ಎಟಿಎಂ ನಲ್ಲೇ ಬಂತು ನಕಲಿ ಹಣ | ದಿಗಿಲುಗೊಂಡ ಜನ !!!
ದೀಪಾವಳಿಯ ಈ ಸಂದರ್ಭದಲ್ಲಿ ಜನರೆಲ್ಲಾ ಶಾಪಿಂಗ್ ಮಾಡಲೆಂದು ಅಂಗಡಿಗಳ ಮುಂದೆ ಮುಗಿಬೀಳುತ್ತಿದ್ದಾರೆ. ನಾವೀಗ ಮಾತಾಡಲು ಹೊರಟಿರೋದು ದೀಪಾವಳಿಯಾಗಲಿ ಅಥವ ಶಾಪಿಂಗ್ ಬಗ್ಗೆ ಅಲ್ಲ. ಶಾಪಿಂಗ್ ಮಾಡಲು ಹಣ ಬೇಕಲ್ಲ ಅದರ ಬಗ್ಗೆ. ಈಗ ಜನರೆಲ್ಲಾ ಬ್ಯಾಂಕ್ ಗೆ ಹೋಗದೆ ಹಣ ವಿತ್ ಡ್ರಾ ಮಾಡೋದು ಹಣ ಹಾಕೋದು ಎಲ್ಲವನ್ನೂ ಎಟಿಎಂನಲ್ಲೆ ಮಾಡ್ತಾರೆ. ಆದ್ರೆ ಎಟಿಎಂಯೆ ಕೈ ಕೊಟ್ಟಿದೆ.
ಹೌದು, ಶಾಪಿಂಗ್ ಗಾಗಿ ಎಟಿಎಂನಲ್ಲಿ ವಿತ್ ಡ್ರಾ ಮಾಡಿದಾಗ ಕೆಲವರಿಗೆ 200 ರೂಪಾಯಿಯ ನಕಲಿ ನೋಟುಗಳು ಹೊರ ಬಂದಿವೆ. ಅಲ್ಲದೆ ನೋಟಿನ ಮೇಲೆ ಫುಲ್ ಆಫ್ ಫನ್ನ್, ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬರೆಯಲಾಗಿತ್ತು.
ಅಮೇಥಿಯ ಮುನ್ಶಿಗಂಜ್ ರಸ್ತೆಯ ಸಬ್ಜಿ ಮಂಡಿ ಪ್ರದೇಶದ ಎಟಿಎಂ ಯಂತ್ರವೊಂದರಲ್ಲಿ ನಕಲಿ ನೋಟುಗಳು ಬರುತ್ತಿತ್ತು. ನಕಲಿ ನೋಟುಗಳನ್ನು ಕಂಡ ಜನರು ತೀವ್ರ ಆಕ್ರೋಶಗೊಂಡಿದ್ದಾರೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವರದಿಯ ಪ್ರಕಾರ ಎಟಿಎಂ ಯಂತ್ರವು ‘ಇಂಡಿಯಾ ವನ್’ ಸಂಸ್ಥೆಗೆ ಸೇರಿದೆ. ಈ ಸಂಸ್ಥೆಯು 2021ರಲ್ಲಿ ದೇಶದೆಲ್ಲೆಡೆ 3000 ಕ್ಕೂ ಹೆಚ್ಚಿನ ಮಿಷನ್ ಗಳನ್ನು ಅಳವಡಿಸಿದಿದ್ದಾರೆ. ಆದರೆ ಈ ಎಟಿಎಂ ಮಿಷನ್ ಬಳಿ ಸೆಕ್ಯೂರಿಟಿ ಗಾರ್ಡ್ ನ ವ್ಯವಸ್ಥೆ ಕೂಡ ಇರಲಿಲ್ಲ ಎಂಬ ಮಾಹಿತಿ ದೊರಕಿದೆ.
ಕಿಶನ್ ವಿಶ್ವಕರ್ಮ ಎಂಬುವವರು ಎಟಿಎಂನಿಂದ 5000 ರೂ. ವಿತ್ ಡ್ರಾ ಮಾಡಿದೆ. ಅದರಲ್ಲಿ 200 ರೂಪಾಯಿಯ ಒಂದು ನೋಟು ನಕಲಿಯಾಗಿತ್ತು. ಮತ್ತೊಬ್ಬರಿಗೂ ಇದೆ ರೀತಿಯಾಗಿದೆ. ಪೊಲೀಸರಿಗೂ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ. ಈ ನಕಲಿ ನೋಟುಗಳ ವಿಡಿಯೋವನ್ನು ಸ್ಥಳೀಯರು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಸಖತ್ ವೈರಲ್ ಆಗುತ್ತಿದೆ.
ಎಟಿಎಂನ ಈ ನಕಲಿ ನೋಟಿನಿಂದ ದೀಪಾವಳಿಯ ಮಂಪರಿನಲ್ಲಿದ್ದ ಜನರು ಒಂದು ಕ್ಷಣ ಶಾಕ್ ಆಗಿದ್ದಾರೆ.
ಅಷ್ಟಕ್ಕೂ ಎಟಿಎಂ ಮಿಷನೊಳಗೆ ಹಲವು ಬರಹಗಳ ಮುದ್ರಣವಿರುವ 200 ರೂಪಾಯಿಯ ನೋಟನ್ನಿಟ್ಟದ್ದಾದರು ಯಾರು? ಎಂಬ ಪ್ರಶ್ನೆಗೆ ಮುಂದೆ ಉತ್ತರ ಸಿಗಬೇಕಿದೆ.