ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲಿಂದ ಬಿದ್ದ ಬೈಕ್ ಸವಾರ, ಗಂಭೀರ ಗಾಯಗೊಂಡು ಇದೀಗ ಮೃತ

ಬೆಂಗಳೂರು ನಗರದಲ್ಲಿ ಬೈಕ್ ನಲ್ಲಿ ಸಂಚರಿಸುತ್ತಿದ್ದಾಗ ಸ್ಲೈವದಿಂದ ಕೆಳಕ್ಕೆ ಬಿದ್ದು ಧಾರ್ಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ದ್ವಿಚಕ್ರ ವಾಹನ ಸವಾರರೊಬ್ಬರು ಬೈಕ್ ಅಪಘಾತದಲ್ಲಿ ಬಲಿಯಾಗಿದ್ದಾರೆ. ಘಟನೆಯು ಎಲೆಕ್ಟ್ರಾನಿಕ್ ಸಿಟಿಯ (Electronics City) ನೀಲಾದ್ರಿ ಕ್ರಾಸ್ ಬಳಿ ನಡೆದಿದೆ.

ಬೈಕ್‍ನಲ್ಲಿ ಸಂಚರಿಸುತ್ತಿದ್ದಾಗ ಫ್ಲೈಓವರ್‌ನ ತಡೆಗೊಡೆಗೆ ಗುದ್ದಿ ಫ್ಲೈಓವರ್ ಮೇಲಿಂದ ಕೆಳಕ್ಕೆ ಬಿದ್ದು ಬೈಕ್ ಸವಾರ ಸಾವು ಕಂಡಿದ್ದಾರೆ. ಆಂಧ್ರಪ್ರದೇಶ ಮೂಲದ ಕೌರಿ ನಾಗಾರ್ಜುನ (33) ಮೃತಪಟ್ಟ ದುರ್ದೈವಿ.

ಬೈಕ್ ಸವಾರ ಬೆಂಗಳೂರಿನಿಂದ ಹೊಸೂರು ಕಡೆ ತಮ್ಮ ಪಲ್ಸರ್ ಬೈಕ್‍ನಲ್ಲಿ ವೇಗವಾಗಿ ಹೊರಟಿದ್ದರು. ಎಲೆಕ್ಟ್ರಾನಿಕ್ ಸಿಟಿಯ ಹತ್ತಿರ ನೀಲಾದ್ರಿ ಕ್ರಾಸ್ ಬಳಿ ಬರುತ್ತಿದ್ದಂತೆ ಫ್ಲೈಓವರ್ ಇಳಿಯಬೇಕಾಗಿತ್ತು. ಆಗ ಬೈಕ್ ಕಂಟ್ರೋಲ್‍ಗೆ ಸಿಗದೆ ಫ್ಲೈ ಓವರ್‌ನ ತಡೆಗೊಡೆಗೆ ಗುದ್ದಿದೆ. ಬೈಕ್ ಗುದ್ದಿದರಬಸಕ್ಕೆ ಸವಾರರು ಮುಂದಕ್ಕೆ ಹಾರಲ್ಪಟ್ಟು ಫ್ಲೈಓವರ್ ನಿಂದ ಕೆಳಕ್ಕೆ ಬಿದ್ದಿದ್ದಾರೆ. ಹಾಗೆ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು.

ಅಲ್ಲಿದ್ದ ಸಾರ್ವಜನಿಕರು ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾಗಾರ್ಜುನ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.

Leave A Reply

Your email address will not be published.