Ganga Kalyana Yojana: ಗಂಗಾ ಕಲ್ಯಾಣ ಯೋಜನೆ ಅರ್ಜಿ ಆಹ್ವಾನ | ಬೋರ್ ವೆಲ್ ಕೊರಿಸಲು 5 ಲಕ್ಷ ಸಹಾಯಧನ !!!

ರೈತರ ಕ್ಷೇಮಾಭಿೃವೃದ್ಧಿಗೆ ಅನೇಕ ಯೋಜನೆಗಳನ್ನು ಸರ್ಕಾರ ಈಗಾಗಲೇ ರೂಪಿಸಿದೆ. ಇದರ ನಡುವೆ ಹಿಂದುಳಿದ ವರ್ಗದ ಅಭಿವೃದ್ಧಿಗೆ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.

 

ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತದೆ. ಅದಕ್ಕಾಗಿ ಅರ್ಹತೆಯು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸೇರಿದವರಾಗಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. (ಒಕ್ಕಲಿಗ ಮತ್ತು ಅದರ ಉಪ ಜಾತಿಗಳು, ವೀರ ಶೈವ ಲಿಂಗಾಯುತ ಅದರ ಉಪ ಜಾತಿಗಳು, ಮರಾಠ ಮತ್ತು ಅದರ ಉಪ ಜಾತಿಗಳು, ಕಾಡುಗೊಲ್ಲ, ಹಟ್ಟಿಗೊಲ್ಲ ಅಲೆಮಾರಿ/ಅರೆ ಅಲೆಮಾರಿ ಸಮುದಾಯಗಳು, ಸವಿತಾ ಮತ್ತು ಅದರ ಉಪ ಜಾತಿಗಳು ಮಡಿವಾಳ ಮತ್ತು ಅದರ ಉಪ ಜಾತಿ ಈ ಜಾತಿಯನ್ನು ಹೊರತುಪಡಿಸಿದೆ).

ರೈತರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದ್ದು, ಇದೀಗ ಅರ್ಜಿ ಸಲ್ಲಿಸುವ ಅವಧಿಯನ್ನು ನವೆಂಬರ್ 5ರ ವರೆಗೆ ವಿಸ್ತರಿಸಲಾಗಿದೆ.

ಅರ್ಹ ರೈತರು ಸೇವಾಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಬೇಕು. ಅಥವಾ ನಿಗಮದ ದೂರವಾಣಿ/ ಸಹಾಯವಾಣಿ ಸಂಖ್ಯೆ 080-22374832 ಮತ್ತು 9606066389 882430040 ಸಂಪರ್ಕಿಸಬಹುದು.

ಈ ಯೋಜನೆಯ ಸೌಲಭ್ಯ ಹೀಗಿದೆ.

ವೈಯುಕ್ತಿಕ ಕೊಳವೆಬಾವಿ ಯೋಜನೆ: ಈ ಯೋಜನೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕಾಗಿದೆ.

ಉಳಿದ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಇರುವ ಕನಿಷ್ಠ 2 ಎಕರೆ ಜಮೀನು ಇರಬೇಕು.

ಘಟಕ ವೆಚ್ಚ: ರೂ.2.50ಲಕ್ಷಗಳು. ರೂ.2.00ಲಕ್ಷಗಳ ಸಹಾಯಧನ(ಸಬ್ಸಿಡಿ) ಹಾಗೂ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ರೂ.50,000/-ಗಳ ಸಾಲ 2.00ಲಕ್ಷಗಳ ಸಹಾಯಧನದಲ್ಲಿ ಕೊಳವೆ ಬಾವಿ ಕೊರೆಯುವ ವೆಚ್ಚ, ಪಂಪ್‌ಸೆಟ್ ಅಳವಡಿಕೆ ಹಾಗೂ ಪೂರಕ ಸಾಮಗ್ರಿಗಳ ಸರಬರಾಜಿಗೆ ರೂ.1.50ಲಕ್ಷಗಳ ವೆಚ್ಚ ಭರಿಸಲಾಗುವುದು.

ಕೊರೆದ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಆರ್.ಆರ್. ಸಂಖ್ಯೆ ನೀಡಿದ ನಂತರ ವಿದ್ಯುತ್ ಸರಬರಾಜು ಕಂಪನಿಗಳಿಗೆ ವಿದ್ಯುದ್ದೀಕರಣ ವೆಚ್ಚವಾಗಿ. ಪ್ರತಿ ಕೊಳವೆ ಬಾವಿಗಳಿಗೆ ರೂ.50000/-ಗಳಂತೆ ಪಾವತಿಸಲಾಗುತ್ತದೆ.

ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ವೈಯಕ್ತಿಕ ಕೊಳವೆ ಬಾವಿಯ ಘಟಕ ವೆಚ್ಚ ರೂ.4.00ಲಕ್ಷಗಳು, ಇದರಲ್ಲಿ ರೂ.3.50ಲಕ್ಷಗಳ ಸಹಾಯಧನ ಹಾಗೂ ರೂ.50000/-ಗಳ ಸಾಲವಾಗಿರುತ್ತದೆ.

ಸಾಮೂಹಿಕ ನೀರಾವರಿ ಕೊಳವೆಬಾವಿ ಯೋಜನೆ: ಪ್ರವರ್ಗ-1, 2ಎ, 3ಎ & 3ಬಿಗೆ ಸೇರಿದ ಕನಿಷ್ಠ 3 ಜನ ಸಣ್ಣ ಮತ್ತು ಅತಿಸಣ್ಣ ರೈತರು ಹೊಂದಿರುವ 8 ಎಕರೆ ಮತ್ತು ಅದಕ್ಕಿಂತ ಹೆಚ್ಚಿನ ಜಮೀನಿಗೆ ಸಾಮೂಹಿಕವಾಗಿ ನೀರಾವರಿ ಸೌಲಭ್ಯ ದೊರೆಯುತ್ತದೆ.

ಘಟಕ ವೆಚ್ಚ: 8-15 ಎಕರೆ ಜಮೀನಿಗೆ ರೂ.4.00ಲಕ್ಷಗಳ ವೆಚ್ಚದಲ್ಲಿ 2 ಕೊಳವೆಬಾವಿ ಹಾಗೂ 15 ಎಕರೆಗಿಂತ ಹೆಚ್ಚು ಜಮೀನು ಒಳಪಡುವ ಘಟಕಗಳಿಗೆ ನಿಗದಿತ ಘಟಕವೆಚ್ಚ ರೂ.6.00ಲಕ್ಷಗಳ ವೆಚ್ಚದಲ್ಲಿ 3 ಕೊಳವೆಬಾವಿಗಳನ್ನು ಕೊರೆಯಿಸಿ ಪಂಪ್‌ಸೆಟ್ ಮತ್ತು ಉಪಕರಣಗಳನ್ನು ಸರಬರಾಜು ಮಾಡುವುದು ಹಾಗೂ ವಿದ್ಯುದ್ದೀಕರಣಕ್ಕೆ ಠೇವಣಿ ಪಾವತಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯ ಒದಗಿಸುವ ಜೊತೆಗೆ ಇದು ಪೂರ್ಣ ಅನುದಾನವಾಗಿರುತ್ತದೆ.

ತೆರೆದಬಾವಿ: ವೈಯುಕ್ತಿಕ ನೀರಾವರಿ ಕೊಳವೆಬಾವಿ ಯೋಜನೆಗೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ಕರಾವಳಿ ಹಾಗೂ ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ತೆರೆದಬಾವಿ ನೀರಾವರಿ ಸೌಲಭ್ಯ ಒದಗಿಸಲು ಅವಕಾಶವಿರುತ್ತದೆ.

ಸಾಮೂಹಿಕ ಏತ ನೀರಾವರಿ ಯೋಜನೆ: ಭೂಮಟ್ಟದಲ್ಲಿ ಶಾಶ್ವತವಾಗಿ ದೊರೆಯುವ ಜಲಸಂಪನ್ಮೂಲಗಳಾದ ನದಿ, ಕೆರೆ, ಹಳ್ಳ ಇವುಗಳಿಗೆ ಮೋಟಾರ್ ಅಳವಡಿಸಿ ಪೈಪ್‌ಲೈನ್ ಮೂಲಕ ಖುಷ್ಕ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು.

ಘಟಕವೆಚ್ಚ: ಸಾಮೂಹಿಕ ನೀರಾವರಿ ಯೋಜನೆಗೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ಸೌಲಭ್ಯ ಒದಗಿಸುವುದು.

ಈ ಕಾರ್ಯಕ್ರಮಕ್ಕೆ ಆಯಾ ವಿಧಾನಸಭಾ ಕ್ಷೇತ್ರಕ್ಕೆ ನಿಗದಿಪಡಿಸಿದ ಆರ್ಥಿಕ ಗುರಿಯನ್ವಯ ಮೀಸಲಾತಿ ಅನುಪಾತ ಪ್ರವರ್ಗ-1 ಮತ್ತು 2ಎಗೆ 70% ಪ್ರವರ್ಗ-3ಎ ಮತ್ತು 3ಬಿಗೆ 30%ರಂತೆ ವೈಯಕ್ತಿಕ ಸಾಮೂಹಿಕ ನೀರಾವರಿ ಘಟಕಗಳನ್ನು ಆಯ್ಕೆ ಮಾಡಿ ಸೌಲಭ್ಯ ಒದಗಿಸಬೇಕು.

ಮರುಪಾವತಿ ಅವಧಿ: ಸಾಲದ ಮರುಪಾವತಿ ಅವಧಿ 3 ವರ್ಷವಾಗಿರುತ್ತದೆ.

ಕರ್ನಾಟಕ ಅಂತರ್ಜಲ ಅಧಿನಿಯಮದನ್ವಯ ಮೇಲೆ ತಿಳಿಸಿದ 35 ತಾಲ್ಲೂಕುಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಕೊಳವೆ ಬಾವಿ ಕೊರೆಯುವ ಮುನ್ನ ಅಂತರ್ಜಲ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕಾಗಿದೆ.

ಅನುಮತಿ ಪಡೆದಂತಹ ಫಲಾನುಭವಿಗಳ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಯಲು ಕ್ರಮವಹಿಸಬೇಕು.

1.ಬೆಂಗಳೂರು ನಗರ ಆನೇಕಲ್ ಬೆಂಗಳೂರು ಪೂರ್ವ ಬೆಂಗಳೂರು ನಗರ ,ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ.

2.ಬೆಂಗಳೂರು ಗ್ರಾಮಾಂತರ ದೇವನಹಳ್ಳಿ , ದೊಡ್ಡಬಳ್ಳಾಪುರ ,ಹೊಸಕೋಟೆ, ನೆಲಮಂಗಲ.

3.ರಾಮನಗರ ಕನಕಪುರ,ರಾಮನಗರ.

4.ತುಮಕೂರುಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ.5. ಚಿತ್ರದುರ್ಗ ಚಿತ್ರದುರ್ಗ,ಹೊಳಲ್ಕೆರೆ.

6. ಕೋಲಾರಬಂಗಾರಪೇಟೆ,ಕೋಲಾರ ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ.

7. ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು,ಗುಡಿಬಂಡೆ,ಶಿಡ್ಲಘಟ್ಟ.

8. ದಾವಣಗೆರೆ, ಜಗಳೂರು.

9.ಬೆಳಗಾವಿ, ಅಥಣಿ,ಬೈಲಹೊಂಗಲ, ರಾಮದುರ್ಗ, ಬೈಲಹೊಂಗಲ, ರಾಮದುರ್ಗ ಸವದತ್ತಿ.

10.ಬಾಗಲಕೋಟೆಬಾದಾಮಿ, ರಾಮದುರ್ಗ ಸವದತ್ತಿ.

Leave A Reply

Your email address will not be published.