Viral video: ರಸ್ತೆ ಬದಿ ಬೀದಿ ದೀಪದ ಬೆಳಕಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿ|ಇಂಟರೆಸ್ಟಿಂಗ್ ವೀಡಿಯೋ ಇಲ್ಲಿದೆ|
ಶಿಕ್ಷಣ ಪ್ರತಿಯೊಬ್ಬರ ಜೀವನವನ್ನು ಬೆಳಗಿಸಲು ಉತ್ತಮ ಸಾಧನೆಯ ಪಥದಲ್ಲಿ ಮುನ್ನಡೆಯಲು ಅನುವು ಮಾಡಿಕೊಡುತ್ತದೆ.
ಕಲಿಯುವ ಮನಸ್ಸಿದ್ದರೆ ಎಂತಹ ಅಡೆತಡೆಗಳು ಎದುರಾದರೂ ಕೂಡ ಮೆಟ್ಟಿ ನಿಂತು ಮುಂದೆ ಸಾಗಬಹುದು ಎಂಬುದಕ್ಕೆ ಅನೇಕ ಜೀವಂತ ನಿದರ್ಶನಗಳನ್ನು ಕಾಣಬಹುದು.
ಇಂದಿಗೂ ಅನೇಕ ಪುಸ್ತಕ ಹಿಡಿಯಬೇಕಿದ್ದ ಅದೆಷ್ಟೋ ಮಕ್ಕಳ ಕೈಗಳು ಮುಸುರೆ ತಿಕ್ಕುವ ಸ್ಥಿತಿ ಎದುರಾಗಿರುವುದು ದುರಂತ. ನೂರಾರು ಕನಸು ಹೊತ್ತು ಓದಬೇಕೆಂಬ ತುಡಿತವಿದ್ದರೂ ಕೂಡ ಕೆಲ ಮಕ್ಕಳ ಮನೆಯ ಆರ್ಥಿಕ ಪರಿಸ್ಥಿತಿ ಆಸೆಗೆ ತಣ್ಣೀರು ಎರಚಬೇಕಾದ ಅವಸ್ಥೆ ಎದುರಾಗಿದೆ.
ಪ್ರತಿಯೊಬ್ಬರೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಅಥವಾ ಹೆಸರಾಂತ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅದೃಷ್ಟ ಅಥವಾ ಸವಲತ್ತು ಹೊಂದಿಲ್ಲ .
ಎಲ್ಲಾ ಹೋರಾಟ ಮತ್ತು ಕಷ್ಟಗಳ ಹೊರತಾಗಿಯೂ, ಎಲ್ಲಾ ಸವಾಲುಗಳನ್ನು ಜಯಿಸಲು ಮನಸ್ಸು ಮಾಡುವವರು ಕೂಡ ಇದ್ದಾರೆ. ಹಳ್ಳಿಗಾಡಿನ ಮೂಲಕ ಅದೆಷ್ಟೋ ಮೈಲಿಗಲ್ಲು ದೂರ ನಡೆದು ಶಾಲೆಗೆ ಹೋಗುವವರು ಕೂಡ ಕೆಲವು ಕಡೆ ಇದ್ದಾರೆ.
ಸ್ಪೂರ್ತಿದಾಯಕ ವಿಡಿಯೋವೊಂದು ಮುನ್ನೆಲೆಗೆ ಬಂದಿದ್ದು, ಬಾಲಕಿಯೊಬ್ಬಳು ಪಾದಚಾರಿ ಮಾರ್ಗದಲ್ಲಿ ಬೀದಿ ದೀಪಗಳ ಕೆಳಗೆ ಓದುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
Stutes Zone 987 ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ, ಶಾಲಾ ಸಮವಸ್ತ್ರದಲ್ಲಿರುವ ಬಾಲಕಿಯೊಬ್ಬಳು ಪಾದಚಾರಿ ಮಾರ್ಗದಲ್ಲಿ ಬೀದಿ ದೀಪಗಳ ಕೆಳಗೆ ಕುಳಿತು ತನ್ನ ನೋಟ್‌ಬುಕ್‌ನಲ್ಲಿ ಬರೆಯುವಲ್ಲಿ ಮಗ್ನಳಾಗಿರುವುದನ್ನು ನೋಡಬಹುದಾಗಿದೆ.
ಈ ಪೋಸ್ಟ್ ಅನೇಕರನ್ನು ಭಾವನಾತ್ಮಕವಾಗಿಸಿದೆ. ಅನೇಕರು ಬಾಲಕಿ ತನ್ನ ಅಧ್ಯಯನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಕ್ಕಾಗಿ ಶ್ಲಾಘಿಸಿದ್ದಾರೆ. ಇಂದಿನ ದಿನಗಳಲ್ಲಿ ಮೊಬೈಲ್ ನ ಜೊತೆಗೆ ಕಾಲ ಹರಣ ಮಾಡುವಲ್ಲಿ ತೊಡಗಿಸಿಕೊಳ್ಳುವುದೇ ಹೆಚ್ಚು. ಈ ನಡುವೆ ಈ ವಿದ್ಯಾರ್ಥಿಯ ಓದುವ ಹುಮ್ಮಸ್ಸು ಜೊತೆಗೆ ಆಸಕ್ತಿ ಉಳಿದವರಿಗೆ ಮಾದರಿಯಾಗಿದೆ.
ಮನಸ್ಸಿದ್ದರೆ ಮಾರ್ಗ ಎಂಬ ಮಾತಿನಂತೆ ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಉತ್ಸುಕಳಾಗಿರುವ ವಿದ್ಯಾರ್ಥಿಯನ್ನು ಪ್ರಶಂಸಿಸಲೇ ಬೇಕು.