‘ ಭಾರತೀಯರಿಗೆ ದೇಶ ನಡೆಸಲು ಬರಲ್ಲ ‘ – ಚರ್ಚಿಲ್ ರ ಈ ಮಾತನ್ನೇ ಪುನರುಚ್ಚರಿಸಿ ಬ್ರಿಟಿಷರಿಗೆ ತಿರುಗೇಟು ನೀಡಿದ ಆನಂದ್ ಮಹೀಂದ್ರ !

ನವದೆಹಲಿ: ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆಯಾಗಿರುವ ಸಂಬಂಧ ಉದ್ಯಮಿ ಆನಂದ್ ಮಹೀಂದ್ರ ಮಾಡಿರುವ ಟ್ವೀಟ್ ಭಾರಿ ಸಂಚಲನ ಸೃಷ್ಟಿಸಿದೆ.

1947 ರಲ್ಲಿ ಭಾರತ ಸ್ವಾತಂತ್ರ್ಯದ ಸಂಗ್ರಾಮದ ನಂತರ ದ ಸಂದರ್ಭದಲ್ಲಿ ಅಂದಿನ ಬ್ರಿಟಿಷ್ ಪ್ರಧಾನಿಯಾಗಿದ್ದ ವಿನ್‌ಸ್ಟಂಟ್ ಚರ್ಚಿಲ್ ಹೇಳಿದ ಮಾತನ್ನೇ ಪುನರುಚ್ಚರಿಸಿ, ಬ್ರಿಟಿಷರಿಗೆ ತಿರುಗೇಟು ನೀಡಿದ್ದಾರೆ. ಇಂತಹಾ ತಿರುಗೇಟು ನೀಡಲು ಬರೋಬ್ಬರಿ 75 ವರ್ಷ ಕಾದು ಕೂತು ತಿರುಗಾ ಹೊಡೆಯಬೇಕಾಯ್ತು.

ಅದು 1947. ಆಗ ಭಾರತದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಅತ್ಯಂತ ತೀವ್ರ ಸ್ವರೂಪ ಪಡೆದುಕೊಂಡಿತು. ಈ ವೇಳೆ ಅಂದಿನ ಪ್ರಧಾನಿ ಚರ್ಚಿಲ್ ಅವರು, ” ಎಲ್ಲಾ ಭಾರತೀಯ ನಾಯಕರು ಕಡಿಮೆ ಸಾಮರ್ಥ್ಯ ಹೊಂದಿದ್ದಾರೆ. ಇಷ್ಟೇ ಅಲ್ಲ ಅವರೆಲ್ಲ ದೇಶ ಮುನ್ನಡೆಸುವ ಶಕ್ತಿ ಇಲ್ಲದವರಾಗಿದ್ದಾರೆ ” ಎಂದಿದ್ದರು. ಅದಾಗಿ ಈಗ 75 ವರ್ಷ ಕಳೆದಿದೆ. ಚರ್ಚಿಲ್ ಇತಿಹಾಸದ ಭಾಗವಾಗಿದ್ದಾರೆ. ಅದರ.ಬಗ್ಗೆ ಭಾರತದ ಉದ್ಯಮಿ ಆನಂದ್ ಮಹಿಂದ್ರಾ ಮಾತಾಡಿದ್ದಾರೆ. ” ನಮ್ಮ 75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಪರ್ವದ ಸಂದರ್ಭದಲ್ಲಿ ಇದೀಗ ಭಾರತೀಯ ಮೂಲದ ವ್ಯಕ್ತಿ ಬ್ರಿಟನ್ ಪ್ರಧಾನಿಯಾಗಿದ್ದಾರೆ. ಬದುಕು ಸುಂದರವಾಗಿದೆ” ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.

ಇವತ್ತಿನ ಈ ಟ್ವೀಟ್, ಈ ಹಿಂದೆ ಭಾರತೀಯರನ್ನು ‘ನಿಷ್ಪ್ರಯೋಜಕ ‘ ಮತ್ತು ‘ನಾಯಕತ್ವದ ಗುಣಗಳಿಲ್ಲದವರು’ ಎಂದಿದ್ದ ಚರ್ಚಿಲ್ ಅವರಿಗೆ ಹಾಗೂ ಆ ನಂತರದ ಹಲವು ಬ್ರಿಟಿಷ್ ನಾಯಕರಿಗೆ ನೀಡಿದ ತಿರುಗೇಟು ಇದಾಗಿದೆ ಎಂದು ಈ ಟ್ವೀಟ್ ಅನ್ನು ವಿಶ್ಲೇಷಿಸಲಾಗುತ್ತಿದೆ.

‘ ಭರತಖಂಡದ ಮೇಲೆ ಎಷ್ಟೋ ದಾಳಿಗಳು ನಡೆದಿದೆ. ಹಲವರು ಇಡೀ ದೇಶವನ್ನು ತೆಕ್ಕೆಗೆ ತೆಗೆದುಕೊಂಡು ಆಡಳಿತ ನಡೆಸಿ ಭಾರತವನ್ನು, ಅದರ ಸಂಸ್ಕೃತಿಯನ್ನು ಸಂಪೂರ್ಣ ನಿರ್ನಾಮ ಮಾಡುವ ಯತ್ನ ಮಾಡಿದ್ದಾರೆ. ಆದರೆ ಅದು ಯಾವತ್ತಿಗೂ ಸಾಧ್ಯವಾಗಲಿಲ್ಲ. ಪ್ರತಿ ಬಾರಿ ಕೂಡಾ ಭಾರತೀಯರು ತಮ್ಮ ಬುದ್ಧಿವಂತಿಕೆ ಮತ್ತು ಸಾಮರ್ಥ್ಯದಿಂದ ಎದ್ದು ನಿಂತಿದ್ದಾರೆ. ಈಗ ತನ್ನನ್ನು ಸುದೀರ್ಘ ಆಳಿದ ದೇಶದ ಆಡಳಿತ ಚುಕ್ಕಾಣಿ ಭಾರತೀಯ ಒಬ್ಬನ ಕೈಗೆ ಬರುತ್ತಿದೆ. ಈ ಮೂಲಕ ಭಾರತ ಹಳೇ ಸೇಡನ್ನು ಯಾವುದೇ ದುರುದ್ದೇಶವಿಲ್ಲದೆ ಆಧುನಿಕ ರೀತಿಯಲ್ಲಿ ತೀರಿಸಿಕೊಳ್ಳಲಿದೆ ‘
‘ ಅಲ್ಲದೆ, ವಿಶ್ವದ ಪ್ರಮುಖ ಕಂಪನಿಗಳು, ಕಾರ್ಪೋರೇಟ್ ಕ್ಷೇತ್ರದ ಮುಖ್ಯಸ್ಥರು ಭಾರತೀಯರಾಗಿದ್ದಾರೆ.

ಇದೀಗ ವಿಶ್ವದಲ್ಲೇ ಬಲಿಷ್ಠ ಎಂದು ಗುರುತಿಸಿಕೊಂಡಿರುವ ದೇಶಗಳ ಆಡಳಿತ ಇದೀಗ ಭಾರತೀಯರ ಕೈಗೆ ಸಿಗುತ್ತಿದೆ. ‘ ಇದು ಭಾರತೀಯರ ಬುದ್ದಿವಂತಿಕೆ, ಪ್ರಯತ್ನ, ಸ್ವಂತಿಕೆ ಮತ್ತು ಸಹಿಷ್ಣುತೆಯ ಫಲ ‘ ಇತ್ಯಾದಿಯಾಗಿ ಹಲವು ಅಭಿಪ್ರಾಯಗಳು ಟ್ವೀಟರ್ ನಲ್ಲಿ ವ್ಯಕ್ತವಾಗಿವೆ.

Leave A Reply

Your email address will not be published.