BBK 9 : ಹಬ್ಬದ ದಿನದಂದು ಅಮೂಲ್ಯ ಮತ್ತು ದಿವ್ಯಾ ಅತ್ತಿದ್ದು ಯಾಕೆ?

ಎಲ್ಲೆಲ್ಲೂ ಬೆಳಕಿನ ಹಬ್ಬದ ಸಂಭ್ರಮ. ಇದೀಗ ಬಿಗ್​ ಬಾಸ್​ ಮನೆಯಲ್ಲಿಯೂ ಕೂಡ ದೀಪಾವಳಿಯ ಸಂಭ್ರಮ ಜರುಗುತ್ತಿದೆ. ಬೆಳಗ್ಗೆ ಏಳುತ್ತಲೇ “ದೀಪದಿಂದ ದೀಪವ ಹಚ್ಚಬೇಕು ಮಾನವ” ಎಂಬ ಹಾಡಿನ ಮೂಲಕ ಬಿಗ್​ ಬಾಸ್​ ಎಲ್ಲರನ್ನೂ ಎಬ್ಬಿಸಿದ್ದಾರೆ. ಇದಾದ ನಂತರ ಪ್ರತಿಯೊಬ್ಬರೂ ಎಣ್ಣೆ ಹಚ್ಚಿಕೊಂಡು, ತಲೆಗೆಲ್ಲ ಸಖತ್ತಾಗಿ ಮಸಾಜ್​ ಮಾಡಿದ್ದಾರೆ. ಗುರೂಜಿಯಂತೂ ನಾಟಿ ಶೈಲಿಯಲ್ಲಿ ಅರುಣ್ ಸಾಗರ್​ ಮತ್ತು ವಿನೋದ್​ ಗೆ ಎಣ್ಣೆ ಮಸಾಜ್​ ಮಾಡಿದ್ದಾರೆ. ಇವೆಲ್ಲಾ ಆದ ನಂತರದಲ್ಲಿ ಪ್ರತಿಯೊಬ್ಬರೂ ಸಾಂಪ್ರದಾಯಿಕವಾಗಿ ಸಿದ್ಧರಾಗಿ, ದೇವರಿಗೆ ಪೂಜೆ- ಪುನಸ್ಕಾರಗಳನ್ನೂ ಮಾಡಿದ್ದಾರೆ. ಮನೆಮಂದಿಗೆಲ್ಲಾ ಲಿವಿಸ್ಟಾ ವತಿಯಿಂದ ನಾನಾ ರೀತಿಯ ಕಾಫಿ ಪುಡಿಯನ್ನು ಉಡುಗರೆಯನ್ನು ನೀಡಿದ್ದು ಎಲ್ಲರಿಗೂ ಖುಷಿ ಆಗಿದೆ.

 

ಇವೆಲ್ಲದರ ನಡುವೆ ಟಾಸ್ಕ್​ ಕೂಡ ಇತ್ತು. ಗೆದ್ದ ತಂಡಕ್ಕೆ ಮನೆಯವರ ವತಿಯಿಂದ ಕಳಿಸಿಕೊಟ್ಟ ಗಿಫ್ಟ್ ನೀಡುವುದರಾಗಿ ಇತ್ತು. ಇದಕ್ಕಾಗಿ ಮೊದಲ ಟಾಸ್ಕ್ ನಡೆದಿದ್ದು ದಿವ್ಯಾ ಉರುಡುಗ ಮತ್ತು ದೀಪಿಕಾ ದಾಸ್​ ನಡುವಲ್ಲಿ.

ಸಾಲಲ್ಲಿ ಇಟ್ಟ ಬಾಟಲಿಗಳನ್ನು ಗನ್​ ಶಾಟ್ಸ್​ಗಳ ಮೂಲಕ ಹೊಡೆದು ಉರುಳಿಸಬೇಕು. ಆದರೆ ಈ ಗೇಮ್​ನಲ್ಲಿ ದೀಪಿಕಾ ದಾಸ್ ಹಾಗೂ ದಿವ್ಯಾ ಉರುಡಾ ಸೋಲುತ್ತಾರೆ. ದಿವ್ಯಾ ಈ ಸೋಲಿನಿಂದ ನೊಂದು, ಸೋತೆ ಎಂಬ ನೋವಿಗಿಂತ ನನ್ನಿಂದ ನನ್ನ ತಂಡದವರಿಗೆ ಗಿಫ್ಟ್​ ಮಿಸ್​ ಆಯ್ತು ಎಂಬ ಗಿಲ್ಟ್​ ಫೀಲ್​ ಕಾಡಿ ಅಳುತ್ತಾಳೆ.

ಇನ್ನು ಅಮೂಲ್ಯ ಗೌಡ ಕೂಡ ಪೌಡರ್​ ರೂಮ್​ಗೆ ಹೋಗಿ ” ಬಿಗ್​ ಬಾಸ್​ ಪ್ಲೀಸ್​ ನಮಗೆ ಆ ಗಿಫ್ಟ್​ ಬೇಡ. ಆದರೆ ಮನೆಯವರು ಏನು ಕಳಿಸಿದ್ದಾರೆ ಅಂತ ಒಂದು ಸಲ ನೋಡ್ತೀನಿ ಬಿಗ್​ ಬಾಸ್​ ಪ್ಲೀಸ್​” ಅಂತ ಬೇಡಿಕೊಳ್ಳುತ್ತಾ ತುಂಬಾ ಹೊತ್ತು ಅಳುತ್ತಾಳೆ.

Leave A Reply

Your email address will not be published.