ಮಸೀದಿ ಮೇಲೆ ಉಗ್ರರ ದಾಳಿ | 15 ಮಂದಿ ಸಾವು

Share the Article

ದಕ್ಷಿಣ ಇರಾನ್‌ನ ಪ್ರಮುಖ ಶಿಯಾ ಮುಸ್ಲಿಂ ಮಸೀದಿ ಮೇಲೆ ಬುಧವಾರ ನಡೆದ ಉಗ್ರರ ದಾಳಿಯಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ.

ಶಿರಾಜ್ ನಗರದ ಶಾ ಚೆರಾಗ್ ನಲ್ಲಿ ಸಂಜೆಯ ಪ್ರಾರ್ಥನೆಯ ಸಮಯದಲ್ಲಿ ಶಸ್ತ್ರಸಜ್ಜಿತ ಭಯೋತ್ಪಾದಕರು ನಡೆಸಿದ್ದಾರೆ.

ಈ ದಾಳಿಯಲ್ಲಿ ಕನಿಷ್ಠ 40 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮಸೀದಿಯಲ್ಲಿ ನೆರೆದಿದ್ದವರ ಮೇಲೆ ದಾಳಿಕೋರರು ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ಸ್ಥಳೀಯ ಗವರ್ನರ್ ಮೊಹಮ್ಮದ್-ಹಾದಿ ಇಮಾನಿಹ್ ತಿಳಿಸಿದ್ದಾರೆ.

Leave A Reply