ಕಾರು ಚಾಲನೆಯಲ್ಲಿಯೇ ವ್ಯಕ್ತಿ ಮಹಿಳೆಯ ಜೊತೆ ಸೆಕ್ಸ್ ಮಾಡುತ್ತಿದ್ದ | ಇದನ್ನು ನೋಡಿದ ಪೊಲೀಸರು ದಂಡ ಹಾಕಿದ್ರು | ಸೆಕ್ಸ್ ಮಾಡಿದ್ದಕ್ಕಾ? ಅಲ್ಲ…ವಿಷಯ ಇಲ್ಲಿದೆ

ಸಂಚಾರಿ ನಿಯಮಗಳನ್ನು ಪಾಲಿಸದೆ ಗಾಳಿಗೆ ತೂರಿ ಬೇಕಾಬಿಟ್ಟಿ ವಾಹನಗಳನ್ನು ಚಲಾಯಿಸಿ ದಂಡ ಕಟ್ಟಿ ಮನೆಗೆ ತೆರಳುವ ಪ್ರಕರಣಗಳೂ ದಿನಾ ವರದಿಯಾಗುತ್ತಲೇ ಇರುತ್ತವೆ.

 

ಪೋಲೀಸರು ಗಲ್ಲಿ ಗಲ್ಲಿಗಳಲ್ಲಿ ನಿಂತು ರೂಲ್ಸ್ ಫಾಲೋ ಮಾಡಲು ಹೇಳಿದರೂ ಕ್ಯಾರೇ ಎನ್ನದೆ ಅಪಾಯಕ್ಕೆ ಎಡೆ ಮಾಡಿಕೊಡುವ ಘಟನೆಗಳು ಹೆಚ್ಚು ನಡೆಯುತ್ತಿವೆ.

ಕಾರಿನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಮಹಿಳೆಯ ಜತೆ ಸೆಕ್ಸ್​ನಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಪೊಲೀಸರು ದಂಡ ವಿಧಿಸಿದ್ದಾರೆ.

ಅರೇ!!! ಇದೇನಪ್ಪಾ !!! ಮಹಿಳೆಯೊಂದಿಗೆ ಸೆಕ್ಸ್ ಮಾಡಿದಕ್ಕೆ ದಂಡ ವಿಧಿಸಿದ್ದಾರಾ?? ಎಂದು ಅಚ್ಚರಿಯಾಗಬಹುದು. ಆದರೆ!! ಪೋಲೀಸರು ದಂಡ ವಿಧಿಸಿದ್ದು ನಿಜವೇ ಆಗಿದ್ದರೂ ಕೂಡ ಕಾರಣ ಸೆಕ್ಸ್​ ಮಾಡುತ್ತಿದ್ದುದ್ದಕ್ಕಾಗಿ ಅಲ್ಲ ಬದಲಿಗೆ ಆತ ಆ ಸಮಯದಲ್ಲಿ ಸೀಟ್​ ಬೆಲ್ಟ್​ ಧರಿಸಲಿಲ್ಲ ಎಂಬ ಕಾರಣಕ್ಕಾಗಿ!!!

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಹೆದ್ದಾರಿಯಲ್ಲಿ ಇಂಥದ್ದೊಂದು ವಿಚಿತ್ರ ಘಟನೆ ನಡೆದಿದ್ದು, ಅಮನ್​ ಎಂಬಾತನಿಗೆ ಪೊಲೀಸರು £600 (ಅಂದಾಜು ರೂ. 56,000) ದಂಡ ವಿಧಿಸಿದ ಘಟನೆ ನಡೆದಿದೆ.

ಈತ ಸೀಟ್​ ಬೆಲ್ಟ್​ ಧರಿಸದೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಹಾಗಾಗಿ, ದಂಡ ವಿಧಿಸಲಾಗಿದೆ.ಈ ರೀತಿ ಕಾರು ಚಾಲನೆ ಮಾಡುತ್ತಲೇ ಸೀಟ್​ಬೆಲ್ಟ್​ ಧರಿಸದೇ ಇರುವುದು ಪ್ರಾಣಕ್ಕೆ ಅಪಾಯಕಾರಿಯಾಗಿದ್ದು, ಹಾಗಾಗಿ, ದಂಡ ವಿಧಿಸಿರುವುದಾಗಿ ಆಸ್ಟ್ರೇಲಿಯಾ ಪೊಲೀಸರು ಹೇಳಿದ್ದು, ಪ್ರಯಾಣಿಕರ ಸುರಕ್ಷತೆ ಆದ್ಯ ಕರ್ತವ್ಯವಾಗಿದೆ ಎಂಬುದನ್ನು ಪೋಲೀಸರು ನಿರೂಪಿಸಿದ್ದಾರೆ.

ಹೆದ್ದಾರಿಯ ಒಂದೆಡೆಯಿಂದ ಬರುತ್ತಿರುವಾಗಲೇ ಮತ್ತೊಂದು ಕಡೆಯಲ್ಲಿನ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಆತ ಬರುತ್ತಿದ್ದ ವೇಳೆಯೇ ಪೊಲೀಸರು ದಂಡ ವಿಧಿಸಿದ್ದಾರೆ.

ಬಳಿಕ ಜನರಿಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ, ಇದರ ವಿಡಿಯೋ ಹರಿಬಿಡಲಾಗಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಸಿಬಿಸಿ ದೃಶ್ಯಗಳು ವೈರಲ್ ಆಗಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ.

ವಾಹನ ಚಾಲನೆ ಮಾಡುವಾಗ ಜಾಗ್ರತೆ ವಹಿಸುವ ಜೊತೆಗೆ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಮರೆಯದಿರಿ…

Leave A Reply

Your email address will not be published.