಲಕ ಸ್ವಚ್ಛಗೊಳಿಸಿ.
• ಹಳದಿ ಪ್ಲಾಸ್ಟಿಕ್ ಟೇಬಲ್‌ಗಳು ಮತ್ತು ಕುರ್ಚಿಗಳನ್ನು ಬೋರಾಕ್ಸ್ ಪುಡಿಯಿಂದ ಸಂಪೂರ್ಣವಾಗಿ ಸ್ವಚ್ಛಗೊಳಿಸಬಹುದು. ಹೇಗೆಂದರೆ ಮೊದಲು ನೀರಿಗೆ ಬೋರಾಕ್ಸ್ ಪೌಡರ್ ಮತ್ತು ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ತದನಂತರ ಅದರಲ್ಲಿ ಡಿಟರ್ಜೆಂಟ್ ಪೌಡರ್ ಬೆರೆಸಿ ಕುರ್ಚಿ, ಮೇಜಿನ ಮೇಲೆ ಹಾಕಿ. 5 ನಿಮಿಷಗಳ ನಂತರ ಬ್ರಷ್‌ನಿಂದ ಉಜ್ಜುವ ಮೂಲಕ ಕುರ್ಚಿಯನ್ನು ಸ್ವಚ್ಛಗೊಳಿಸಿ.
ಹೀಗೇ ಬಿಳಿ ಕುರ್ಚಿ, ಟೇಬಲ್ ಗಳನ್ನು ಸುಲಭವಾಗಿ ಶುಚಿಗೊಳಿಸಬಹುದಾಗಿದೆ.