ಮೋದಿಯ ಕಾರ್ಯ ವೈಖರಿಗೆ ಫುಲ್ ಫಿದಾ |ಮೇಕ್ ಇನ್ ಇಂಡಿಯಾ ಗೆ ಶ್ಲಾಘನೆ ವ್ಯಕ್ತಪಡಿಸಿದ ಪುಟಿನ್|
ದೇಶದಲ್ಲಿ ಬದಲಾವಣೆಯ ಪರ್ವ ಆರಂಭಿಸಿ ಜಗತ್ ವಿಖ್ಯಾತಿ ಗಳಿಸಿ ಹೊರದೇಶದ ನಾಯಕರು ಕೂಡ ಬೆರಗುಗಣ್ಣಿನಿಂದ ನೋಡುವಂತೆ ಮಾಡಿರುವ ದೇಶದ ಪ್ರಗತಿಯ ಹರಿಕಾರ ಗೌರವಾನ್ವಿತ ಪ್ರಧಾನಿ ನರೆಂದ್ರ ಮೋದಿಯವರನ್ನು ಕರ್ನಾಟಕ ಮಾತ್ರವಲ್ಲದೇ ಹೊರ ದೇಶದ ನಾಯಕರು ಕೂಡ ಮೆಚ್ಚಿಕೊಂಡಿರುವುದು ತಿಳಿದಿರುವ ವಿಚಾರ!!
ತನ್ನ ಕಾರ್ಯ ವೈಖರಿಯಿಂದ ಎಲ್ಲರ ಮನದಲ್ಲೂ ಭದ್ರ ಸ್ಥಾನ ಪಡೆದಿರುವ ಭಾರತದ ಹೆಮ್ಮೆಯ ಮೋದಿ ಇದೀಗ ರಷ್ಯಾ ಅಧ್ಯಕ್ಷರಿಂದಲೂ ಕೂಡ ಹೊಗಳಿಕೆಯನ್ನು ಪಡೆದುಕೊಂಡಿದ್ದಾರೆ . ಇದು ಭಾರತಕ್ಕೆ ಹೆಮ್ಮೆಯ ವಿಚಾರವಾಗಿದ್ದು, ಮಾಸ್ಕೋದಲ್ಲಿ ನಡೆದ ಭಾಷಣ ಒಂದರಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.
ಮಾಸ್ಕೋ ಮೂಲದ ಥಿಂಕ್ ಟ್ಯಾಂಕ್, ವಾಲ್ಡೈ ಡಿಸ್ಕಷನ್ ಕ್ಲಬ್ಗೆ ವಾರ್ಷಿಕ ಭಾಷಣದ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ದೇಶದ ದೇಶಭಕ್ತ’ ಎಂದು ಕೊಂಡಾಡಿ, ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸುತ್ತಾ ಭವಿಷ್ಯವು ಭಾರತಕ್ಕೆ ಸೇರಿದ್ದು ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ. ಅವರ ‘ಮೇಕ್ ಇನ್ ಇಂಡಿಯಾ’ ಕಲ್ಪನೆಯು ಆರ್ಥಿಕವಾಗಿ ಮತ್ತು ನೈತಿಕವಾಗಿ ಮುಖ್ಯವಾಗಿದೆ.
ಭವಿಷ್ಯವು ಭಾರತಕ್ಕೆ ಸೇರಿದ್ದು, ಇದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಆ ಬಗ್ಗೆ ಹೆಮ್ಮೆಪಡಬಹುದು, ಅಷ್ಟೇ ಅಲ್ಲದೆ ಭಾರತದಲ್ಲಾಗಿರುವ ಅಗಾಧವಾದ ಅಭಿವೃದ್ಧಿಗೆ ಸಂಬಂಧಿಸಿರುವ ಫಲಿತಾಂಶಗಳು ಜಾಗತಿಕವಾಗಿ ದೇಶದ ಬಗ್ಗೆ ಗೌರವ ಮತ್ತು ಅಭಿಮಾನ ಮೂಡಲು ಕಾರಣ ಎಂದು ಪುಟಿನ್ ಹೇಳಿದ್ದಾರೆ.“
ಭಾರತವು ಬ್ರಿಟಿಷ್ ವಸಾಹತು ಪ್ರದೇಶದಿಂದ ಆಧುನಿಕ ರಾಜ್ಯಕ್ಕೆ ತನ್ನ ಅಭಿವೃದ್ಧಿಯಲ್ಲಿ ಅತ್ಯುತ್ತಮವಾದ ಪ್ರಗತಿಯನ್ನು ಸಾಧಿಸಿದೆ. ಸುಮಾರು 1.5 ಶತಕೋಟಿ ಜನರು ಮತ್ತು ಉತ್ತಮವಾದ ಅಭಿವೃದ್ಧಿಯ ಫಲಿತಾಂಶಗಳು ಭಾರತದ ಬಗ್ಗೆ ಪ್ರತಿಯೊಬ್ಬರಿಗಿರುವ ಗೌರವ ಮತ್ತು ಮೆಚ್ಚುಗೆಗೆ ಕಾರಣವಾಗಿದೆ, ”ಎಂದು ಹೊಗಳಿದ್ದಾರೆ.
ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯ ವಿಶೇಷವಾಗಿದ್ದು, ಈ ಎರಡು ದೇಶಗಳು ಯಾವಾಗಲೂ ಪರಸ್ಪರ ಬೆಂಬಲಿಸುತ್ತವೆ. ಹಾಗೇ ಭವಿಷ್ಯದಲ್ಲಿಯೂ ಇದು ಮುಂದುವರೆಯುತ್ತದೆ.
ಭಾರತದ ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ರಸಗೊಬ್ಬರಗಳ ಪೂರೈಕೆಯನ್ನು ಹೆಚ್ಚಿಸುವಂತೆ ಪ್ರಧಾನಿ ಮೋದಿ ಕೇಳಿಕೊಂದಿದ್ದಾರೆ. ಅಲ್ಲದೆ, ಎರಡೂ ರಾಷ್ಟ್ರಗಳ ನಡುವಿನ ಈ ವಲಯದ ವ್ಯಾಪಾರ-ವಹಿವಾಟುಗಳು ಸುಮಾರು ದ್ವಿಗುಣಗೊಂಡಿದೆ ಎಂದು ಹೇಳಿದ್ದಾರೆ.
ಉಕ್ರೇನ್ನಲ್ಲಿ ನಡೆದ ತನ್ನ ‘ವಿಶೇಷ ಸೇನಾ ಕಾರ್ಯಾಚರಣೆ’ ಬಗ್ಗೆ ಮಾತನಾಡಿದ ಪುಟಿನ್, ಪಾಶ್ಚಿಮಾತ್ಯ ಪ್ರಪಂಚದ ನಾಯಕರು ಜಾಗತಿಕ ಪ್ರಾಬಲ್ಯಕ್ಕಾಗಿ ‘ಕೊಳಕು ಆಟ’ಗಳನ್ನು ಆಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪಾಶ್ಚಿಮಾತ್ಯರು ಬಹುಧ್ರುವೀಯ ಜಗತ್ತು ಎಂದು ಅರ್ಥಮಾಡಿಕೊಳ್ಳಬೇಕು ಮತ್ತು ‘ಬಹುಧ್ರುವ ಜಗತ್ತಿನಲ್ಲಿ ಹೊಸ ಶಕ್ತಿ ಕೇಂದ್ರಗಳು ಹೊರಹೊಮ್ಮುತ್ತವೆ’ ಮತ್ತು ಪಶ್ಚಿಮವು ಇತರ ರಾಷ್ಟ್ರಗಳನ್ನು ಸಮಾನವಾಗಿ ಪರಿಗಣಿಸಬೇಕಾಗುತ್ತದೆ ಎಂದು ಹೇಳಿದ್ದು, ಪ್ರಪಂಚದ ಮೇಲಿನ ಅಧಿಕಾರವನ್ನು ಪಶ್ಚಿಮವು ಆಡುವ ಆಟದಲ್ಲಿ ಪಣಕ್ಕಿಟ್ಟಿದೆ.
ಈ ಆಟವು ಖಂಡಿತವಾಗಿ ಅಪಾಯಕಾರಿಯೂ ಹೌದು ಹಾಗೇ ರಕ್ತಸಿಕ್ತವಾಗಿದೆ ಮತ್ತು ನಾನು ಅದನ್ನು ಕೊಳಕು ಎಂದು ಕರೆಯುತ್ತೇನೆ, ”ಎಂದು ಪುಟಿನ್ ಹೇಳಿದ್ದಾರೆ.