ಕಾಂತಾರ-2 ಸಿನಿಮಾದ ಪ್ರಾರಂಭ ಯಾವಾಗ ? ಗಮನ ಸೆಳೆದ ರಿಷಬ್ ಶೆಟ್ಟಿ ಹೇಳಿಕೆ !

‘ಕಾಂತಾರ’ ದೇಶವಿದೇಶಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುವ ಮೂಲಕ ಸಾಕಷ್ಟು ಸುದ್ದಿ ಮಾಡಿದೆ. ಆದರೀಗ ಕಾಂತಾರ ಪಾರ್ಟ್ 2 ಗಾಗಿ ಅಭಿಮಾನಿಗಳು ಎದುರುನೋಡುತ್ತಿದ್ದು, ನಟ, ನಿರ್ದೇಶಕರಾದ ರಿಷಬ್ ಶೆಟ್ಟಿ ಸಿನಿಮಾದ ಬಗ್ಗೆ ಮಾತನಾಡುವಾಗ ಕೊನೆಯಲ್ಲಿ ಸಿಕ್ರೇಟ್ ಒಂದನ್ನು ರಿವೀಲ್ ಮಾಡಿದ್ದಾರೆ . ಕಾಂತಾರ ಪಾರ್ಟ್ 2 ಬಗ್ಗೆ ಸಾಕಷ್ಟು ಸುದ್ದಿಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದರೀಗ ಕಾಂತಾರ ಪಾರ್ಟ್ 2 ಬಗ್ಗೆ ಹೇಳಿಕೆ ನೀಡಿ ಜನರಲ್ಲಿ ಕುತೂಹಲ ಮೂಡಿಸಿದ್ದಾರೆ. ಇಲ್ಲಿಯವರೆಗೆ ಕಾಂತಾರ ಪಾರ್ಟ್ 2 ಬರುತ್ತಾ? ಇಲ್ವಾ? ಅನ್ನೋದೇ ಪ್ರಶ್ನೆಯಾಗಿತ್ತು. ಆದರೀಗ ರಿಷಬ್ ಶೆಟ್ಟಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

 

ಎಲ್ಲರೂ ಅಚ್ಚರಿ ಪಟ್ಟು ಕೊಂಡಾಡುವಂತಹ ಚಲನಚಿತ್ರಗಳನ್ನು ನಿರ್ಮಿಸಿ ಕನ್ನಡಿಗರ ಮನೆಮಾತಾಗಿರುವ ಹೆಮ್ಮೆಯ ‘ಹೊಂಬಾಳೆ ಫಿಲಮ್ಸ್ ‘ ಸತತವಾಗಿ ಯಶಸ್ವಿ ಚಿತ್ರಗಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿ ಮೆಚ್ಚುಗೆಗೆ ಪಾತ್ರವಾಗಿದೆ. ‘ಕಾಂತಾರ’ ದೇಶ-ವಿದೇಶಗಳಲ್ಲಿ ಜನಮೆಚ್ಚುಗೆ ಗಳಿಸಿ ಊಹಿಸಲಾರದಷ್ಟು ಯಶಸ್ಸು ಕಂಡಿದೆ. ಇದೀಗ ಕಾಂತಾರ ಬಿಡುಗಡೆಯಾದ ಇಪ್ಪತ್ತೈದು ದಿನಕ್ಕೆ ಹೊಸ ದಾಖಲೆಯೊಂದನ್ನು ನಿರ್ಮಿಸಿರುವುದು, ಹೊಂಬಾಳೆ ಫಿಲಮ್ಸ್ ಯಶಸ್ಸಿನ ಮುಕುಟಕ್ಕೆ ಹೊಸ ಗರಿ ಸೇರ್ಪಡೆಯಾಗಿದೆ.

ಈವರೆಗೆ ಹೊಂಬಾಳೆ ಬ್ಯಾನರ್ ನಲ್ಲಿ ನಿರ್ಮಿಸಿದ ಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನರು ವೀಕ್ಷಿಸಿದ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕದಲ್ಲಿ 25 ದಿನಗಳಲ್ಲಿ 77 ಲಕ್ಷ ಮಂದಿ ಸಿನಿಪ್ರಿಯರು ಕಾಂತಾರವನ್ನು ಮೆಚ್ಚಿ ವೀಕ್ಷಿಸಿರುವುದು ಹೊಸ ದಾಖಲೆಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ರಿಷಬ್ ಶೆಟ್ಟಿ, ಈಗಾಗಲೇ ಕಾಂತಾರ ಸಿನಿಮಾ ಹಲವಾರು ಚಿತ್ರಮಂದಿರಗಳಲ್ಲಿ ಜನರಿಂದ ತುಂಬಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಷ್ಟೇ ಅಲ್ಲದೆ ಮತ್ತೆ ಮತ್ತೆ ಸಿನಿಮಾ ನೋಡಲು ಸಿನಿಪ್ರಿಯರು ಧಾವಿಸುತ್ತಿದ್ದಾರೆ. ಹಾಗಾಗಿ ಪಾರ್ಟ್ 2 ಕುರಿತು ಸದ್ಯಕ್ಕೆ ಏನೂ ಹೇಳಲಾರೆ , ಮುಂದೆ ನೀವೇ ನೋಡುವಿರಂತೆ ಎಂದು ಜನರ ಕುತೂಹಲವನ್ನು ಹಾಗೇ ಉಳಿಸಿದ್ದಾರೆ. ಸದ್ಯ ಏನೂ ಹೇಳಲಾರೆ ಎನ್ನುವ ಅವರ ಮಾತಿನಲ್ಲಿ ಏನೋ ಹೇಳುವೆ ಎನ್ನುವ ವಿಷಯ ಇರುವುದಂತು ಖಚಿತ. ಹಾಗಾದರೆ ಪಾರ್ಟ್ 2 ಬರಬಹುದಾ? ಇಲ್ವಾ ? ಅನ್ನೋದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

Leave A Reply

Your email address will not be published.