Kantara Movie: ಕಾಂತಾರಗೆ ಸಂಕಷ್ಟ| ವರಾಹರೂಪಂ ಟ್ಯೂನ್ ಕಾಪಿ, ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್‌ನಿಂದ ಕಾನೂನು ಹೋರಾಟಕ್ಕೆ ಸಜ್ಜು

Share the Article

ಕಾಂತಾರ ಸಿನಿಮಾ ಭರ್ಜರಿ ಯಶಸ್ಸಿನತ್ತ ದಾಪುಗಾಲು ಹಾಕಿದೆ. ಎಲ್ಲೆಡೆ ತನ್ನದೇ ಹವಾ ಸೃಷ್ಟಿ ಮಾಡಿದೆ. ದೇಶಾದ್ಯಂತ ಸಿನಿಮಾ ಭಾರೀ ಭರ್ಜರಿ ಹಿಟ್ ಆಗಿದ್ದು, ಇದು ಹೊಂಬಾಳೆ (Hombale Films) ನಿರ್ಮಾಣದ ಕರ್ನಾಟಕದಲ್ಲಿ (Karnataka) ಅತ್ಯಧಿಕ ವೀಕ್ಷಿಸಲ್ಪಟ್ಟ ಸಿನಿಮಾ ಇದಾಗಿದೆ‌. ಹಾಗೆನೇ ಈ ಸಿನಿಮಾದ ಹಾಡುಗಳು ಕೂಡಾ ಸಖತ್ ಹಿಟ್ ಆಗಿದ್ದವು. ಆದರೆ ಈ ಸಿನಿಮಾದ ಫೇಮಸ್ ಹಾಡಾದ ವರಾಹ ರೂಪಂ ಹಾಡಿನ ಟ್ಯೂನ್ ಈಗ ಮತ್ತೆ ಸೌಂಡ್ ಮಾಡ್ತಿದೆ.

ಈ ಸಿನಿಮಾದಲ್ಲಿ ಅಂದು ಭುಗಿಲೆದ್ದ ಟ್ಯೂನ್ ಕಾಪಿ (Tune Copy) ವಿಚಾರ ಈಗ ಮತ್ತೆ ಸದ್ದು ಮಾಡಿದೆ. ಈ ಬಾರಿ ಸಾಂಗ್‌ನ ಒರಿಜಿನಲ್ ಟ್ಯೂನ್ ಮಾಡಿರುವ ತೈಕ್ಕುಡಂ ಬ್ರಿಡ್ಜ್ (Thaikkudam Bridge) ಕಾಂತಾರ ತಂಡದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ. ಹೌದು, ತಮ್ಮ ಟ್ಯೂನ್ ಕದ್ದಿರುವ ವಿಚಾರವಾಗಿ ಹಾಗೂ ಅದನ್ನು ಎಲ್ಲಿಯೂ ಮೆನ್ಶನ್ ಮಾಡದೆ ಇರುವ ಹಿನ್ನೆಲೆಯಲ್ಲಿ ತೈಕ್ಕುಡಂ ಬ್ರಿಡ್ಜ್ ಕಾನೂನಾತ್ಮಕವಾಗಿ (Legal action) ಈ ವಿಚಾರವನ್ನು ಎದುರಿಸಲು ಸಿದ್ಧತೆ ನಡೆಸಿದೆ. ಇದೀಗ ಈ ಬಗ್ಗೆ ತನ್ನ ಅಧಿಕೃತ ಫೇಸ್‌ಬುಕ್ (Facebook) ಪೇಜ್‌ನಲ್ಲಿ ತೈಕ್ಕುಡಂ ಬಿಡ್ಜ್ ಅಪ್ಡೇಟ್ ಮಾಡಿದೆ.

” ತೈಕ್ಕುಡಂ ಬ್ರಿಡ್ಜ್ ಯಾವುದೇ ರೀತಿಯಲ್ಲಿ ಕಾಂತಾರದೊಂದಿಗೆ ಸಂಯೋಜನೆ ಹೊಂದಿಲ್ಲ ಈ ಸಿನಿಮಾದ ಆಡಿಯೋದಲ್ಲಿ ನಮ್ಮ ಐಪಿ “ನವರಸಂ” ಮತ್ತು “ವರಾಹ ರೂಪಂ’ ನಡುವಿನ ಹೋಲಿಕೆಗಳು ಕಂಡುಬಂದಿದೆ. ಇದು ಕಾಪಿ ರೈಟ್ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ನಾವು ಇದಕ್ಕೆ ಕಾರಣವಾದ ಸೃಜನಶೀಲ ತಂಡದ ವಿರುದ್ಧ ಕಾನೂನು ಕ್ರಮವನ್ನು ಹಾಕುತ್ತೇವೆ. ಸಿನಿಮಾ ತಂಡವು ಹಾಡನ್ನು ಅವರ ಮೂಲ ಕೃತಿಯಾಗಿ ಪ್ರಚಾರ ಮಾಡಿದ್ದಾರೆ” ಎಂಬುದಾಗಿ ಬರೆಯಲಾಗಿದೆ. ಇದರಲ್ಲಿ ಹೊಂಬಾಳೆ ಫಿಲ್ಮ್ಸ್, ಅಜನೀಶ್ ಲೋಕನಾಥ್, ರಿಷಬ್ ಶೆಟ್ಟಿ ಅವರನ್ನು ಟ್ಯಾಗ್ ಮಾಡಲಾಗಿದೆ.

ಆದರೆ ಅಜನೀಶ್ ಅವರು ಈ ಹಿಂದೆ ಸ್ಪಷ್ಟನೆ ಕೊಟ್ಟು ಇದು ಕಾಪಿ ಅಲ್ಲ ಎಂದಿದ್ದರು. ಹಾಗೆಯೇ ಮ್ಯೂಸಿಕ್ ಮಾಡಿದವರೇ ಸುಮ್ಮನಿದ್ದಾರೆ ಎಂದಿದ್ದರು. ಈಗ ಮ್ಯೂಸಿಕ್ ಮಾಡಿದವರೇ ಪ್ರಶ್ನೆ ಮಾಡಿದ್ದು ಈ ವಿಚಾರ ಇನ್ನಷ್ಟು ಬೆಳವಣಿಗೆ ಕಾಣುವ ಸಾಧ್ಯತೆ ಇದೆ.

Leave A Reply