New FD Rates : ಎಚ್ ಡಿಎಫ್ ಸಿ, ಆಯಕ್ಸಿಸ್,ಐಸಿಐಸಿಐ,ಎಸ್ ಬಿಐ ಬ್ಯಾಂಕುಗಳ ಪರಿಷ್ಕೃತ ಬಡ್ಡಿ ದರದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!
ಈಗಾಗಲೇ ಹಣ ಉಳಿತಾಯ ಮಾಡಲು ಹಲವಾರು ಬ್ಯಾಂಕ್ ಗಳು ಇವೆ. ಅಂದರೆ ಸರ್ಕಾರಿ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕ್ ಗಳು ಹತ್ತು ಹಲವಾರು ಇವೆ. ಆದರೆ ಉಳಿತಾಯ ಮತ್ತು ಠೇವಣಿ ಮೊತ್ತಗಳಿಗೆ ನೀಡುವ ಬಡ್ಡಿದರ ಬ್ಯಾಂಕ್ ನಿಂದ ಬ್ಯಾಂಕ್ ಗೆ ವ್ಯತ್ಯಾಸ ಇರಬಹುದು.
ಹಾಗೆಯೇ ಆಯಕ್ಸಿಸ್, ಎಚ್‌ಡಿಎಫ್‌ಸಿ, ಐಸಿಐಸಿಐ, ಎಸ್‌ಬಿಐ ಬ್ಯಾಂಕ್ ಗಳು ಇತ್ತೀಚೆಗಷ್ಟೇ ಸ್ಥಿರ ಠೇವಣಿ ಮೇಲಿನ ಬಡ್ಡಿ ದರವನ್ನು ಪರಿಷ್ಕರಣೆ ಮಾಡಿದ್ದು, ತುಸು ಹೆಚ್ಚಳ ಮಾಡಿದ ಮಾಹಿತಿ ದೊರೆತಿದೆ.
ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೆಪೊ ದರ (repo rate) ಹೆಚ್ಚಿಸಿದ ಬೆನ್ನಲ್ಲೇ ವಿವಿಧ ಬ್ಯಾಂಕ್‌ಗಳು ಹಲವು ವಿಧದ ಠೇವಣಿಗಳ ಬಡ್ಡಿ ದರವನ್ನೂ ಹೆಚ್ಚಿಸಿದೆ.
ಆರ್‌ಬಿಐ ಮೇ ತಿಂಗಳ ಬಳಿಕ ಒಟ್ಟಾರೆಯಾಗಿ ರೆಪೊ ದರವನ್ನು 190 ಮೂಲಾಂಶಗಳಷ್ಟು ಹೆಚ್ಚಳ ಮಾಡಿದೆ. ಹೀಗಾಗಿ ವಿವಿಧ ಬ್ಯಾಂಕ್‌ಗಳು ಸಹ ಅನೇಕ ವಿಧದ ಠೇವಣಿ ಮತ್ತು ಸಾಲದ ಮೇಲಿನ ಬಡ್ಡಿ ದರವನ್ನು ಪರಿಷ್ಕರಿಸಿವೆ.
ಆಯಕ್ಸಿಸ್, ಎಚ್‌ಡಿಎಫ್‌ಸಿ, ಐಸಿಐಸಿಐ, ಎಸ್‌ಬಿಐ ಬ್ಯಾಂಕ್ ಗಳು ಇತ್ತೀಚೆಗಷ್ಟೇ ಸ್ಥಿರ ಠೇವಣಿ (Fixed deposits) ಮೇಲಿನ ಬಡ್ಡಿ ದರವನ್ನು ಪರಿಷ್ಕರಣೆ ಮಾಡಿದ್ದು, ತುಸು ಹೆಚ್ಚಳ ಮಾಡಲು ನಿರ್ಧರಿಸಿವೆ. ಇದರಿಂದ ಎಫ್‌ಡಿ ಹೂಡಿಕೆ ಮಾಡುವವರಿಗೆ ಅನುಕೂಲವಾಗಲಿದೆ. ಈ ಬ್ಯಾಂಕ್‌ಗಳ ಎಫ್‌ಡಿ ಬಡ್ಡಿ ದರ ವಿವರ ಇಲ್ಲಿ ನೀಡಲಾಗಿದೆ.
ಆಯಕ್ಸಿಸ್ ಬ್ಯಾಂಕ್ ಎಫ್‌ಡಿ ಬಡ್ಡಿ ದರ:
• ಆಯಕ್ಸಿಸ್ ಬ್ಯಾಂಕ್ ಎಫ್‌ಡಿ ಬಡ್ಡಿ ದರವನ್ನು ಇತ್ತೀಚೆಗೆ ಪರಿಷ್ಕರಿಸಿದ್ದು, ಅಕ್ಟೋಬರ್ 14ರಿಂದ ಜಾರಿಗೆ ಬಂದಿದೆ. 7 ದಿನಗಳಿಂದ 10 ವರ್ಷದ ಅವಧಿಯ ವರೆಗಿನ ಎಫ್‌ಡಿಗೆ ವಿವಿಧ ಅವಧಿಗೆ ಕನಿಷ್ಠ ಶೇಕಡಾ 3.50 ಯಿಂದ ಗರಿಷ್ಠ ಶೇಕಡಾ 6.10ರ ವರೆಗೂ ಎಫ್‌ಡಿ ಬಡ್ಡಿ ದರ ಪಡೆಯಬಹುದಾಗಿದೆ.
• ಹಿರಿಯ ನಾಗರಿಕರಿಗೆ ಕನಿಷ್ಠ ಶೇಕಡಾ 3.50 ಯಿಂದ ಗರಿಷ್ಠ ಶೇಕಡಾ 6.85ರ ವರೆಗೂ ಬಡ್ಡಿ ದೊರೆಯಲಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಎಫ್‌ಡಿ ಬಡ್ಡಿ ದರ:
• ಎಚ್‌ಡಿಎಫ್‌ಸಿ ಬ್ಯಾಂಕ್ ಎಫ್‌ಡಿ ಬಡ್ಡಿ ದರವನ್ನು 75 ಮೂಲಾಂಶಗಳ ವರೆಗೆ ಹೆಚ್ಚಿಸಿದೆ. ಇದು ಅಕ್ಟೋಬರ್ 11ರಿಂದ ಜಾರಿಗೆ ಬರಲಿದೆ.
• ವಿವಿಧ ಅವಧಿಯ ಎಫ್‌ಡಿಗಳಿಗೆ ಗರಿಷ್ಠ ಶೇಕಡಾ 6ರ ವರೆಗೂ ಬಡಿ ಸಿಗಲಿದೆ.
• ಹಿರಿಯನಾಗರಿಕರಿಗೆ ಗರಿಷ್ಠ ಶೇಕಡಾ 6.75ರ ಬಡ್ಡಿ ಸಿಗಲಿದೆ. 7ದಿನಗಳಿಂದ 10 ವರ್ಷಗಳ ವರೆಗಿನ ವಿವಿಧ ಅವಧಿಯ ಎಫ್‌ಡಿ ಹೂಡಿಕೆ ಅವಕಾಶವನ್ನು ಬ್ಯಾಂಕ್ ನೀಡಿದೆ.
ಐಸಿಐಸಿಐ ಬ್ಯಾಂಕ್ ಎಫ್‌ಡಿ ಬಡ್ಡಿ ದರ:
• ಐಸಿಐಸಿಐ ಬ್ಯಾಂಕ್ ಕೂಡ ಇತ್ತೀಚೆಗೆ ಎಫ್‌ಡಿ ಬಡ್ಡಿ ದರವನ್ನು ಪರಿಷ್ಕರಿಸಿದ್ದು, ಸಾಮಾನ್ಯ ಗ್ರಾಹಕರ ವಿವಿಧ ಅವಧಿಯ ಎಫ್‌ಡಿಗಳಿಗೆ ಕನಿಷ್ಠ ಶೇಕಡಾ 3ರಿಂದ ಗರಿಷ್ಠ ಶೇಕಡಾ 6.20ರ ವರೆಗೂ ಬಡ್ಡಿ ನೀಡುತ್ತಿದೆ.
• ಹಿರಿಯ ನಾಗರಿಕರ ವಿವಿಧ ಅವಧಿಯ ಎಫ್‌ಡಿಗಳಿಗೆ ಕನಿಷ್ಠ ಶೇಕಡಾ 3.50 ಯಿಂದ ಗರಿಷ್ಠ ಶೇಕಡಾ 6.75ರ ವರೆಗೂ ಬಡ್ಡಿ ನೀಡುತ್ತಿದೆ. 7 ದಿನಗಳಿಂದ 10 ವರ್ಷಗಳ ಅವಧಿಯ ಎಫ್‌ಡಿಗಳು ಇದರಲ್ಲಿ ಸೇರಿವೆ.
ಎಸ್‌ಬಿಐ ಎಫ್‌ಡಿ ಬಡ್ಡಿ ದರ:
• ಎಸ್‌ಬಿಐ ಇತ್ತೀಚೆಗೆ ಎಫ್‌ಡಿ ಬಡ್ಡಿ ದರವನ್ನು 20 ಮೂಲಾಂಶದಷ್ಟು ಹೆಚ್ಚಿಸಿದೆ. ಸಾಮಾನ್ಯ ಗ್ರಾಹಕರ ವಿವಿಧ ಅವಧಿಯ ಎಫ್‌ಡಿಗೆ ಕನಿಷ್ಠ ಶೇಕಡಾ 3ರಿಂದ ಗರಿಷ್ಠ ಶೇಕಡಾ 5.85ರ ವರೆಗೆ ಬಡ್ಡಿ ನೀಡುತ್ತಿದೆ.
• ಹಿರಿಯ ನಾಗರಿಕರಿಗೆ ಕನಿಷ್ಠ ಶೇಕಡಾ 3.50 ರಿಂದ ಗರಿಷ್ಠ ಶೇಕಡಾ 6.65ರ ವರೆಗೆ ಬಡ್ಡಿ ನೀಡುತ್ತಿದೆ. 7 ದಿನಗಳಿಂದ 10 ವರ್ಷಗಳ ಅವಧಿಯ ಎಫ್ ಡಿಗಳು ಇದರಲ್ಲಿ ಸೇರಿವೆ.