ಪತ್ನಿಯನ್ನು ಜೀವಂತ ಸಮಾಧಿ ಮಾಡಿ ಹೊರಟ ಪತಿ | ಆದರೆ ಆಕೆ ಬದುಕಿ ಹೊರಬಂದಿದ್ದು ಮಾತ್ರ Apple Watch ನಿಂದ!!!
ದುಬಾರಿ ಬೆಲೆಯ ಆ್ಯಪಲ್ ವಾಚ್ ಹೊಂದಲು ಅನೇಕ ಮಂದಿ ಹಾತೊರೆಯುತ್ತಾರೆ. ಏಕೆಂದರೆ ಈ ವಾಚ್ ನಲ್ಲಿ ಅಳವಡಿಸಿರುವ ತಂತ್ರಜ್ಞಾನ ಬೇರೆ ಯಾವುದೇ ಫೋನ್ ನಲ್ಲಿ ಇರುವುದಿಲ್ಲ ಎಂದು. ಈ ಫೋನ್ ಕೇವಲ ಫೋನ್ ಮಾಡೋಕೋ , ವೀಡಿಯೋ, ಅಥವಾ ಸೆಲ್ಫಿ ಮಾಡೋಕೆ ಮಾತ್ರ ಉಪಯೋಗಕಾರಿ ಅಲ್ಲ, ಆರೋಗ್ಯ ಸಮಸ್ಯೆ ಯನ್ನು ತಿಳಿಸಲು ಕೂಡಾ ಇದು ಸಹಾಯಕಾರಿ. ಆ್ಯಪಲ್ ವಾಚ್ ಕೈಯಲ್ಲಿ ಇದ್ದರೆ ರಕ್ತದ ಏರಿಳಿತಗಳನ್ನು ತೋರಿಸಿ ಕೊಡುತ್ತದೆ. ಇನ್ನೂ ಆ್ಯಪಲ್ ಕಂಪನಿಯ ಸ್ಮಾರ್ಟ್‌ಫೋನ್ /ಐಫೋನ್ ಅಂದರೆ ಹಲವರಿಗೆ ಪಂಚಪ್ರಾಣ. ಅದೇ ಆ್ಯಪಲ್ ವಾಚ್ ಈಗ ಒಬ್ಬ ಮಹಿಳೆಯ ಜೀವ ಕಾಪಾಡಿದೆ ಎಂದರೆ ನಂಬುತ್ತೀರಾ ?
ಹೌದು ಈ ಮಹಿಳೆಯ ಪತಿ ಆಕೆಯನ್ನು ಜೀವಂತ ಸಮಾಧಿ ಮಾಡಿದ್ದರೂ, ಆಕೆ ಈ ಫೋನ್ ಸಹಾಯದಿಂದ ಹೊರಬಂದಿದ್ದಾಳೆ. ಅಲ್ಲದೆ, ಆ್ಯಪಲ್ ವಾಚ್ ಸಹಾಯದಿಂದ ಪೊಲೀಸರ ನೆರವು ಪಡೆದುಕೊಂಡಿದ್ದಾಳೆ.
ಅಮೆರಿಕದ ವಾಷಿಂಗ್ಟನ್‌ನಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದ್ದು, ಜೀವಂತವಾಗಿ ಸಮಾಧಿ ಮಾಡಿದ ಮಹಿಳೆ ತಪ್ಪಿಸಿಕೊಂಡು ತನ್ನ ಆ್ಯಪಲ್ ವಾಚ್‌ನಿಂದ ಸಹಾಯಕ್ಕಾಗಿ ಕರೆ ಮಾಡಿದ್ದಾಳೆ. ಮಹಿಳೆಯನ್ನು ಚಾಕುವಿನಿಂದ ಇರಿದು, ಆಕೆಯನ್ನು ಕಟ್ಟಿ ಹಾಕಿ, ಸಮಾಧಿಯಲ್ಲಿ ಅವಳ ಪತಿ ಜೀವಂತವಾಗಿ ಹೂಳಿದ್ದಾನೆ ಎಂದು ವರದಿಯಾಗಿದೆ.
ಮಹಿಳೆಯು ಸಮಾಧಿಯಿಂದ ಹೊರಬರಲು, ಮಣ್ಣನ್ನು ತೆಗೆದು ಹೊರಬಂದಿದ್ದು, ಮತ್ತು ಸಹಾಯಕ್ಕಾಗಿ ತನ್ನ ಆ್ಯಪಲ್ ವಾಚ್‌ನೊಂದಿಗೆ 911 ಗೆ ಕರೆ ಮಾಡಿದಳು ಎಂದು ತಿಳಿದುಬಂದಿದೆ.
ವರದಿಗಳ ಪ್ರಕಾರ, ಈ ಘಟನೆಯು ಅಕ್ಟೋಬರ್ 16 ರಂದು ಮಧ್ಯಾಹ್ನ ಸಂಭವಿಸಿದೆ. 42 ವರ್ಷದ ಮಹಿಳೆಯನ್ನು ಪತ್ತೆ ಮಾಡಿದ ಅಧಿಕಾರಿಗಳು ಮಹಿಳೆಯನ್ನು ಆಕೆಯ ಸ್ವಂತ ಪತಿಯೇ ತನ್ನ ಮನೆಯಿಂದ ಅಪಹರಿಸಿದ್ದಾನೆ ಎಂದು ಮಾಹಿತಿ ನೀಡಿದಳು. ತನ್ನ ನಿವೃತ್ತಿ ಹಣವನ್ನು ನೀಡುವುದಕ್ಕಿಂತ ನಿನ್ನನ್ನು ಕೊಲ್ಲುವುದಾಗಿ ಆತ ಹೇಳಿದ್ದ ಎಂದೂ ಮಹಿಳೆ ಹೇಳಿಕೊಂಡಿದ್ದಾಳೆ.
ಈ ಮಹಿಳೆಯನ್ನು 42 ವರ್ಷದ ಯಂಗ್ ಸೂಕ್ ಆನ್ ಎಂದು ಗುರುತಿಸಲಾಗಿದೆ. ಆಕೆ 53 ವರ್ಷ ವಯಸ್ಸಿನ ಚೇ ಕ್ಯೋಂಗ್ ಆನ್ ಅವರನ್ನು ವಿವಾಹವಾಗಿದ್ದಾಳೆ. ಅಕ್ಟೋಬರ್ 16 ರ ಭಾನುವಾರ ಮಧ್ಯಾಹ್ನ 1.00 ಗಂಟೆಗೆ ಪತಿ ಮನೆಗೆ ಬಂದ ಮಹಿಳೆ ಹಣದ ವಿಷಯದಲ್ಲಿ ಜಗಳವಾಡಿದ್ದು, ಹಲ್ಲೆಯನ್ನೂ ಮಾಡಿದ್ದಾನೆ. ಅವರಿಬ್ಬರೂ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದು, ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಹಣ ನೀಡುವ ವಿಚಾರಕ್ಕೆ ಜಗಳ ನಡೆದಿದೆ ಎನ್ನಲಾಗಿದೆ.
ಥರ್ಸ್ಟನ್ ಕೌಂಟಿಯ ಸುಪೀರಿಯರ್ ಕೋರ್ಟ್ ಮಾಹಿತಿ ಪ್ರಕಾರ, ಯಂಗ್ ಸೂಕ್ ಸಮಾಧಿಯಿಂದ ಹೊರ ಬಂದ ಬಳಿಕ ಪೊಲೀಸರಿಗೆ ಕರೆ ಮಾಡಿದ್ದಾಳೆ. ಪೊಲೀಸರು ಸ್ಥಳಕ್ಕೆ ಬಂದಾಗ, ಆಕೆಯ ದೇಹದ ಹಲವು ಭಾಗಗಳಿಗೆ ಆಕೆಯನ್ನು ಡಕ್ಟ್ ಟೇಪ್‌ನಿಂದ ಸುತ್ತಲಾಗಿತ್ತು. ಪೊಲೀಸರು ಬಚಾವ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.ಈ ಪ್ರಕರಣ ಸಂಬಂಧ ಪತಿ ಛೇ ಕ್ಯೋಂಗ್ ಆನ್ ಅನ್ನು ಕೌಂಟಿ ಜೈಲಿಗೆ ಹಾಕಲಾಗಿದ್ದು, ಹಾಗೂ ಜಾಮೀನು ನಿರಾಕರಣೆಯಾಗಿದೆ ಎಂದೂ ವರದಿಯಾಗಿದೆ. ಕೊಲೆಯ ಯತ್ನ, ಅಪಹರಣದ ಆರೋಪಗಳನ್ನು ಆತ ಎದುರಿಸುತ್ತಿದ್ದಾನೆ ಎಂದೂ ಅಮೆರಿಕದ ಪೊಲೀಸರು ಮಾಹಿತಿ ನೀಡಿದ್ದಾರೆ.