ಮುಖ್ಯಮಂತ್ರಿಗೇ ಬಿದ್ದ ಚಾಟಿ ಏಟಿನ ರುಚಿ, ಸಿಎಂ ಮಣಿಕಟ್ಟಿಗೆ ಬೀಸಿ ಹೊಡೆದ ಚಾಟಿ !

ಮುಖ್ಯಮಂತ್ರಿಗೇ ಸಕತ್ ಚಾಟಿ ಏಟು ಬಿದ್ದಿದೆ. ಸಿಎಂ ಎಲ್ಲಾದರೂ ಚಾಟಿ ಏಟು ತಿನ್ನುವುದು ಕೇಳಿದ್ದೀರಾ?, ಅದೂ ಅಷ್ಟು ಪೊಲೀಸ್ ಪ್ರೊಟೆಕ್ಷನ್ ಸುತ್ತ ಬಂದೋಬಸ್ತ್ ನಲ್ಲಿ ಇರುವಾಗ? ಆದರೆ, ಇಲ್ಲಿ ಮುಖ್ಯಮಂತ್ರಿ ಚಾಟಿ ಏಟು ತಿಂದಿದ್ದಾರೆ. ಜೋರಾಗಿ ಬೀಸಿ ಹೊಡೆದ ಏಟು ಮುಖ್ಯಮಂತ್ರಿಯ ಮಣಿಕಟ್ಟಿಗೆ ಬಿದ್ದಿದೆ.

ಆದರೆ, ಇದು ಸ್ವತಃ ಮುಖ್ಯಮಂತ್ರಿಯ ಇಷ್ಟದ ಪ್ರಕಾರವೇ ಆಗಿದೆ. ಈ ಘಟನೆ ಛತ್ತೀಸ್‌ಗಡದ ದುರ್ಗ್‌ನಲ್ಲಿ ನಡೆದಿದೆ. ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಭಗೆಲ್ ದುರ್ಗ್ ಎಂಬಲ್ಲಿ ನಡೆದ ಗೌರಿ ಗೌರಾ ಪೂಜೆಯ ವೇಳೆ ಮಣಿಗಂಟಿಗೆ ಚಾಟಿಯಿಂದ ಹೊಡೆಸಿಕೊಂಡಿದ್ದಾರೆ.

ಇದು ಅಲ್ಲಿನ ಗೌರಿ ಗೌರಾ ಪೂಜೆಯ ಸಂಪ್ರದಾಯ. ಆ ಸಂಪ್ರದಾಯದಂತೆ ಈ ಚಾಟಿ ಏಟಿನ ಪ್ರೋಗ್ರಾಮ್ ನಲ್ಲಿ ತಮ್ಮ ಮಣಿಕಟ್ಟಿಗೆ ಸಿಎಂ ಏಟು ಹಾಕಿಸಿಕೊಂಡಿದ್ದಾರೆ. ಸಿಎಂ ಅವರು ಧೈರ್ಯವಾಗಿ ಮಣಿಗಂಟನ್ನು ಚಾಟಿ ಏಟಿಗೆ ಒಡ್ಡಿದ್ದರು. ಇದೀಗ ಈ ಸಂಬಂದಿ ವಿಡಿಯೋ ವೈರಲ್ ಆಗಿದೆ.

Leave A Reply

Your email address will not be published.