ಆನ್‍ಲೈನ್‍ನಲ್ಲಿ ಸ್ವೀಟ್ ಆರ್ಡರ್ ಮಾಡಲು ಹೋಗಿ, ಕಹಿ ಉಂಡ ಮಹಿಳೆ, 2 ಲಕ್ಷ ರೂ. ಪಂಗನಾಮ !

ದೀಪಾವಳಿ ಹಬ್ಬದ ಸಂಭ್ರಮವನ್ನು ಆಚರಿಸಲು ಆನ್‍ಲೈನ್‍ನಲ್ಲಿ ಸ್ವೀಟ್ ಆರ್ಡರ್ ಮಾಡಲು ಹೋದ ಮಹಿಳೆಯೊಬ್ಬಳು, ಕಹಿ ಉಂದ ಘಟನೆ ನಡೆದಿದೆ. 49 ವರ್ಷದ ಈ ಮಹಿಳೆಗೆ ಬರೋಬ್ಬರಿ 2.8 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ.

 

ಮುಂಬೈನ ಅಂಧೇರಿ ನಿವಾಸಿಯಾಗಿರುವ ಪೂಜಾ ಶಾ,.ಮೊನ್ನೆ ಭಾನುವಾರ ಫುಡ್ ಅಪ್ಲಿಕೇಶನ್‍ನಲ್ಲಿ ಸ್ವೀಟ್ ಆರ್ಡರ್ ಮಾಡಿ ಆನ್‍ಲೈನ್‍ನಲ್ಲಿ 1,000 ರೂಪಾಯಿ ಪಾವತಿಸಲು ಪ್ರಯತ್ನಿಸಿದ್ದಾರೆ. ಆದರೆ ಹಣ ಪಾವತಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಸ್ವೀಟ್ ಅಂಗಡಿಯವರ ಮೊಬೈಲ್ ನಂಬರ್ ಪಡೆದು ಸಂಪರ್ಕಿಸಿದರು. ಈ ವೇಳೆ ವ್ಯಕ್ತಿ ಪೂಜಾ ಅವರ ಕ್ರೆಡಿಟ್ ಕಾರ್ಡ್ ನಂಬರ್ ಹಾಗೂ ಓಟಿಪಿ ನಂಬರ್ ನೀಡುವಂತೆ ಕೇಳಿದ್ದಾನೆ. ನಂಬಿಕೆಯ ಆಧಾರದ ಮೇಲೆ ಮಹಿಳೆ ನಂಬರ್ ಶೇರ್ ಮಾಡಿದ್ದಾರೆ.

ಅದಾದ ಕೆಲವೇ ಕ್ಷಣಗಳಲ್ಲಿ ಮಹಿಳೆ ಖಾತೆಯಿಂದ 2,40,310 ರೂಪಾಯಿ ಹಣ ಸೋರಿ ಆಗಿದೆ. ತಕ್ಷಣ ಈ ಸಂಬಂಧ ಮಹಿಳೆ ಓಶಿವಾರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಿಂಚಿನ ವೇಗದಲ್ಲಿ ಕಾರ್ಯಪ್ರವೃತ್ತವಾದ ಪೊಲೀಸರು 2,27,205 ರೂಪಾಯಿ ಬೇರೆ ಖಾತೆಗೆ ವರ್ಗಾವಣೆಯಾಗುತ್ತಿರುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮಹಿಳೆ ತಮ್ಮ ಹಣವನ್ನು ಮರು ಪಡೆದು ಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ.

Leave A Reply

Your email address will not be published.