ಬಾಬಾ ವಂಗಾರ ಭವಿಷ್ಯ : ಹೊಸ ವರ್ಷಕ್ಕೆ ಕಾದಿದೆಯಾ ಭಾರತಕ್ಕೆ ಅಪಾಯ? ಭಾರೀ ಚರ್ಚೆಯಲ್ಲಿ ವಂಗಾ ಭವಿಷ್ಯವಾಣಿ!!!
2022ರಕ್ಕೆ ವಿದಾಯ ಹೇಳಿ ಹೊಸ ವರ್ಷ 2023ರನ್ನು ಸ್ವಾಗತಿಸಲು ಇನ್ನೂ ಎರಡೇ ತಿಂಗಳು ಬಾಕಿ ಉಳಿದಿದೆ. ಈ ವರ್ಷಾಂತ್ಯದ ಸನ್ನಿಹಿತವಾಗಿದ್ದಂತೆ ಬಲ್ಗೇರಿಯನ್ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರು ಭವಿಷ್ಯಗಳು ಜನರಲ್ಲಿ ಆತಂಕ ಹುಟ್ಟು ಹಾಕಿದೆ.
ಬಲ್ಗೇರಿಯಾದ ನಿಗೂಢ ಮಹಿಳೆ ಬಾಬಾ ವಂಗಾ, 1996ರಲ್ಲಿಯೇ ಮೃತಪಟ್ಟಿದ್ದರು. ಸ್ತನ ಕ್ಯಾನ್ಸರ್‌ಗೆ ಬಲಿಯಾದ ಅವರಿಗೆ ಬಾಲ್ಯದಿಂದಲೂ ಕಣ್ಣುಗಳೂ ಕಾಣಿಸುತ್ತಿರಲಿಲ್ಲ. ಆದರೆ ಜಗತ್ತಿನಲ್ಲಿ 51ನೇ ಶತಮಾನದವರೆಗೂ ಏನೇನು ಸಂಭವಿಸಲಿದೆ ಎನ್ನುವುದನ್ನು ಕಂಡುಕೊಂಡಿದ್ದಾರೆ ಎನ್ನಲಾಗಿದೆ. 5079ನೇ ಇಸವಿಯವರೆಗೆ ಜಗತ್ತಿನಲ್ಲಿ ಏನೇನು ಸಂಭವಿಸಲಿದೆ ಎಂಬುದನ್ನು ಬಾಬಾ ವಂಗಾ ಮೊದಲೇ ತಿಳಿಸಿದ್ದಾರೆ.
ಇವರು ನುಡಿದಿರುವ ಹೆಚ್ಚಿನ ಭವಿಷ್ಯಗಳು ನಿಜವಾಗಿದ್ದು, ಚೆರ್ನೋಬಿಲ್ ದುರಂತ, ರಾಜಕುಮಾರಿ ಡಯಾನಾ ಸಾವು ಮತ್ತು ಸೋವಿಯತ್ ಯೂನಿಯನ್ ವಿಸರ್ಜನೆ ಸೇರಿದಂತೆ ಶೇ. 85 ರಷ್ಟು ಭವಿಷ್ಯವಾಣಿಗಳು ಹೇಳಿದಂತೆ ಆಗಿರುವುದರಿಂದ ಸುಮಾರು 111 ವರ್ಷಗಳ ಹಿಂದೆ 2022ನೇ ಇಸವಿ ಬಗ್ಗೆ ವಂಗಾ ಬಾಬಾ ಅವರು ನುಡಿದಿರುವ ಭಯಾನಕ ಭವಿಷ್ಯದಿಂದ ಇನ್ನೇನೂ ಕಾದಿದೆಯೋ ಎಂಬ ಅತಂಕ, ಭಯ ಜನರಲ್ಲಿ ಸೃಷ್ಟಿಯಾಗಿದೆ.
2001ರಲ್ಲಿ ಅಮೆರಿಕದ ಅವಳಿ ಕಟ್ಟಡಗಳ ಮೇಲೆ ನಡೆದ 9/11ರ ದಾಳಿಯ ಬಗ್ಗೆ ವಂಗಾ ಭವಿಷ್ಯ ಹೇಳಿದ್ದರು. ಅದು ನಿಜವೂ ಆಗಿತ್ತು. ಇದೀಗ, 2022ರ ಎರಡು ಭವಿಷ್ಯವಾಣಿಗಳು ನಿಜವಾಗಿವೆ.
ಮೊದಲನೆಯದಾಗಿ, ಆಸ್ಟ್ರೇಲಿಯಾದ ಕೆಲವು ಪ್ರದೇಶಗಳಲ್ಲಿ ಪ್ರವಾಹದ ಮುನ್ಸೂಚನೆ ಬಗ್ಗೆ ಹೇಳಿದಂತೆ ಆಸ್ಟ್ರೇಲಿಯಾದ ಪೂರ್ವ ಕರಾವಳಿಯು ಈ ವರ್ಷದ ಆರಂಭದಲ್ಲಿ ಅತಿಯಾದ ಮಳೆಯ ಪರಿಣಾಮವಾಗಿ ಗಮನಾರ್ಹವಾದ ಪ್ರವಾಹವನ್ನು ಎದುರಿಸಿತ್ತು.
ಎರಡನೆಯದು ಪ್ರಮುಖ ನಗರಗಳಲ್ಲಿ ಬರ ಮತ್ತು ನೀರಿನ ಕೊರತೆ ಇರುತ್ತದೆ ಎಂದಿದ್ದು, ಅವರು ಭವಿಷ್ಯ ನುಡಿದಂತೆ ಸಮಯ ಮತ್ತು ಸ್ಥಳವನ್ನು ನಿರ್ದಿಷ್ಟಪಡಿಸದಿದ್ದರೂ, ಈ ಮುನ್ಸೂಚನೆಯು ಪ್ರಸ್ತುತ ಯುರೋಪಿನಾದ್ಯಂತ ನಿಜವಾಗುವ ಲಕ್ಷಣಗಳು ಕಂಡುಬರುತ್ತಿವೆ.
ಬಾಬಾ ವಂಗಾ ಅವರು ಖಗೋಳದಲ್ಲಿ ಅತಿದೊಡ್ಡ ಘಟನೆಯೊಂದು ನಡೆಯಲಿದೆ ಎಂದು ಹೇಳಿದ್ದು, 2023ರಲ್ಲಿ ಭೂಮಿಯ ಕಕ್ಷೆಯು ಕೆಲವು ರೀತಿಯಲ್ಲಿ ಬದಲಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಈ ಘಟನೆಯಿಂದ ಭೂಮಿಯ ಮೇಲೆ ಹಲವಾರು ಬದಲಾವಣೆಗಳು ಉಂಟಾಗಿ, ದುರಂತಗಳು ಸಂಭವಿಸಲಿದೆ. ಏಕೆಂದರೆ ಗ್ರಹಗಳ ಸಣ್ಣ ಹೊಂದಾಣಿಕೆಯು ಸಹ ಅನಗತ್ಯ ಮತ್ತು ಗಂಭೀರವಾದ ವಿನಾಶಕಾರಿ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಭವಿಷ್ಯವಾಣಿ ನುಡಿದಿದ್ದಾರೆ.
ಇದರ ಜೊತೆಗೆ 2028ರಲ್ಲಿ ಶುಕ್ರ ಗ್ರಹಕ್ಕೆ ಗಗನಯಾತ್ರಿ ಭೇಟಿ ನೀಡಲಿದ್ದಾರೆ ಎಂದು ಕೂಡ ಹೇಳಿದ್ದಾರೆ. ಭಾರತದ ವಿಚಾರವಾಗಿ ಬಂದರೆ, 2022ರಲ್ಲಿ ಮಿಡತೆ ದಾಳಿ ಮತ್ತು ಹಸಿವಿನ ಬಗ್ಗೆ ಭವಿಷ್ಯವಾಣಿ ನುಡಿದಿದ್ದರು.
2022 ರಲ್ಲಿ ಪ್ರಪಂಚದಾದ್ಯಂತ ತಾಪಮಾನದ ಕುಸಿತದ ನಂತರ ಮಿಡತೆಗಳ ಏಕಾಏಕಿ ಹೆಚ್ಚಾಗುತ್ತದೆ. ಭಾರತವು ಮಾರಣಾಂತಿಕ ಮಿಡತೆ ದಾಳಿಯನ್ನು ಎದುರಿಸಲಿದೆ. ಮಿಡತೆಗಳಿಂದ ಬೆಳೆಗಳು ನಾಶವಾಗುವುದರಿಂದ ರಾಷ್ಟ್ರವ್ಯಾಪಿ ಕ್ಷಾಮಕ್ಕೆ ಕಾರಣವಾಗಬಹುದು ಎಂಬ ಭವಿಷ್ಯವಾಣಿ ನುಡಿಯಲಾಗಿದ್ದು, ಇನ್ನು ಎರಡು ತಿಂಗಳು ಬಾಕಿ ಇರುವಾಗ ಆಕೆಯ ಭವಿಷ್ಯ ನಿಜವಾಗಲಿದೆಯೆ ಎಂಬ ಭಯ ಜನರಲ್ಲಿ ಹುಟ್ಟು ಹಾಕಿದೆ.