PMJDY : ನಿಮ್ಮ ಜನಧನ ಖಾತೆಯಲ್ಲಿ ಜೀರೋ ಬ್ಯಾಲೆನ್ಸ್ ಇದೆಯಾ? ಹಾಗಾದರೆ 10 ಸಾವಿರ ವಿತ್ ಡ್ರಾ ಮಾಡಿ!!!
ಪ್ರಧಾನ ಮಂತ್ರಿ ಜನ ಧನ ಯೋಜನೆ ಇದೊಂದು ಜನಸೇವಾ ಯೋಜನೆಯಾಗಿದೆ ಮತ್ತು ಬಡವರ ಕಲ್ಯಾಣ ಯೋಜನೆಯಾಗಿದೆ. ಜನರಿಗೆ ಬ್ಯಾಂಕಿಂಗ್ ವ್ಯವಹಾರಗಳಾದ ಸಾಲ, ವಿಮೆ, ಪಿಂಚಣಿಗಳನ್ನು ಪಡೆಯುವ ಉದ್ದೇಶವನ್ನು ಹೊಂದಿದೆ. ಅಲ್ಲದೆ ಜನಧನ ಖಾತೆದಾರರಿಗೆ ಕೇವಲ 5000 ರೂ. ಮಾತ್ರ ಪಡೆಯುವ ಅವಕಾಶವಿತ್ತು. ಆದರೆ ಪ್ರಸ್ತುತ 10000 ದ ವರೆಗೂ ಪಡೆಯಲು ಅವಕಾಶವಿದೆ.
ಹೌದು ಪ್ರಧಾನ ಮಂತ್ರಿ ಜನ ಧನ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೂ ಹತ್ತು ಸಾವಿರ ಹಣದ ಜೊತೆಗೆ ಯಾವುದೇ ನಿರ್ಬಂಧಗಳಿಲ್ಲದೆ 2000 ರೂ. ಓವರ್ ಡ್ರಾಫ್ಟ್ ಆಗಿ ಕೂಡ ಪಡೆಯಬಹುದಾಗಿದೆ. ಆದರೆ ಎಲ್ಲರಿಗೂ ಈ ಅವಕಾಶವಿಲ್ಲ, ಇದಕ್ಕೆ ಕೆಲವೊಂದು ಷರತ್ತುಗಳು ಸಹ ಅನ್ವಯಿಸುತ್ತದೆ.
ಜನಧನ ಖಾತೆಯನ್ನು ತೆರೆದು ಕನಿಷ್ಟ ಆರು ತಿಂಗಳಾಗಿರಬೇಕು. ಇಲ್ಲವಾದಲ್ಲಿ ನಿಮಗೆ ಕೇವಲ 2000 ರೂ. ಹಣ ವಿತ್ ಡ್ರಾ ಮಾಡುವ ಅವಕಾಶವಿರುತ್ತದೆ. ಅಲ್ಲದೆ ವಯಸ್ಸಿನ ಮಿತಿಯು ಇದ್ದು, ಮೊದಲು 60 ವರ್ಷದವರೆಗೆ ಮಾತ್ರ ಇದ್ದ ವಯೋಮಿತಿಯು ಈಗ 65 ವರ್ಷಕ್ಕೆ ಏರಿಸಿದ್ದಾರೆ.
ಪ್ರಧಾನ ಮಂತ್ರಿ ಜನ ಧನ ಯೋಜನೆ (ಪಿಎಂಜೆಡಿವೈ) ಖಾತೆಯ ಮೂಲಕ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ (ಪಿಎಂಜೆಜೆಬಿವೈ), ಪ್ರಧಾನ ಮಂತ್ರಿ ಸುರಕ್ಷ ಭೀಮಾ ಯೋಜನೆ (ಪಿಎಂಎಸ್ಬಿವೈ), ಅಟಲ್ ಪಿಂಚಣಿ ಯೋಜನೆ (ಎಪಿವೈ) ಹಾಗೂ ಮೈಕ್ರೋ ಯುನಿಟ್ ಡೆವಲಪ್ಮೆಂಟ್ ಆಂಡ್ ರಿಫೈನಾನ್ಸ್ ಏಜೆನ್ಸಿ ಬ್ಯಾಂಕ್ (ಮುದ್ರಾ) ಈ ಎಲ್ಲ ಯೋಜನೆಗಳ ಮೊತ್ತವನ್ನು ಪಡೆಯಬಹುದಾಗಿದೆ.
ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಅವರ ಪ್ರಕಾರ ಪ್ರಧಾನ ಮಂತ್ರಿ ಜನ್-ಧನ್ ಯೋಜನೆ ಮೂಲಕ ಇಲ್ಲಿಯವರೆಗೆ ಸುಮಾರು 25 ಲಕ್ಷ ಕೋಟಿ ರೂಪಯಿಗಳನ್ನು ಫಲಾನುಭವಿಗಳು ಪಡೆದಿದ್ದಾರೆ ಎಂದು ಮಾಹಿತಿ ನೀಡಿರುತ್ತಾರೆ.ಒಟ್ಟಾಗಿ ಇದೊಂದು ಬಡವರ ಕಲ್ಯಾಣ ಯೋಜನೆಯಾಗಿದ್ದು, ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದೆ.