ಹಸಮಣೆಯೇರಿದ ಜೋಶ್ ನಟಿ ‘ ಶಮ್ನಾ’ : ಹುಡುಗ ಯಾರು? ಫುಲ್ ಡಿಟೇಲ್ಸ್ ಇಲ್ಲಿದೆ!

ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ಜೋಶ್ ಸಿನಿಮಾ ಮೂಲಕ ಕನ್ನಡದಲ್ಲೂ ಕಾಣಿಸಿಕೊಂಡಿದ್ದ ಪೂರ್ಣ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

 

ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ತಾರೆ ಪೂರ್ಣಾ ಅವರ ನಿಜವಾದ ಹೆಸರು ಶಮ್ನಾ ಕಾಸಿಮ್ ಆಗಿದ್ದು, ಸಿನಿಮಾದಲ್ಲಿ ಪೂರ್ಣ ಎಂದೇ ಚಿರಪರಿಚಿತರಾಗಿದ್ದಾರೆ. ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು.

ಇದೀಗ ಜೋಶ್ ಸಿನಿಮಾ ಖ್ಯಾತಿಯ ನಟಿ ನಟಿ ಪೂರ್ಣಾ ಅಲಿಯಾಸ್​ ಶಮ್ನಾ ಕಾಸಿಮ್​ ಜೊತೆ ಹಸೆಮಣೆ ಏರಿ ಹೊಸ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ . ಅಂದಹಾಗೆ ಇತ್ತೀಚಿಗಷ್ಟೆ ಶಮ್ನಾ ಮದುವೆ ಆಗುತ್ತಿರುವ ಬಗ್ಗೆ ಬಹಿರಂಗ ಪಡಿಸಿದ್ದರು. ದುಬೈ ಮೂಲದ ಉದ್ಯಮಿ ಶಾನಿದ್ ಆಸಿಫ್ ಅಲಿ ಜೊತೆ ಶಮ್ನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಈ ಜೋಡಿಗೆ ಅಭಿಮಾನಿಗಳು ಮತ್ತು ಸ್ನೇಹಿತರು ಅಭಿನಂದನೆ ತಿಳಿಸುತ್ತಿದ್ದಾರೆ.

ಶಮ್ನಾ ಮತ್ತು ಶಾನಿದ್ ಆಸಿಫ್ ಅಲಿ ಮದುವೆ ದುಬೈನಲ್ಲಿ ನೆರವೇರಿದ್ದು, ಸೋಮವಾರ ಅಕ್ಟೋಬರ್ 24ರ ರಾತ್ರಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿದ್ದರು.

ನಟಿ ಪೂರ್ಣ ಮದುವೆಯ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದು, ಶಮ್ನಾ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ.

ಮುಸ್ಲಿಂ ಸಂಪ್ರದಾಯದಂತೆ ಶಮ್ನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಕೆಂಪು ಬಣ್ಣದ ಜೆರಿಯ ಬಿಳಿ ಮತ್ತು ಗೋಲ್ಡನ್ ಬಣ್ಣದ ಸೀರೆಯಲ್ಲಿ ಶಮ್ನಾ ಕಂಗೊಳಿಸುತ್ತಿದ್ದರು.

ಪೂರ್ಣಾ 2004ರಲ್ಲಿ ಮಂಜು ಪೋಲೂರು ಪೆಂಕುಟ್ಟಿ ಎಂಬ ಮಲಯಾಳಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಕನ್ನಡ ಸೇರಿದಂತೆ ಹಲವು ಭಾಷೆಯ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ತೆಲುಗಿನ ಶ್ರೀಮಹಾಲಕ್ಷ್ಮಿ, ತಮಿಳಿನ ಕೊಡೈಕನಾಲ್ ನಲ್ಲಿ ನಟಿಸಿ ಅನೇಕ ಅಭಿಮಾನಿಗಳನ್ನು ಪಡೆದಿದ್ದಾರೆ. ‘ತಲೈವಿ’, ‘100’ (ಕನ್ನಡ), ‘ದೃಶ್ಯಂ 2’, ‘ಅಖಂಡ’ ಇವು ಅವರ ನಟನೆಯ ಇತ್ತೀಚೆಗೆ ತೆರೆಕಂಡ ಸಿನಿಮಾಗಳಾಗಿವೆ.

ಕೇವಲ ಸಿನಿಮಾ ಅಷ್ಟೇ ಅಲ್ಲದೇ, ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿಯೂ ಅವರು ಪ್ರೇಕ್ಷಕರನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಜೋಶ್ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ತಂದು ಕೊಟ್ಟಿತು. ಈ ಸಿನಿಮಾ ಬಳಿಕ ದೊಡ್ಡ ಸ್ಟಾರ್ ಆದರು.

ರಮೇಶ್ ಅರವಿಂದ್ ನಟನೆಯ 100 ಸಿನಿಮಾದಲ್ಲಿ ಪೂರ್ಣ ನಟಿಸಿದ್ದರು. ಈ ಸಿನಿಮಾ ಮೂಲಕ ಶಮ್ನಾ ಅನೇಕ ವರ್ಷಗಳ ಬಳಿಕ ಮತ್ತೆ ಕನ್ನಡದಲ್ಲಿ ಮಿಂಚಿದರು. ಈ ಸಿನಿಮಾ ಪೂರ್ಣಗೆ ಮತ್ತೆ ದೊಡ್ಡ ಮಟ್ಟದ ಖ್ಯಾತಿ ನೀಡಿದೆ. ಈ ನಡುವೆಯೂ ಶಮ್ನಾ ಅನೇಕ ಸಿನಿಮಾಗಳ ಶೂಟಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕವೂ ಸಿನಿಮಾ ರಂಗದಲ್ಲಿ ತೊಡಗಿಸಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ ಎಂಬ ಮಾಹಿತಿ ಇದೀಗ ಹರಿದಾಡುತ್ತಿದೆ.

Leave A Reply

Your email address will not be published.