ಹೆಂಡತಿಯರೇ, ಗಂಡನನ್ನು ಬಯ್ಯುತ್ತೀರಾ ?, ನಿಮಗೆ ಜೈಲೂಟ – ಗಂಡಂಗೆ ಉಪವಾಸ ಫಿಕ್ಸ್ !

ಮಹಿಳೆಯರೇ ಹುಷಾರ್! ಗಂಡಂದಿರನ್ನು  ಸುಖಾಸುಮ್ಮನೆ  ನಿಂದಿಸುವಂತಿಲ್ಲ. ನಿಮ್ಮ ಬಾಯನ್ನು ಬಿಗಿ ಬಂದೋಬಸ್ತಿನಲ್ಲಿಡಿ, ಇಲ್ಲವಾದರೆ ಕಂಬಿ ಎಣಿಸುವುದು ಖಚಿತ. ನೀವೇನಾದರೂ ಗಂಡನ ಮೇಲೆ ಅನುಮಾನ ಅಥವಾ ಕೋಪಗೊಂಡು ಆತನನ್ನು ಕುಡುಕ, ಕಾಮುಕ ಅಥವಾ ಅಕ್ರಮ ಸಂಬಂಧ ಹೊಂದಿದವ ಹೀಗೆ ಸಿಕ್ಕ ಸಿಕ್ಕ ಪದಗಳಿಂದ ನಿಂದಿಸಿದರೆ ಅದು ಕ್ರೌರ್ಯಕ್ಕೆ ಸಮ. ಇದು ಶಿಕ್ಷೆಗೆ ಅರ್ಹ ಎಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ. ಒಂದು ವೇಳೆ ಪತ್ನಿ ಬಾಯಿತಪ್ಪಿ  ಈ ರೀತಿಯ ಪದಗಳನ್ನು ಬಳಸಿ ಎಡವಟ್ಟು ಮಾಡಿಕೊಂಡರೆ,  ತಾನು ಮಾಡಿರುವ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾಗದೇ ಹೋದಲ್ಲಿ  ಶಿಕ್ಷೆಗೆ ಗುರಿಯಾಗುತ್ತಾಳೆ. ಈ ವಿಚಾರವಾಗಿ ಒಬ್ಬಳು ಪತ್ನಿ ತನ್ನ ಗಂಡನಿಗೆ ನಿಂದಿಸಿ ಕೋರ್ಟ್ ನ ಮೆಟ್ಟಿಲೇರಿದ್ದಾರೆ.

 

ಪುಣೆಯ ದಂಪತಿಗಳ ವಿಚ್ಚೇದನ ಅರ್ಜಿಯನ್ನು ಕೂಲಾಂಕುಶವಾಗಿ ಪರಿಶೀಲಿಸಿದ ಬಾಂಬೆ ಹೈಕೋರ್ಟ್ ಕೆಲವು  ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಜಸ್ಟೀಸ್ ನಿತಿನ್ ಜಮ್ದಾರ್ ಹಾಗೂ ಜಸ್ಟೀಸ್ ಶರ್ಮಿಳಾ ದೇಶಮುಖ್ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ. ಪತ್ನಿಯಿಂದ ವಿಚ್ಚೇದನ ಕೋರಿ ಪತಿ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ಪುಣೆ ಕೋರ್ಟ್ ಒಪ್ಪಿಗೆ ನೀಡಿತ್ತು . ಇದನ್ನು ಪ್ರಶ್ನಿಸಿ 50 ವರ್ಷದ ಮಹಿಳೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ನಿವೃತ್ತ ಸೇನಾಧಿಕಾರಿಯ ಮೇಲೆ ಆಕೆಯು ನನ್ನ ಪತಿಯೊಬ್ಬ ಹೆಣ್ಣುಬಾಕ,ಕಾಮುಕ, ಅಕ್ರಮ ಸಂಬಂಧಗಳನ್ನು ಹೊಂದಿದ್ದಾರೆ ಅದರ ಜೊತೆಗೆ ಮದ್ಯವ್ಯಸನಿಯೂ ಹೌದು. ಇದು ನಮ್ಮ ದಾಂಪತ್ಯ ಜೀವನದ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ  ಎಂದು ಪತಿಯ ವಿರುದ್ಧ ಅರ್ಜಿಯ ಮೂಲಕ ದೂರು ನೀಡಿದ್ದಾರೆ.  ಈ ವಿಚಾರ ಬಾಂಬೆ ಹೈಕೋರ್ಟ್‌ನಲ್ಲಿ ಕಳೆದ ಕೆಲ ವರ್ಷದಿಂದ ವಿಚಾರಣೆ ನಡೆಯುತ್ತಿತ್ತು.  ಕೊನೆಗೆ ಮಹಿಳೆಯ ಅರ್ಜಿಯನ್ನು  ಬಾಂಬೇ ಹೈಕೋರ್ಟ್ ತಿರಸ್ಕರಿಸಿದೆ. ಪತಿಯ ಮೇಲೆ ಸುಖಾಸುಮ್ಮನೆ ಆರೋಪ ಮಾಡುವುದು ಕೌರ್ಯಕ್ಕೆ ಸಮವಾಗಿದೆ ಎಂದಿದೆ.

ಪತಿಯ ಚಾರಿತ್ರ್ಯದ ವಿರುದ್ಧ ಸುಳ್ಳು ಆರೋಪದಿಂದ ಆತನಿಗೆ ಸಮಾಜದಲ್ಲಿರುವ ಘನತೆ ಹಾಗೂ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ. ಅನಗತ್ಯ ಹಾಗೂ ಮಾನಹಾನಿ ಆರೋಪಗಳಿಂದ ಪತಿ ಮಾನಸಿಕ ಯಾತನೆ ಅನುಭವಿಸುವಂತೆ ಮಾಡಲಾಗಿದೆ. ಪತಿಯ ಮೇಲೆ ಮಾಡಿರುವ ಆರೋಪಗಳಿಗೆ ಪತ್ನಿ  ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಮಹಿಳೆಯ ವಾದವನ್ನು ಬಾಂಬೆ ಹೈಕೋರ್ಟ್ ತಿರಿಸ್ಕರಿಸಿತು.

ಹಾಗಾಗಿ ಹೆಂಡತಿಯರೇ ಇಂತಹ ಎಡವಟ್ಟು ಮಾಡಿಕೊಳ್ಳದೆ ಇರಿ. ಒಂದೊಮ್ಮೆ ಎಚ್ಚರ ತಪ್ಪಿದಿರೋ ನಿಮಗೆ ಜೈಲೂಟ ಖಚಿತ, ನಿಮ್ಮ ಪ್ರೀತಿಯ ಗಂಡಂದಿರಿಗೆ ಉಪವಾಸ ಫಿಕ್ಸ್. ಗಂಡಂದಿರಿಗೆ ಯಾಕ್ ಉಪವಾಸ ಅಂತೀರಾ, ನೀವಲ್ಲದೆ ಅವರಿಗೆ ಬೇರೆ ಯಾರ್ ಹೇಗ್ ಹೊತ್ತೊತ್ತಿಗೆ ಬಡ್ಸ್ ಕೊಡ್ತಾರೆ ಮೇಡಂ ?!

Leave A Reply

Your email address will not be published.