ಅತೀ ಹೆಚ್ಚು ಸಂಭಾವನೆ ಪಡೆದ ಕಾಂತಾರ ನಟ!

ಕಾಂತಾರದ ಹವ ಅಂತೂ ಇನ್ನು ಕಮ್ಮಿ ಆಗೋಲ್ಲ ಅಂದ್ರು ತಪ್ಪಾಗಲ್ಲ. ಎಲ್ಲ ಸಿನಿಮಾದ ಥಿಯೇಟರ್ ಗಳಲ್ಲಿಯು ಇನ್ನೂ ಸೀಟ್ ಗಳು ತುಂಬಿ ತುಳುಕುತ್ತಾ ಇದೆ. ಇದರ ನಡುವೆಯೇ ಓ ಟಿ ಟಿ ಗೆ ಸಿನಿಮಾ ಬಿಡುವ ಯೋಜನೆಯನ್ನು ಮುಂದೂಡಲಾಗಿದೆ. ಯಾಕೆಂದ್ರೆ ಅಡೆತಡೆಗಳ ನಡುವೆ ಅಸಾಧ್ಯ ಎಂಬ ಕಾರಣದಿಂದ.

 

ಕಾಂತಾರ ಸಿನಿಮಾದಲ್ಲಿ ಈ ಹಿಂದೆ ಸಪ್ತಮಿ ಗೌಡ ಪಡೆದ ಸಂಭಾವನೆಯ ಬಗ್ಗೆ ಹೇಳಲಾಗಿತ್ತು. ಇದೀಗ ಈ ಸಿನಿಮಾದಲ್ಲಿ ಮುಖ್ಯವಾಗಿ ಕಾಣುವ ಫಾರೆಸ್ಟ್ ಆಫೀಸರ್ ಪಾತ್ರದ ಕಿಶೋರ್ ಗೆ ಎಷ್ಟು ಸಂಭಾವನೆ ಎಂದು ತಿಳಿಯೋಣ.

ಸಖತ್ ಆಗಿ ಡೈಲಾಗ್ ಹೇಳಿದ ಕಿಶೋರ್ ಇಂತಹ ಖಡಕ್ ಲುಕ್, ಪೊಲೀಸ್, ಆಫೀಸರ್ ಮತ್ತು ಪೋಷಕ ನಟನೆಗೆ ಹೇಳಿ ಮಾಡಿಸಿದ ಪೀಸ್. ಯಾಕೆಂದ್ರೆ ಅವರ ಮೈ ಕಟ್ಟು, ಧ್ವನಿ ಜೊತೆಗೆ ಖಡಕ್ ಲುಕ್ ನೋಡುಗರನ್ನು ಇವರತ್ತ ಸೆಳೆಯುತ್ತದೆ.

ಇದೀಗ ಕಾಂತಾರ ಸಿನಿಮಾದಲ್ಲಿ ಇವರಿಗೆ ದೊರೆತ ಸಂಭಾವನೆ ವಿಷಯ ಹೊರ ಬಂದಿದೆ. ಸಿನಿಮಾದಿಂದ ಇವರಿಗೆ 20 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ. ” ಇಲ್ಲಿಯ ತನಕ ಇಷ್ಟು ಸಂಭಾವನೆ ಇರುವ ಸಿನಿಮಾ ಮಾಡಿರಲಿಲ್ಲ. ರಿಷಬ್ ಗೆ ಥ್ಯಾಂಕ್ ಯು” ಅಂತ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Leave A Reply

Your email address will not be published.