ಅರೆ ಬೆತ್ತಲಾಗಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಕಾರ್ಯಕರ್ತೆ ವಿರುದ್ಧ ತಾಯಿಯೇ ದೂರು ದಾಖಲಿಸಿದ ಘಟನೆ|

ಹೆತ್ತ ತಾಯಿಯೇ ಮಗಳ ವಿರುದ್ದ ದೂರು ದಾಖಲಿಸಿದ ಅಚ್ಚರಿಯ ಘಟನೆ ವರದಿಯಾಗಿದೆ. ಈ ಮೊದಲು ಅರೆ ಬೆತ್ತಲಾಗಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿ ವಿವಾದಕ್ಕೆ ಕಾರಣವಾಗಿದ್ದ ಅಲಪ್ಪುಳ ಕಾರ್ಯಕರ್ತೆ ರಹ್ನಾ ಫಾತಿಮಾ ವಿರುದ್ಧ ದೂರು ದಾಖಲಾಗಿದೆ.

 

ಆಕೆಯ ತಾಯಿ ಪ್ಯಾರಿ ದೂರು ದಾಖಲಿಸಲು ಅಲಪ್ಪುಳ ಉತ್ತರ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ.

ರೆಹನಾ ಫಾತಿಮಾ ಪ್ಯಾರಿ ಅವರ ಒಬ್ಬಳೇ ಮಗಳಾಗಿದ್ದು, ಪ್ಯಾರಿ ಪೋಲಿಸ್ ದೂರಿನಲ್ಲಿ ತನ್ನ ಮಗಳು ಮತ್ತು ಅಳಿಯ ಮಾನಸಿಕ ಮತ್ತು ದೈಹಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದಾರೆ ಅಷ್ಟೆ ಸಾಲದೆಂಬಂತೆ ಅಲಪ್ಪುಳದಲ್ಲಿರುವ ತನ್ನ ಸಂಬಂಧಿಕರ ಮನೆಗೆ ತೆರಳಿ ಅಲ್ಲಿಯೂ ಬೆದರಿಕೆ ಹಾಕುತ್ತಿದ್ದಾರೆ ಎಂದಿದ್ದಾರೆ.

ಎರ್ನಾಕುಲಂನಲ್ಲಿರುವ ತಮ್ಮ ಫ್ಲಾಟ್ನಲ್ಲಿ ವಾಸಿಸುತ್ತಿರುವ ಮಗಳು ಮತ್ತು ಅಳಿಯ ರೆಹನಾ ಅವರ ಮಾಜಿ ಪತಿ ಮನೋಜ್ ಕೆ ಶ್ರೀಧರ್ ನಿರಂತರವಾಗಿ ಪ್ಯಾರಿ ಅವರಿಗೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ತನಗೆ ನಿರಂತರ ಚಿತ್ರಹಿಂಸೆ ನೀಡಲಾಗಿದ್ದು ಅದನ್ನು ಸಹಿಸಲಾಗದೆ ಮನೆಯಿಂದ ಹೊರಬಿದ್ದಿದ್ದು, ಜೀವ ಬೆದರಿಕೆಯ ಭಯವು ಕೂಡ ಕಾಡುತ್ತಿದೆ ಎಂದು ಪ್ಯಾರಿ ತಿಳಿಸಿದ್ದಾರೆ.

ದೂರಿನ ಪ್ರಕಾರ, ರೆಹನಾ ಫಾತಿಮಾ ಎರಡು ತಿಂಗಳಿನಿಂದ ಅಲಪ್ಪುಳದಲ್ಲಿ ತನ್ನ ಸಂಬಂಧಿಯೊಂದಿಗೆ ನೆಲೆಸಿದ್ದು, ಅವರಿಗೂ ಪೋನ್ ಮೂಲಕ ಬೆದರಿಕೆಯೊಡ್ಡಿದ್ದಾಳೆ.

ಇನ್ನು ಮುಂದೆ ತನ್ನ ಮಗಳ ಜೊತೆ ಬಾಳುವ ಯಾವ ಆಸಕ್ತಿಯೂ ತನಗಿಲ್ಲ. ಯಾವುದೇ ಸಂದರ್ಭದಲ್ಲೂ ಅಲ್ಲಿ ವಾಸಿಸುತ್ತಿರುವ ಕುಟುಂಬ ಸದಸ್ಯರಿಗೆ ತೊಂದರೆ ಕೊಡಬಾರದು ಎಂದು ತಾಯಿ ರಹನಾ ಫಾತಿಮಾಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಪೋಲಿಸ್ ಠಾಣೆಯ ಮೆಟ್ಟಿಲೇರಿದ್ದಾರೆ.

Leave A Reply

Your email address will not be published.