ಸೌಂದರ್ಯ ಸ್ಪರ್ಧೆಯಲ್ಲಿ ಬಿಗ್ ಫೈಟ್ | ಸ್ಪರ್ಧೆ ನೋಡಲು ಬಂದ ಜನ ಶಾಕ್!!!

ಮನುಷ್ಯ ಕೆಲವೊಮ್ಮೆ ತುಂಬಾ ಅಂದರೆ ತುಂಬಾ ಸ್ವಾರ್ಥಿ ಆಗುತ್ತಾನೆ. ಸಣ್ಣ ಸಣ್ಣ ವಿಷಯಗಳಿಗೂ ಕೋಪ, ಮತ್ಸರ, ಕಿತ್ತಾಟ ಇವುಗಳನ್ನು ನೋಡಿ ನೋಡಿ ಸುಸ್ತಾಗಿದೆ. ಎಲ್ಲೆಂದರಲ್ಲಿ ಕಿತ್ತಾಡಿಕೊಳ್ಳುವವರಿಗೆ ವಿವೇಚನೆ ಇಲ್ಲವೇನೋ ಎಂದು ಅನಿಸಿಬಿಡುತ್ತೆ. ಹಾಗೆಯೇ ಒಂದು ಘಟನೆ ವಿದೇಶದಲ್ಲಿ ನಡೆದಿದೆ.

 

ಹೌದು ನ್ಯೂಯಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಮಿಸ್ ಶ್ರೀಲಂಕಾ ಸೌಂದರ್ಯ ಸ್ಪರ್ಧೆಯಲ್ಲಿ ಕಿಕ್ಕಿರಿದ ಜನರ ನಡುವೆ ಹೊಡೆದಾಟ ನಡೆದ ಘಟನೆ ನಡೆದಿದೆ.

ನ್ಯೂಯಾರ್ಕ್‌ನಲ್ಲಿ ಶುಕ್ರವಾರದಂದು ಮೊದಲ ಬಾರಿ ಈ ಮಿಸ್ ಶ್ರೀಲಂಕಾ ಸೌಂದರ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಆನಂತರ ಏರ್ಪಡಿಸಿದ್ದ ಸಮಾರಂಭ ಏಕಏಕಿ ಹೀಗೆ ಹಿಂಸಾತ್ಮಕ ರೂಪಕ್ಕೆ ತಿರುಗಿತು.

ಆದರೆ ಈ ಸಂಘರ್ಷಕ್ಕೆ ಕಾರಣವೇನು ಎನ್ನುವುದು ಈತನಕ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಮುಖ್ಯವಾಗಿ ಈ ಸ್ಪರ್ಧೆಯಲ್ಲಿ ಗೆದ್ದ ಅಭ್ಯರ್ಥಿಯು ವಿಚ್ಛೇದಿತೆಯಾದ ಕಾರಣ ಆಕೆಯನ್ನು ಸ್ಪರ್ಧೆಯಿಂದ ಅನರ್ಹಗೊಳಿಸಬೇಕು ಎಂಬ ಒತ್ತಾಯವನ್ನು ಪ್ರತಿಸ್ಪರ್ಧಿಯೊಬ್ಬರು ತಗಾದೆ ತೆಗೆದರು. ಈ ಸಂದರ್ಭದಲ್ಲಿಯೇ ಗೆದ್ದ ಅಭ್ಯರ್ಥಿಯ ಕಿರೀಟವನ್ನು ಆಕೆ ಎಳೆದಾಡಿದರು. ಆಗಲೇ ಈ ಜಗಳಕ್ಕೆ ಕಿಡಿಹೊತ್ತಿಕೊಂಡಿದ್ದು ಎಂದು ಹೇಳಲಾಗುತ್ತಿದೆ. ಈ ಹೊಡೆದಾಟದಲ್ಲಿ ಕೆಲ ವಸ್ತುಗಳು ಜಖಂಗೊಂಡಿವೆ. ಕೆಲವರನ್ನು ಬಂಧಿಸಲಾಗಿದೆ. ಒಟ್ಟು 14 ಜನ ಸ್ಪರ್ಧಿಗಳಿದ್ದು ಈ ಹೊಡೆದಾಟದಲ್ಲಿ ಅವರು ಭಾಗಿಯಾಗಿಲ್ಲ ಎನ್ನಲಾಗಿದೆ.

ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಶ್ರೀಲಂಕಾಕ್ಕೆ ತಲೆನೋವಾಗಿದೆ. ಶ್ರೀಲಂಕಾದ ಘನತೆಗೆ ಘಟನೆ ಕಳಂಕ ತಂದಿದೆ ಎಂದು ಮುಖಂಡರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

https://twitter.com/Toddy_Lad/status/1584124562794741761?ref_src=twsrc%5Etfw%7Ctwcamp%5Etweetembed%7Ctwterm%5E1584124562794741761%7Ctwgr%5E5fac998ee6f7e1c82ee859b38085aa9245fc315a%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fkannadadunia-epaper-kannadad%2Fsoundaryaspardheyallimaaraamaarimisshrilankanodalubandavarushaakvidiyovairal-newsid-n436317958%3Fs%3Dauu%3D0x0829ccde0a1fd2e6ss%3Dwsp

ಅದಲ್ಲದೆ ಶ್ರೀಲಂಕಾದಿಂದ ಸಾಕಷ್ಟು ಜನರು ಅಮೆರಿಕಕ್ಕೆ ವಲಸೆ ಬಂದಿದ್ದಾರೆ. ತಮ್ಮ ದೇಶ ಸಂಕಷ್ಟದಲ್ಲಿರುವ ಕಾರಣ ಏನಾದರೂ ಸಹಾಯ ಮಾಡಬೇಕೆಂಬ ಮಾತು ಈ ವಲಸಿಗರದ್ದು. ಈ ಹಿನ್ನೆಲೆಯಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಆದರೆ ಈ ರೀತಿ ಆಗಬಹುದು ಎಂಬ ಊಹೆ ಯಾರಿಗೂ ಇರಲಿಲ್ಲ ಎಂದು ಸ್ಪರ್ಧೆಯ ಆಯೋಜಕರಲ್ಲಿ ಒಬ್ಬರಾದ ಸುಜಾನಿ ಫೆರ್ನಾಂಡೋ ಅವರು ಹೇಳಿಕೊಂಡಿದ್ದಾರೆ.

Leave A Reply

Your email address will not be published.