ಟ್ವಿಟರ್ ಸಂಸ್ಥೆಗೆ ಕಾಲಿಟ್ಟ ಎಲೋನ್ ಮಸ್ಕ್ ; ಅಗರ್ವಾಲ್ ಜೊತೆಗೆ ಉನ್ನತ ಅಧಿಕಾರಿಗಳು ವಜಾ|
ಟ್ವಿಟರ್ ಬಹುಬೇಡಿಕೆಯ ಸಾಮಾಜಿಕ ಜಾಲತಾಣವಾಗಿದ್ದು, ಇದೀಗ ಮಾಲಿಕರಾದ ಎಲೋನ್ ಮಸ್ಕ್ ಇವರು ಟ್ವಿಟರ್ ಗೆ ಎಂಟ್ರಿ ಕೊಡುತ್ತಿದ್ದ ಹಾಗೇ ಭಾರತೀಯ ಮೂಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ(CEO) ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದ ಪರಾಗ್ ಅಗರ್ವಾಲ್ ರನ್ನು ಕಂಪೆನಿಯಿಂದ ವಜಾಗೊಳಿಸಲಾಗಿದೆ.
ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ ಮತ್ತು ಸಿಎಫ್ಒ ನೆಡ್ ಸೆಗಲ್ ಅವರನ್ನು ಕಂಪನಿಯಿಂದ ವಜಾ ಮಾಡಿದರ ಜೊತೆಗೆ ಕಂಪನಿಯ ಪ್ರಧಾನ ಕಚೇರಿಯಿಂದಲೂ ಅವರನ್ನು ಹೊರಹಾಕಲಾಗಿದೆ.
ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್, ಸಿಎಫ್ಒ ನೆಡ್ ಸೆಗಲ್ ಮತ್ತು ಕಾನೂನು ವ್ಯವಹಾರ-ನೀತಿ ಮುಖ್ಯಸ್ಥ ವಿಜಯ ಗಡ್ಡೆ ಅವರನ್ನು ಹೊರ ಹಾಕಿದ್ದಾರೆ ಎಂದು ಅಮೆರಿಕದ ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ನಲ್ಲಿ ನಕಲಿ ಖಾತೆಗಳ ಸಂಖ್ಯೆಯ ವಿಚಾರವಾಗಿ ತನ್ನನ್ನು ಮತ್ತು ಟ್ವಿಟರ್ ಹೂಡಿಕೆದಾರರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಎಲೋನ್ ಮಸ್ಕ್ ಆರೋಪಿಸಿದ್ದಾರೆ.
ಈ ವರ್ಷ ಟ್ವಿಟರ್ ಖರೀದಿ ಮಾಡುವುದಾಗಿ ಘೋಷಿಸಿದ್ದ ಎಲೋನ್ ಮಸ್ಕ್ ಶತಕೋಟಿಗೆ ಸೋಶಿಯಲ್ ಮೀಡಿಯಾ ಪ್ಲಾಟ್ಫಾರಂನ್ನು ಖರೀದಿಸಲು ಪ್ರಸ್ತಾಪಿಸಿದ್ದರು. ಆದರೆ ನಂತರ ಸ್ಪ್ಯಾಮ್ ಮತ್ತು ನಕಲಿ ಖಾತೆಗಳ ಕಾರಣದಿಂದಾಗಿ ಒಪ್ಪಂದ ಸ್ಥಗಿತಗೊಂಡಿತ್ತು .
ಇದಾದ ಬಳಿಕ ಎಲೋನ್ ಮಸ್ಕ್ ಒಪ್ಪಂದವನ್ನು ಮುರಿಯಲು ನಿರ್ಧರಿಸಿದ್ದರಿಂದ ಟ್ವಿಟರ್ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು.ಈ ಕುರಿತಂತೆ ಡೆಲವೇರ್ ನ್ಯಾಯಾಲಯವು ಅಕ್ಟೋಬರ್ 28 ರೊಳಗೆ ಒಪ್ಪಂದವನ್ನು ಪೂರ್ಣಗೊಳಿಸಲು ಆದೇಶ ನೀಡಿತ್ತು.
ಅಕ್ಟೋಬರ್ ಆರಂಭದಲ್ಲಿ ಎಲೋನ್ ಮಸ್ಕ್ ತನ್ನ ನಿಲುವನ್ನು ಬದಲಿಸಿ ಒಪ್ಪಂದವನ್ನು ಮತ್ತೆ ಪೂರ್ಣಗೊಳಿಸಲು ಒಪ್ಪಿಗೆ ನೀಡಿದ್ದಾರೆ.
ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಮೈಕ್ರೋ-ಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟರ್ ಅನ್ನು ಖರೀದಿಸುವ ಒಪ್ಪಂದ ಅಂತಿಮವಾಗಿದ್ದು, ಸಂಸ್ಥೆಯ 75 ಪ್ರತಿಶತದಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಿಲ್ಲ ಎಂದು ಟ್ವಿಟರ್ ಉದ್ಯೋಗಿಗಳಿಗೆ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಎಲೋನ್ ಮಸ್ಕ್, ನಾಗರಿಕತೆಯ ಭವಿಷ್ಯಕ್ಕೆ ಸಾಮಾನ್ಯ ಡಿಜಿಟಲ್ ಟೌನ್ ಸ್ಕ್ವೇರ್ ನ್ನು ಹೊಂದಲು ಮುಖ್ಯವಾಗಿದೆ, ವ್ಯಾಪಕ ಶ್ರೇಣಿಯ ನಂಬಿಕೆಗಳನ್ನು ಆರೋಗ್ಯಕರ ರೀತಿಯಲ್ಲಿ ಚರ್ಚಿಸಲು ಅನುಕೂಲವಾಗುವಂತೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಮಸ್ಕ್ ಜಾಗತಿಕವಾಗಿ ಟ್ವಿಟರ್ ಸಿಬ್ಬಂದಿಯಿಂದ ಶೇಕಡಾ 75 ಅಥವಾ 5,600 ಉದ್ಯೋಗಿಗಳನ್ನು ವಜಾ ಮಾಡಲಿದ್ದಾರೆ ಎಂದು ಈ ಹಿಂದೆ ವರದಿಯಾದ ಬೆನ್ನಲ್ಲೇ, ಸ್ಯಾನ್ ಫ್ರಾನ್ಸಿಸ್ಕೋದ ಟ್ವಿಟರ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಮಸ್ಕ್, ತಾನು ಹೆಚ್ಚಿನ ಸಿಬ್ಬಂದಿಗಳನ್ನು ವಜಾ ಮಾಡುವುದಿಲ್ಲ ಎಂದು ಉದ್ಯೋಗಿಗಳಿಗೆ ಸ್ಪಷ್ಟಪಡಿಸಿದ್ದಾರೆ.