ವಿಶ್ವದ ಅತ್ಯಂತ ಕೊಳಕು ಮನುಷ್ಯ ಖ್ಯಾತಿಯ ಅಮೌ ಹಾಜಿ (94) ನಿಧನ

ವಿಶ್ವದ ಅತ್ಯಂತ ಕೊಳಕು ಮನುಷ್ಯ ಎಂದೇ (ಕು) ಖ್ಯಾತಿ ಪಡೆದಿದ್ದ ಇರಾನ್ ನ ವ್ಯಕ್ತಿ ಮೃತಪಟ್ಟಿದ್ದಾರೆ. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸ್ನಾನ ಮಾಡಿರದ 94ರ ಹರೆಯದ ಅಮೌ ಹಾಜಿ ನಿಧನರಾದ ಸುದ್ದಿಯನ್ನು ಮಾಧ್ಯಮಗಳು ವರದಿ ಮಾಡಿದೆ.
ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸ್ನಾನ ಮಾಡಿರದ ಅಮೌ ಹಾಜಿ ಅವರು ದಕ್ಷಿಣ ಪ್ರಾಂತ್ಯದ ಫಾರ್ಸ್‌ನ ದೇಜ್ಗಾ ಗ್ರಾಮದಲ್ಲಿ ಭಾನುವಾರ ನಿಧನರಾಗಿದ್ದಾರೆ. ಅವರು ಒಂಟಿಯಾಗಿ ಭಿಕ್ಷುಕರಂತೆ ಮತ್ತು ಕೆಲವು ಸಲ ಗುಹೆಗಳಲ್ಲಿ ವಾಸವಾಗಿದ್ದರು.

 

ಆತನ ಸ್ನಾನ ಮಾಡದ ಪ್ರವೃತ್ತಿ ಕುತೂಹಲಕಾರಿಯಾಗಿದೆ. ತಾನು ಅನಾರೋಗ್ಯ ಪೀಡಿತರಾಗುವ ಭಯದಿಂದ ಅವರು ಸ್ನಾನ ಮಾಡುತ್ತಿರಲಿಲ್ಲ ಎಂದು ಐಆರ್ ಎನ್‌ಎ ಸುದ್ದಿ ಸಂಸ್ಥೆ ಹೇಳಿದೆ.ಆದರೆ ಕೆಲ ವಾರಗಳ ಹಿಂದೆ ಗ್ರಾಮಸ್ಥರು ಒತ್ತಾಯಪೂರ್ವಕವಾಗಿ ಆತನಿಗೆ ಸ್ನಾನ ಮಾಡಿಸಿದ್ದರು. ಇದಾಗಿ ತಿಂಗಳ ಒಳಗೆ ಆತ ಮೃತಪಟ್ಟಿದ್ದಾನೆ. ಸ್ನಾನವೇ ಆತನ ಸಾವಿಗೆ ಕಾರಣ್ ಆಯ್ತಾ ಎನ್ನುವುದು ಈಗ ಇರುವ ಜಿಜ್ಞಾಸೆ.

ಸ್ನಾನ ರಹಿತರಾಗಿದ್ದರೂ ಅಮೌ ಹಾಜಿ ಸುದೀರ್ಘ ಜೀವನ ನಡೆಸಿದ್ದಾರೆ. ಆತನ ಜೀವನದ ಬಗ್ಗೆ 2013ರಲ್ಲಿ ‘ ದಿ ಸ್ಟ್ರೇಂಜ್ ಲೈಫ್ ಆಫ್ ಅಮೌ ಹಾಜಿ’ ಎಂಬ ಸಾಕ್ಷ್ಯಚಿತ್ರ ಕೂಡಾ ತೆರೆಗೆ ಬಂದಿತ್ತು. ಅದು ಸಾಕಷ್ಟು ಪ್ರಚಾರ ಪಡೆದುಕೊಂಡಿತ್ತು. ಈಗ ಬಾಹ್ಯ ದೈಹಿಕ ಶುಚಿತ್ವಕ್ಕೂ ಆಯುಷ್ಯ ಆರೋಗ್ಯಕ್ಕೂ ಅಂತಹಾ ಸಂಬಂಧ ಇಲ್ಲ ಅನ್ನಬಹುದೇ? ಬೀಡಾಡಿಯಾಗಿ ಮೈಗೆ ನೀರು ಸೋಕಿಸದೆ ಗಲೀಜಾಗಿ ಇದ್ದ ಕಾರಣಕ್ಕೇ ಆತ ಇಷ್ಟು ಸುದೀರ್ಘವಾಗಿ ಬದುಕಿದರೇ- ಸಂಶೋಧನೆ ನಡೆಸುವವರಿಗೆ ಇದೊಂದು ಒಳ್ಳೆಯ ವಿಷಯ ಆಗಬಹುದು.

ಈತನ ಬಗ್ಗೆ ಇನ್ನಷ್ಟು ಮಾಹಿತಿ

ಈತ ಕಳೆದ 67 ವರ್ಷಗಳಿಂದ ಸ್ನಾನ ಮಾಡಿಲ್ಲ ! ಅಷ್ಟೇ ಅಲ್ಲ, ಆತ ಬಾಯಾರಿಕೆ ಆದಂತೆಲ್ಲ ಕೊಚ್ಚೆ ನೀರು ಕುಡಿಯುತ್ತಾ ದಿನ ಕಳೆಯುತ್ತಾನೆ. ಕಚ್ಚಾ ಆಹಾರ ಸೇವಿಸುತ್ತಾರೆ. ಮುಳ್ಳು ಹಂದಿಗಳು, ಮೊಲಗಳೇ ಈತನ ಡಯಟ್. ಇಲ್ಲಿಯತನಕ ಯಾವ ಖಾಯಿಲೆಯೂ ಈತನ ಹತ್ತಿರ ಸುಳಿದಿಲ್ಲ. ಕೊಳಕುತನವೆ ಆತನ ಆರೋಗ್ಯದ ಒಳಗುಟ್ಟು.
ಈತ ಆರು ದಶಕಗಳ ಹಿಂದೆಯೇ ಮನೆ ಬಿಟ್ಟಿದ್ದ. ನಂತರ ಸ್ನಾನ ಅಂದರೆ ಸ್ನಾನ ಅಂದರೆ ಏನು ಎನ್ನುವುದು ಈತನಿಗೆ ಮರೆತು ಹೋಗಿದೆ.
ಸ್ನಾನ ಮಾಡಿದರೆ ಈತನ ಆರೋಗ್ಯ ಹದಗೆಡುತ್ತದೆ ಎಂಬುದು ಈತನ ನಂಬಿಕೆ. ಅದಕ್ಕಾಗೇ ಸ್ನಾನನೇ ಮಾಡದೇ ಇದ್ದಾನೆ. ಆದರೂ ಆತನ ಆರೋಗ್ಯ ಈ 67 ವರ್ಷದಲ್ಲಿ ಒಂದು ಚೂರೂ ಅಲ್ಲಾಡಿಲ್ಲ.

ಈತ ಸ್ನಾನ ಮಾಡದೇ ಇದ್ದರೂ ಈತನ ಮೈಯಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ಆಗಿಲ್ಲ. ಈತನಿಗೆ ಸಂಬಂಧಿಕರು ಯಾರೂ ಇಲ್ಲ. ನೆಂಟರು ಇಷ್ಟರು, ಇಷ್ಟವಿಲ್ಲದವರು… ಊಹೂಂ ಯಾರೂ ಈತನಿಗೆ ಇಲ್ಲ. ಮನೆ ಕೂಡಾ ಇಲ್ಲ. ಒಬ್ಬಂಟಿಯಾಗಿಯೇ ಪ್ರಾಣಿಗಳ ಥರ ಜೀವನ ಸಾಗಿಸುತ್ತಾನೆ. ಅದೇ ಕಾರಣಕ್ಕೆ ಟೆನ್ಶನ್ ಇಲ್ಲ.

ಪ್ರಾಣಿಗಳ ಗೊಬ್ಬರವನ್ನು ಪೈಪ್ ನಲ್ಲಿ ತುಂಬಿಸಿ ಸಿಗರೇಟ್ ರೀತಿ ಸೇದುತ್ತಾನೆ‌. ರಸ್ತೆಯಲ್ಲಿ ಸಿಕ್ಕ ಸಿಕ್ಕ ಆಹಾರ ಸೇವಿಸುತ್ತಾನೆ‌ ಈತನ ವಾಸಸ್ಥಾನ ವಿಚಿತ್ರವಾಗಿದೆ. ಭೂಮಿಯ ರಂಧ್ರ ಕೊರೆದು ಅದರೊಳಗೆ ಈತ ವಾಸಿಸುತ್ತಿದ್ದ. ಈತನಿಗಾಗಿ ಈಗ ಗ್ರಾಮಸ್ಥರು ಒಂದು ಗುಡಿಸಲು ಕೂಡಾ ಕಟ್ಟಿಕೊಟ್ಟಿದ್ದಾರೆ. ಈಗ ಅದೇ ಅವನ ಆವಾಸಸ್ಥಾನ. ‘ಪ್ರಾಣಿಗಳಂತೆ ಬೀಡಾಡಿಯಾಗಿ ಬದುಕಿರಿ, ದೀರ್ಘ ಕಾಲ ಜೀವಿಸಿ’ ಅನ್ನೋದೇ ಈ ಮನುಶ್ಯ ಜೀವಿಯಿಂದ ನಮಗೆ ಸಿಗುವ ಪಾಠವೇ ?! ಗೊತ್ತಿಲ್ಲ.

Leave A Reply

Your email address will not be published.