ಮಕ್ಕಳನ್ನು ಯಾವಾಗ ಮಾಡ್ಕೋತೀರಾ? ಸರ್ಕಾರದಿಂದ ನವವಿವಾಹಿತರಿಗೆ ಕಾಲ್

ಗುಡ್ ನ್ಯೂಸ್’ ಇದ್ಯಾ ‘ಏನಾದ್ರೂ ವಿಶೇಷನಾ’ ಅಂತ ಹೊಸದಾಗಿ ಮದುವೆ ಆಗಿರೋರ ಹತ್ರ ಸಂಬಂಧಿಕರು, ಸ್ನೇಹಿತರು ತಮಾಷೆಗೆ ಕೇಳುತ್ತಾರೆ. ಆದರೆ ಸರ್ಕಾರವೇ ಕಾಲ್ ಮಾಡಿ ಈ ರೀತಿ ಕೇಳ್ತಾ ಇದೆ.

ಅರೆ! ಇದೇನಪ್ಪಾ ನಮ್ಮ ಸಂಸಾರದ ವಿಷಯ ಸರ್ಕಾರಕ್ಕೇಕೆ ಅಂತ ಚಿಂತಿಸಬೇಡಿ. ಚೀನಾ ಸರ್ಕಾರವು ನವವಿವಾಹಿತರಲ್ಲಿ ಯಾವಾಗ ಗರ್ಭಿಣಿಯಗುತ್ತೀರಿ? ಮಗುವಿಗೆ ಜನ್ಮ ನೀಡಲು ತಯಾರಾಗಿದ್ದೀರಾ? ಹೀಗೆಲ್ಲಾ ಪ್ರಶ್ನಿಸುತ್ತಿದೆ.

ಇದು ಒಂದೆರಡು ಜೋಡಿಗಳಿಗೆ ಕೇಳಲಾದ ಪ್ರಶ್ನೆಯಲ್ಲ. ಹಲವಾರು ಚೀನಿ ಜೋಡಿಗಳಿಗೆ ಸ್ಥಳೀಯ ಸರ್ಕಾರಿ ಕಚೇರಿಗಳಿಂದ ಫೋನ್ ಕರೆಗಳ ಮೂಲಕ ಪ್ರಶ್ನಿಸುತ್ತಿದ್ದಾರೆ.

ಚೀನಾದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನಿಂದಾಗಿ ಜನಸಂಖ್ಯೆಯಲ್ಲಿ ಏರು ಪೇರಾಗಿದೆ. ಕಿರಿಯರ ವಯಸ್ಸಿಗಿಂತಲೂ ದೇಶದಲ್ಲಿ ಹಿರಿಯರ ವಯಸ್ಸಿನವರ ಸಂಖ್ಯೆಯು ಅಧಿಕವಿದೆ.

ಅಲ್ಲದೆ ಹೆಣ್ಣು ಗಂಡುಗಳ ಅನುಪಾತದಲ್ಲಿ ಅಘಾದ ವ್ಯತ್ಯಾಸ ಕಂಡುಬಂದಿದೆ. ಜನ ಸಂಖ್ಯೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಏರಿಳಿತವನ್ನು ಸರಿದೂಗಿಸಲು ಸರ್ಕಾರವು ಕರೆಗಳನ್ನು ಮಾಡುತ್ತಿದೆ.

ಈ ಬಗ್ಗೆ ಹಂಚಿಕೊಂಡಿರುವ ಒಬ್ಬ ನವವಿವಾಹಿತ ಮಹಿಳೆಗೆ ಮದುವೆಯಾಗಿ ಮೂರು ತಿಂಗಳು ಆಗುವಾಗಲೇ ಸರ್ಕಾರಿ ಕಚೇರಿಯು ಕರೆ ಮಾಡಿ, “ನೀವಿನ್ನು ಗರ್ಭಿಣಿಯಾಗಿಲ್ಲವೇ?, ಯಾವಾಗ ಮಗು ಪಡೆಯಲು ಬಯಸಿದ್ದೀರಿ?” ಎಂದು ಪ್ರಶ್ನೆ ಮಾಡಿದೆ.

ಮತ್ತೆ ಆರು ತಿಂಗಳ ಬಳಿಕ ” ಇನ್ನೂ ಏಕೆ ಗರ್ಭಿಣಿಯಾಗಿಲ್ಲ?, ಏಕೆ ಮಗುವಿಗೆ ಜನ್ಮ ನೀಡಲು ಮುಂದಾಗಿಲ್ಲ? ” ಎಂದು ಪ್ರಶ್ನಿಸಿದ್ದಾರೆಂದು ಚೀನಿ ಮಹಿಳೆಯು ತಿಳಿಸಿದ್ದಾರೆ.

Leave A Reply

Your email address will not be published.