ವಾಟ್ಸಪ್ ಇದ್ದರೆ ಸಾಕು| ಖಾತೆಯಲ್ಲಿ ಎಷ್ಟು ಹಣ ಇದೆ ಎಂದು ತಿಳಿಯಬಹುದು!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಖಾತೆ ಹೊಂದಿದದವರಿಗೆ ಒಂದು ಗುಡ್ ನ್ಯೂಸ್ ಇಲ್ಲಿದೆ. ಹೌದು ನೀವು ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ ಎಂದು ನಿಮ್ಮ ವಾಟ್ಸ್ ಆಪ್ ಮೂಲಕ ನೋಡಬಹುದು.
ಹೌದು ಇಂದು ಸ್ಮಾರ್ಟ್ಫೋನ್ ಬಳಸುತ್ತಿರುವವರಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಇದ್ದೇ ಇರುತ್ತದೆ . ಅಷ್ಟರ ಮಟ್ಟಿಗೆ ಮೆಟಾ ಒಡೆತನದ ಈ ಅಪ್ಲಿಕೇಶನ್ ಪ್ರಸಿದ್ದಿ ಪಡೆದಿದೆ . ಇದರ ನಡುವೆ ವಾಟ್ಸ್ ಆಯಪ್ನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (SBI) ತನ್ನ ಬಳಕೆದಾರರು ವಿಶೇಷ ಆಯ್ಕೆಯನ್ನು ಪಡೆಯಬಹುದು . ಎಸ್ಬಿಐ ವಾಟ್ಸ್ ಆಯಪ್ ಜೊತೆಗೂಡಿ ವಾಟ್ಸ್ ಆಯಪ್ ಬ್ಯಾಂಕಿಂಗ್ ಸರ್ವಿಸ್ ಅನ್ನು ಪ್ರಾರಂಭಿಸಿದ್ದು, ಈ ಮೂಲಕ ಎಸ್ಬಿಐ ಬ್ಯಾಂಕ್ ಖಾತೆ ಹೊಂದಿರುವವರು ವಾಟ್ಸ್ ಆಯಪ್ ಮೂಲಕ ತಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದನ್ನು ನೋಡಬಹುದಾಗಿದೆ .
ಈ ಬಗ್ಗೆ ಮಾಹಿತಿಯನ್ನು ಎಸ್ಬಿಐ ಸಂಸ್ಥೆ ಇತ್ತೀಚೆಗಷ್ಟೆ ತನ್ನ ಟ್ವಿಟರ್ನಲ್ಲಿ ಬರೆದುಕೊಂಡಿದ್ದು, “ನಿಮ್ಮ ಬ್ಯಾಂಕ್ ಈಗ ವಾಟ್ಸ್ ಆಯಪ್ ನಲ್ಲಿ ಲಭ್ಯವಿದೆ. ಇದೀಗ ವಾಟ್ಸ್ ಆಯಪ್ ಮೂಲಕ ನಿಮ್ಮ ಖಾತೆಯ ಹಣ ಮತ್ತು ಮಿನಿ ಸ್ಟೇಟ್ಮೆಂಟ್ ಅನ್ನು ಪಡೆಯಬಹುದು,” ಎಂದು ಬರೆದುಕೊಂಡಿದೆ.
ಎಸ್ ಬಿಐ ಬ್ಯಾಂಕ್ ಖಾತೆ ಹೊಂದಿರುವವರು ವಾಟ್ಸ್ ಆಯಪ್ ಮೂಲಕ ಹಣ ಎಷ್ಟಿದೆ ಎಂದು ನೋಡುವ ಕ್ರಮಗಳು :
• ಎಸ್ಬಿಐ ವಾಟ್ಸ್ಆಯಪ್ ಬ್ಯಾಂಕಿಂಗ್ ಸೇವೆಗಳಿಗಾಗಿ ಮೊದಲಿಗೆ ನೀವು ನಿಮ, ಖಾತೆಯನು ನೋಂದಾಯಿಸಿಕೊಳ್ಳಬೇಕು.
• ಖಾತೆ ನೋಂದಾಯಿಸಲು, ನೀವು ಬ್ಯಾಂಕ್ನಲ್ಲಿ ಕೊಟ್ಟಿರುವ 10 ಅಂಕಿಯ ಮೊಬೈಲ್ ಸಂಖ್ಯೆಯಿಂದ 917208933148 ಗೆ “SMS WAREG A/c No” ಹೀಗೆ ಟೈಪ್ ಮಾಡಿ ಕಳುಹಿಸಬೇಕು.
• ನೋಂದಣಿ ಪೂರ್ಣಗೊಂಡ ನಂತರ, +919022690226 ಸಂಖ್ಯೆಗೆ ‘Hi’ ಎಂದು ಕಳುಹಿಸಿ.
• ಆಗ Dear Customer, Welcome to SBI Whatsapp 1. ಅಕೌಂಟ್ ಬ್ಯಾಲೆನ್ಸ್, 2. ಮಿನಿ ಸ್ಟೇಟ್ಮೆಂಟ್, 3. ವಾಟ್ಸ್ ಆಯಪ್ ಬ್ಯಾಂಕಿಂಗ್ನಿಂದ ಡಿ-ರಿಜಿಸ್ಟರ್ ಮಾಡಿ ಎಂಬ ಆಯ್ಕೆ ಬರುತ್ತದೆ.
• ಟೈಮ್ ಮಾಡಿ ಸೆಂಡ್ ಕೊಡಿ. ಆಗ ನಿಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ತೋರಿಸುತ್ತದೆ.
ಜೊತೆಗೆ ವಾಟ್ಸಪ್ ನಲ್ಲಿ ವಿಶೇಷ ಫೀಚರ್ ಅಳವಡಿಸಲಾಗಿದೆ:
ವಾಟ್ಸ್ಆಯಪ್ ತನ್ನ ಡೆಸ್ಕ್ಟಾಪ್ ಬಳಕೆದಾರರಿಗಾಗಿ ಚಾಟ್ ನಲ್ಲಿ ಫೋಟೋವನ್ನು ಬ್ಲರ್ ಮಾಡಲು ಇಮೇಜ್ ಬರ್ ಎಂಬ ವಿಶೇಷ ಟೂಲ್ ನೀಡುವ ಕೆಲಸದಲ್ಲಿ ಬ್ಯುಸಿಯಾಗಿದೆ. ವಾಟ್ಸ್ಆಯಪ್ ಡೆಸ್ಕ್ಟಾಪ್ ಬೀಟಾದಲ್ಲಿ ಇದು ಕಂಡುಬಂದಿದ್ದು, ಸೂಕ್ಷ್ಮವಾದ ವಿಚಾರಗಳಲ್ಲಿ Banking Services ಎಂಬ ಮೆಸೇಜ್ ಬರುತ್ತದೆ. ಇದರಲ್ಲಿ ಆಕೌಂಟ್ ಬ್ಯಾಲೆನ್ಸ್ ತಿಳಿಯಬೇಕಾದರೆ ಒಂದನ್ನು ಫೋಟೋವನ್ನು ಬ್ಲರ್ ಮಾಡಲು ಈ ಟೂಲ್ ಸಹಾಯ ಮಾಡಲಿದೆ. ಇದರಲ್ಲಿ ಬರ್ ಸೈಜ್, ಎಫೆಕ್ಟ್ ಕೂಡ ಇರಲಿದೆ ಎಂದು ಹೇಳಲಾಗಿದೆ. ಈ ಮೂಲಕ ಅತಿ ಸೂಕ್ಷವಾದ ವಿಚಾರವನ್ನು ನೀವು ವಾಟ್ಸ್ ಆಯಪ್ನಲ್ಲಿ ಇತರರಿಗೆ ಕಳುಹಿಸುವಾಗ ಬ್ಲರ್ ಮಾಡಿ ಸೆಂಡು ಮಾಡಬಹುದು.
ವಾಟ್ಸಪ್ ಬಗೆಗಿನ ವಾಬೇಟಾಇನ್ಫೋ ವರದಿ ಪ್ರಕಾರ ವಾಟ್ಸಪ್ ತನ್ನ ಮುಂದಿನ ಅಸ್ಟೇಟ್ನಲ್ಲಿ ಮೊಬೈಲ್ ಬಳಕೆದಾರರಿಗೆ ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡುವ ಆಯ್ಕೆ ನೀಡಲಿದೆ. ಬಳಕೆದಾರರು ಇತರರಿಗೆ ಮೆಸೇಜ್ ಮಾಡುವ ಸಂದರ್ಭ ಅಕ್ಷರ ತಪ್ಪಿ ಸೆಂಡ್ ಮಾಡಿದ್ದರೆ ಪುನಃ ಅದನ್ನು ಸರಿಗೊಳಿಸಲು ಇದು ಸಹಕಾರಿ ಮಾಡಲಿದೆ. ಸದ್ಯಕ್ಕೆ ಈ ಆಯ್ಕೆ ಆಂಡ್ರಾಯ್ಡ್ ಬೇಟಾ ವರ್ಷನ್ನಲ್ಲಿ ಲಭ್ಯವಿದೆ. ಈಗಾಗಲೇ ಇರುವ ಡಿಲೀಟ್ ಫಾರ್ ಎವರಿವನ್ ಆಯ್ಕೆ ಸಂಪೂರ್ಣ ಮೆಸೇಜ್ ಅನ್ನು ಡಿಲೀಟ್ ಮಾಡುತ್ತದೆ. ಆದರೆ, ಈ ಎಡಿಟ್ ಆಯ್ಕೆಯಲ್ಲಿ ಮೆಸೇಜ್ ಅನ್ನು ಡಿಲೀಟ್ ಮಾಡುವ ಬದಲು ಅಕ್ಷರವನ್ನು ಸರಿಪಡಿಸುವುದಾಗಿದೆ ಎಂದು ವಾಬೇಟಾಇನ್ಫೋ ವರದಿಯಲ್ಲಿ ಮಾಹಿತಿ ತಿಳಿಸಿದ್ದಾರೆ.