ಬಸ್ ಚಲಿಸುತ್ತಿದ್ದಂತೆ ಡ್ರೈವರ್ ಗೆ ಹೃದಯಾಘಾತ | 14 ಪ್ರಯಾಣಿಕರು ಪವಾಡಸದೃಶ ಪಾರು, ಹಲವರಿಗೆ ಗಾಯ

ಸಾವು ಯಾವಾಗ ಯಾರಿಗೆ ಬರುತ್ತೆ ಅನ್ನೋದು ಯಾರಿಗೂ ತಿಳಿಯದ ಒಂದು ರಹಸ್ಯ. ಅಂತಹುದರಲ್ಲಿ ಜನರನ್ನೇ ಹೊತ್ತೊಯ್ಯುವ ಬಸ್ಸಿನ ಡ್ರೈವರಿಗೇ ಚಾಲನೆ ಮಾಡುವ ಸಂದರ್ಭದಲ್ಲೇ ಸಾವು ಬಂದರೆ ಏನಾಗಬೇಡ ಹೇಳಿ. ಹೌದು ಅಂತಹುದೇ ಒಂದು ಘಟನೆ ನಡೆದಿದ್ದು, ಪವಾಡಸದೃಶರಾಗಿ ಪ್ರಯಾಣಿಕರು ಬದುಕುಳಿದಿದ್ದು, ಚಾಲಕ ಮರಣಹೊಂದಿದ್ದಾರೆ.

 

ರಾಜಹಂಸ ಬಸ್ ಚಾಲಕರೋರ್ವರಿಗೆ ಹೃದಯಾಘಾತ ಉಂಟಾಗಿದ್ದು, ಬಸ್ಸಿನಲ್ಲಿದ್ದ 14 ಜನ ಗಾಯಗೊಂಡಿದ್ದಾರೆ.
ರಾಯಚೂರಿನಿಂದ ಬೆಳಗಾವಿಗೆ ಹೊರಟಿದ್ದ ರಾಜಹಂಸ ಬಸ್ ಚಾಲಕನಿಗೆ ಮಾರ್ಗಮಧ್ಯೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ಲಿಂಗಸೂಗೂರಿನ ಚಿಕ್ಕಹೆಸರೂರು ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಬಸ್ ಚಾಲಕ ಶ್ರೀನಿವಾಸ್ ಎಂಬವರು ಹೃದಯಾಘಾತಗೊಂಡಿದ್ದು, ಹಾಗಾಗಿ ಬಸ್ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿಗೆ ಪಲ್ಟಿಯಾಗಿ ಬಿದ್ದಿದೆ. ಆದರೆ ಬಸ್ ಪಲ್ಟಿಯಾದರೂ ಪ್ರಯಾಣಿಕರು ಪಾರಾಗಿದ್ದು, 14 ಮಂದಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಲಿಂಗಸೂಗೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave A Reply

Your email address will not be published.