‘ ಒಂದೂವರೆ ವರ್ಷದ ನಂತರ ಮನೆಯ‌ ಫಸ್ಟ್ ಸಿಲಿಂಡರ್‌ ಮೊನ್ನೆ ಖಾಲಿಯಾಯ್ತು’ ಎಂದ ನಿವೇದಿತಾ ಗೌಡ | ಗ್ಯಾಸ್ ಉಳಿತಾಯದ ಟಿಪ್ಸ್ ಗಾಗಿ ಬೆನ್ನು ಬಿದ್ದ ಗೃಹಿಣಿಯರು !!

ಎಲ್ಲಾ ಗೃಹಿಣಿಯರು ನಟಿ ನಿವೇದಿತಾ ಶೆಟ್ಟಿಯ ಕಡೆ ನೋಡುತ್ತಿದ್ದಾರೆ. ಅದೂ ಅಡುಗೆ ಮನೆಯಲ್ಲಿ ಗ್ಯಾಸ್ ಉಳಿತಾಯ ಮಾಡೋದು ಹೇಗೆ ಎಂಬ ಬಗ್ಗೆ ನಿವೇದಿತಾ ಅಲ್ಲದೇ ಬೇರೆ ಯಾರು ತಾನೇ ಅಮೂಲ್ಯ ಸಲಹೆಗಳನ್ನು ನೀಡಬಲ್ಲವರು ? ಇದಕ್ಕೆ ಕಾರಣ ಕೂಡಾ ಇದೆ. ಅದೇನೆಂದರೆ ಬರೊಬ್ಬರಿ ಒಂದೂವರೆ ವರ್ಷದ ನಂತರ ಆಕೆಯ ಮನೆಯ‌ ಫಸ್ಟ್ ಸಿಲಿಂಡರ್‌ ಮೊನ್ನೆ ಖಾಲಿಯಾಗಿದೆ !!

 

ಗಗನಕ್ಕೆ ಚಿಮ್ಮಿ ನಿಂತ ಬೆಲೆಯ ಗ್ಯಾಸ್ ಸಿಲಿಂಡರ್ ಒಂದೂವರೆ ವರ್ಷದ ಬಳಿಕ ಖಾಲಿಯಾಯ್ತು ಅಂದ್ರೆ ಅಚ್ಚರಿಯ ಮಾತೇ ಸರಿ. ಸಾಮಾನ್ಯ ಜನರಿಗಾದರೆ ಒಂದು ಸಿಲಿಂಡರ್ ಒಂದೂವರೆ ತಿಂಗಳು ಕೂಡಾ.ಬಾರದು. ಅಂತದ್ರಲ್ಲಿ ನಿವೇದಿತಾ ಮನೆಯ ಗ್ಯಾಸು ಒಂದೂವರೆ ವರ್ಷ ಬಾಳಿಕೆ ಬಂದಿದೆ ಎನ್ನುವುದು ಕನಸೇ ಸರಿ.

ಮೊನ್ನೆ ‘ ಬಿಗ್ ಬಾಸ್ ‘ ಖ್ಯಾತಿಯ ನಿವೇದಿತಾ ಗೌಡ ದೀಪಾವಳಿ ಹಬ್ಬದ ಪ್ರಯುಕ್ತ `ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2′ ವಿಶೇಷ ಸಂಚಿಕೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನಿವೇದಿತಾ ಮನೆಯಲ್ಲಿನ ಫಸ್ಟ್ ಸಿಲಿಂಡರ್ ಮೊನ್ನೆ ಖಾಲಿಯಾಗಿದೆ ಎಂದು ಸೃಜನ್ ಲೋಕೇಶ್ ಕಾಲೆಳೆದಿದ್ದಾರೆ. ಅದಕ್ಕೆ ಸರಿಯಾಗಿ ನಿವೇದಿತಾ, ಇನ್ನೂ ಜಾಸ್ತಿ ದಿನ ಬರುತ್ತಿತ್ತು ಅಮ್ಮಾ ನನ್ನ ಮನೆಗೆ ಬಂದು ಅಡುಗೆ ಮಾಡಿ, ಬೇಗ ಖಾಲಿಯಾಗಿ ಹೋಯ್ತು ಎಂದು ಹೇಳಿದ್ದಾರೆ. ಗ್ಯಾಸ್ ಉಳಿತಾಯದ ಕುರಿತು ಬೇರೆಲ್ಲೂ ಹೇಳದ ನಿವೇದಿತಾ ಆ ವಾಹಿನಿಯಲ್ಲಿ ಸಿಕ್ರೆಟ್ ರಿವೀಲ್ ಮಾಡಿದ್ದಾರೆ.

ಇದನ್ನು ಗಮನಿಸಿದರೆ ನಿವೇದಿತಾ ಗೌಡ ಮನೆಯಲ್ಲಿ ಪ್ರತಿದಿನ ಭರ್ಜರಿ ಅಡುಗೆ ಮಾಡುತ್ತಿದ್ದರೆನಿಸುತ್ತದೆ, ಹಾಗಾಗಿ ತಮ್ಮ ಮನೆಯ ಫಸ್ಟ್ ಸಿಲಿಂಡರ್ ಮೊನ್ನೆಯಷ್ಟೇ ಖಾಲಿಯಾಗಿದ್ದು. ಇವಳು ಈ ಶತಮಾನದ ಮಾದರಿ ಹೆಣ್ಣು ಎಂದು ನಿರೂಪಕ ನಿರಂಜನ್ ದೇಶಪಾಂಡೆ ಕೂಡ ತಮಾಷೆ ಮಾಡಿದ್ದಾರೆ. ಹೀಗೆ ನೋಡಿದರೆ ಮನೆಯಲ್ಲಿ ನಿವೇದಿತಾ ಏನೇನೂ ಅಡುಗೆ ಮಾಡಲ್ಲ, ಬಹುಶಃ ಒಂದು ಕಾಫಿ ಕೂಡಾ ಕುದಿಸಿರಲಿಕ್ಕಿಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ನಿವೇದಿತಾಳ ಅಡುಗೆಯ ಸ್ಟೈಲ್ ನೋಡಿ, ನಮ್ಮ ಗೃಹಿಣಿಯರು ಕೂಡಾ ಈ ರೀತಿ ಗ್ಯಾಸ್ ಉಳಿತಾಯಕ್ಕೆ ತೊಡಗಿದರೆ ಏನಾಗಬಹುದು…?!

Leave A Reply

Your email address will not be published.