IND vs PAK : ಟಿ20 ವರ್ಲ್ಡ್‌ ಕಪ್ ನಲ್ಲಿ ಸೋತ ಪಾಕಿಸ್ತಾನ ನಂತರ ಡ್ರೆಸ್ಸಿಂಗ್ ರೂಮ್ ನಲ್ಲಿ ಮಾಡಿದ್ದಾದರೂ ಏನು? ವೀಡಿಯೋ ನೋಡಿ

T20 WC 2022 IND vs PAK: ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ತಂಡಗಳು ಭಾನುವಾರ T20 ವಿಶ್ವಕಪ್‌ನ ಹೈವೋಲ್ಟೇಜ್ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿ ಮೂರು ದಿನಗಳ ಹಿಂದೆಯೇ ಮೆಲ್ಬೋರ್ನ್ ತಲುಪುವ ಮೂಲಕ ಟೀಂ ಇಂಡಿಯಾ ತನ್ನ ತಯಾರಿ ನಡೆಸಿತ್ತು.

ದೀಪಾವಳಿಗೂ ಮುನ್ನವೇ ಭಾರತ ತಂಡ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲುವ ಮೂಲಕ ಆಭಿಮಾನಿಗಳಿಗೆ ಹಬ್ಬದ ಸಂಭ್ರಮ ದುಪ್ಪಟ್ಟಾಗುವಂತೆ ಮಾಡಿದೆ.

ತನ್ನ ಮೊದಲ ಟಿ20 ವಿಶ್ವಕಪ್‌ (T20 World Cup 2022) ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಯನ್ನು ಮಣಿಸಿದ ರೋಹಿತ್ (Rohit Sharma) ಪಡೆ ಕೋಟ್ಯಾಂತರ ಅಭಿಮಾನಿಗಳಿಗೆ ಖುಷಿ ಸುದ್ಧಿ ನೀಡಿದೆ.

ಪಂದ್ಯದ ಅಂತ್ಯದವರೆಗೂ ಗೆಲುವಿನ ಜಯಭೇರಿ ಗಳಿಸಲು ಹರಸಾಹಸ ಪಟ್ಟ ಪಾಕ್ ತಂಡ ಹೀನಾಯ ಸೋಲಿನಿಂದ ಕಂಗೆಟ್ಟಿದೆ.

ಈ ಗೆಲುವಿನ ಬಳಿಕ ಟೀಂ ಇಂಡಿಯಾ ಸಂತಸದ ಅಲೆಯಲ್ಲಿ ಮಿಂದೆದ್ದರೆ, ಎದುರಾಳಿ ತಂಡದ ಆಟಗಾರರು ಹತಾಶೆಯಲ್ಲಿ ಮೈದಾನದಿಂದ ಹೊರನಡೆದ ಘಟನೆ ನಡೆದಿದೆ.

ಡ್ರೆಸ್ಸಿಂಗ್ ರೂಮಿನಲ್ಲಿ ಸೋಲಿನ ಬಿಸಿಯ ತಾಪ ಕಾವೇರಿದ್ದು, ದುಃಖ ದಿಂದ ಸೋಲಿನ ರುಚಿ ಉಂಡಿರುವ ಪಾಕ್ ಪಡೆ ತಲೆ ಮೇಲೆ ಕೈ ಹೊತ್ತು ಕುಳಿತಿರುವ ವಿಡಿಯೋ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.

ಹಾರ್ದಿಕ್ ಹಾಗೂ ಕೊಹ್ಲಿ ಎದುರಾಳಿಗಳ ಬೆವರಿಳಿಸಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಪಾಕ್ ಪಡೆಗೆ ಶಾಕ್ ನೀಡಿ ಸೋಲಿನ ರುಚಿಯನ್ನೂ ಉಣಬಡಿಸಿದ ಇಂಡಿಯಾ ತಂಡದ ಆಕ್ರಮಣ ಶೀಲ ಆಟದ ವೈಖರಿಗೆ ಶತ್ರು ಪಾಳಯ ಮುದುರಿ ಮೂಲೆ ಸೇರಿದೆ.

19ನೇ ಓವರ್ ಎಸೆಯುವುದಕ್ಕೂ ಮುನ್ನ ಸಂತೋಷ ಅಲೆಯಲ್ಲಿ ತೇಲುತ್ತಿದ್ದ ರೌಫ್ ಕೂಡ ಗೆಲುವಿನ ವಿಶ್ವಾಸದಲ್ಲೇ ದಾಳಿಗಿಳಿದಿದ್ದರು. ಆದರೆ, ಕೊಹ್ಲಿ ಕ್ರೀಡಾಂಗಣ ದಲ್ಲಿ ಎರಡು ಸಿಕ್ಸರ್ ರೌಫ್ ಜಂಗ್ಗ ಬಲವನ್ನೇ ಅಡಗಿಸಿ, ಕೊಹ್ಲಿಯ ಆಟದ ರೌದ್ರಾವತಾರ ಕಂಡ ರೌಫ್ ಕೂಡ ತಲೆಯನ್ನು ಮೇಲೆತ್ತಲಾಗದೆ ಮೈದಾನದಲ್ಲಿ ಮೌನಕ್ಕೆ ಶರಣಾಗಿದ್ದರು. ಕೊಹ್ಲಿಯ ಆಟದ ತೀವ್ರತೆಗೆ ಕಂಗೆಟ್ಟ ರೌಫ್ ಕೂಡ ತಲೆಯನ್ನು ಮೇಲೆತ್ತಲಾಗದೆ ಮೈದಾನದಲ್ಲಿ ಮೌನವಾಗಿಬಿಟ್ಟರು.

ಅಂತಿಮ ಓವರ್ ಎಸೆಯುವುದಕ್ಕೂ ಮುನ್ನ 3 ಓವರ್ ಬೌಲ್ ಮಾಡಿದ್ದ ರೌಫ್, ಟೀಂ ಇಂಡಿಯಾದ ಪ್ರಮುಖ 2 ವಿಕೆಟ್ ತೆಗೆದು ಮಿಂಚಿದ್ದರು. ಅಲ್ಲದೆ 19ನೇ ಓವರ್​ನ ಮೊದಲ 4 ಎಸೆತಗಳಲ್ಲೂ ರೌಫ್ ಹೆಚ್ಚಿನ ರನ್ ಬಿಟ್ಟುಕೊಟ್ಟಿರಲಿಲ್ಲ. ಆದರೆ ಕೊನೆಯ ಎರಡೂ ಎಸೆತಗಳು ಮಾತ್ರ ಪಾಕ್ ತಂಡದ ಗೆಲುವಿನ ಆಸೆಗೆ ತಣ್ಣೀರೆರಚಿದ್ದವು.

ತನ್ನ ಭರ್ಜರಿ ಆಟದ ಮೂಲಕ ಕೊಹ್ಲಿ ಪಡೆ ದೀಪಾವಳಿ ಬಂಪರ್ ಖುಷಿಯ ಪ್ಯಾಕೆಜ್ ನೀಡಿದೆ. ವಾಸ್ತವವಾಗಿ ಕೊನೆಯ ಹಂತದವರೆಗೂ ಗೆಲುವಿನ ನಗೆ ಬೀರುತಿದ್ದ ಪಾಕ್ ಪಡೆ ಕೊನೆಯ ಓವರ್​ಗಳಲ್ಲಿ ಮೈದಾನದಲ್ಲೇ ತಮ್ಮ ಹತಾಶೆಯನ್ನು ಹೊರಹಾಕುತ್ತಿದ್ದು ಎಲ್ಲರಿಗೂ ಕಣ್ಣಿಗೆ ಕಟ್ಟುವಂತೆ ಮಾಡಿದೆ.

ಇನ್ನು ಸೋಲಿನ ಬಳಿಕ ಮೈದಾನದಿಂದ ಡ್ರೆಸ್ಸಿಂಗ್ ರೂಂಗೆ ಹೋದ ಪಾಕ್ ತಂಡದ ಆಟಗಾರರ ಸ್ಥಿತಿ ಶೋಚನೀಯವಾಗಿದ್ದು, ಸೋಲಿನ ಶಾಕ್​ನಿಂದ ಹೊರಬರಲಾಗದೆ ನರಳುತ್ತಿದ್ದ ಪಾಕ್ ಆಟಗಾರರು ಡ್ರೆಸ್ಸಿಂಗ್ ಕೋಣೆಯಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತರೆ ಮತ್ತೆ ಕೆಲವರು ಗದ್ದಕ್ಕೆ ಕೈಕೊಟ್ಟಿದ್ದರೆ, ಕೆಲವರು ಸಪ್ಪೆ ಮೊರೆಯಲ್ಲಿದ್ದರು.

ತನ್ನ ಆಟಗಾರರಿಗೆ ಸ್ಫೂರ್ತಿ ತುಂಬಲು ತಂಡದ ಮುಖ್ಯ ಕೋಚ್ ಹಾಗೂ ನಾಯಕ ಏನೆಲ್ಲಾ ಸರ್ಕಸ್ ಮಾಡಿದರೂ ಕೂಡ ಪ್ರಯೋಜನವಾಗಿಲ್ಲ.ಪಾಕ್ ಕ್ರಿಕೆಟ್ ಮಂಡಳಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ವೀಡಿಯೊದಲ್ಲಿ, ಪಾಕಿಸ್ತಾನಿ ಆಟಗಾರರ ಮುಖದಲ್ಲಿನ ಹತಾಶೆಯ ಸ್ಥಿತಿ ಎದ್ದು ಕಾಣುತ್ತದೆ.

ಇಂಡಿಯಾ ಸೇನೆಯ ಅವರ ಮುಂದೆ ನಾಯಕ ಬಾಬರ್ ಅಜಮ್ ಅವರ ಉತ್ಸಾಹವೂ ಕುಗ್ಗಿ ಹೋಗಿದೆ. ಆಟಗಾರರನ್ನು ಸಮಾಧಾನ ಪಡಿಸಲು ಮುಂದಾದ ಬಾಬರ್ ಅಜಮ್, ಭರವಸೆಯನ್ನು ತುಂಬಿ ಆಟಗರರನ್ನು ಹುರಿದುಂಬಿಸಲು ಹರಸಾಹಸ ಪಟ್ಟರೂ ಕೂಡ ಪಾಕಿಸ್ತಾನಿ ಆಟಗಾರರ ಮುಖದಲ್ಲಿ ಸೋಲಿನ ದುಃಖದ ಛಾಯೆ ಎದ್ದು ಕಾಣುತ್ತಿತ್ತು.

Leave A Reply

Your email address will not be published.