ಹನಿಟ್ರಾಪ್‌ಗೆ ಬಲಿಯಾಗಿ ನೇಣು ಹಾಕಿ ಕೊಂಡರೇ ಬಸವಲಿಂಗ ಸ್ವಾಮೀಜಿ | ಯುವತಿಯನ್ನು ಛೂ ಬಿಟ್ಟು ಭೂಮಿ ಕಬಳಿಸಲು ಹೊರಟ ಮತ್ತೊಂದು ಸ್ವಾಮೀಜಿ

ಬೆಂಗಳೂರು : ರಾಮನಗರ ಜಿಲ್ಲೆಯ ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸೋಮವಾರ ಅನುಮಾನಾಸ್ಪದವಾಗಿ ಮಠದ ಪೂಜಾಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ ಪ್ರಕರಣ ಬಯಲಾಗಿತ್ತು.

 

ಸ್ವಾಮೀಜಿ ಐದು ಪುಟದ ಡೆತ್‌ನೋಟ್ ಬರೆದಿಟ್ಟಿದ್ದಾರೆ, ಆದರೆ ಪೊಲೀಸರಿಗೆ ಸಿಕ್ಕಿದ್ದು ಮೂರು ಪುಟ ಮಾತ್ರ. ಇನ್ನೆರಡು ಪುಟದಲ್ಲಿ ಹಲವು ಪ್ರಭಾವಿಗಳ ಹೆಸರು ಇದೆ. ಇದನ್ನು ನಾಶ ಮಾಡಿರುವ ಸಾಧ್ಯತೆ ಇದೆ ಎನ್ನುವ ಅನುಮಾನವಿದೆ. ತನಿಖೆ ನಡೆಯುತ್ತಿದೆ. ಈ ಡೆತ್‌ನೋಟ್ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿಬರುತ್ತಿವೆ. ಶ್ರೀ ಕಂಚುಗಲ್ ಬಂಡೇಮಠದ ಗುರು ಮಡಿವಾಳೇಶ್ವರ ಬಸವಲಿಂಗ ಸ್ವಾಮೀಜಿ ಸ್ವಾಮೀಜಿ(45) ರಾಮನಗರ ಜಿಲ್ಲೆ ಮಾಗಡಿ ತಾಲೂಕಿನಲ್ಲಿರುವ ಬಂಡೇಮಠದಲ್ಲಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮರ್ಯಾದೆಗೆ ಅಂಜಿ ಆತ್ಮಹತ್ಯೆ ಎಂದು ಉಲ್ಲೇಖಿಸಿರುವುದು ಪ್ರಕರಣದ ಬಗ್ಗೆ ಕುತೂಹಲ ಕೆರಳಿಸಿದೆ.
ಸ್ವಾಮೀಜಿ ವಿರುದ್ಧ ಹನಿಟ್ರ್ಯಾಪ್ ನಡೆದಿದ್ದು, ಡೆತನೋಟ್‌ನಲ್ಲಿ ಸಂಚಿನ ಬಗ್ಗೆ ಸ್ವಾಮೀಜಿ ಬರೆದಿದ್ದಾರೆ.

ಮಾಸ್ಟರ್ ಪ್ಲಾನ್ ಹಿಂದೆ ಇರೋ ವ್ಯಕ್ತಿ ಮತ್ತೋರ್ವ ಸ್ವಾಮೀಜಿ. ಮತ್ತೊಂದು ಮಠದ ಸ್ವಾಮೀಜಿ ತಂತ್ರಕ್ಕೆ ಬಲಿಯಾದೆ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ನನ್ನ ಮಠವನ್ನು ಕಿತ್ತುಕೊಳ್ಳಬೇಕು, ನಾನು ಅವರ ಕಂಟ್ರೋಲ್ ನಲ್ಲಿರಬೇಕು, ಇದೇ ಕಾರಣಕ್ಕೆ ಮಠಕ್ಕೆ ಆ ಸ್ವಾಮೀಜಿ ಓರ್ವ ಯುವತಿಯನ್ನು ಬಿಟ್ಟಿದ್ದರು.

ಆ ಯುವತಿಯ ಸಲುಗೆಗೆ ಮರುಳಾಗಿ ನಾನು ಹೆಣ್ಣಿನ ಮೋಹಕ್ಕೆ ಬಿದ್ದಿದ್ದೆ. ಇದನ್ನು ವಿಡಿಯೋ ಮಾಡಿ ಪ್ರತಿದಿನ ಚಿತ್ರಹಿಂಸೆ ನೀಡುತ್ತಿದ್ದರು. ಈ ಬಲೆ ಹೆಣೆದಿದ್ದು ನನಗೆ ಬೇಕಾದ ಮತ್ತೊಂದು ಮಠದ ಸ್ವಾಮೀಜಿ, ಆತನ ಗಾಳಕ್ಕೆ ಬಲಿಯಾದೆ ಎಂದು ಬಸವಲಿಂಗಶ್ರೀ ಡೆತನೋಟ್ ಬರೆದಿದ್ದಾರೆ.

ಸದ್ಯ ಡೆತ್‌ನೋಟ್, ಸ್ವಾಮೀಜಿಯ ಎರಡು ಮೊಬೈಲ್ ಸೀಜ್ ಮಾಡಲಾಗಿದ್ದು, ಕುದೂರು ಪೊಲೀಸರು FSL ಪರೀಕ್ಷೆಗೆ ಕಳಿಸಿದ್ದಾರೆ. ಮಠಕ್ಕೆ 80 ಎಕರೆಗೂ ಹೆಚ್ಚು ಜಮೀನು ಇದೆ. ಇದನ್ನು ಕಬಳಿಸುವ ಸಲುವಾಗಿ ಯುವತಿಯನ್ನು ಬಿಟ್ಟು ಸ್ವಾಮೀಜಿಯನ್ನು ಮೋಹದ ಬಲೆಗೆ ಕೆಡವಿ ಬ್ಲಾಕ್‌ಮೇಲ್ ಮಾಡಲಾಗುತ್ತಿತ್ತು ಎನ್ನಲಾಗಿದೆ.

Leave A Reply

Your email address will not be published.