ವಿರಾಟ್ ಕೊಹ್ಲಿ ಅಬ್ಬರಕ್ಕೆ ಬಾಲ ಮುದುರಿಕೊಂಡ ಪಾಕ್ | ಟಿ 20 ಯಲ್ಲಿ ಶುಭಾರಂಭ ಕಂಡ ಭಾರತ !

ವಿರಾಟ್ ಬ್ಯಾಟಿಂಗ್ ಶಕ್ತಿಯ ವಿರಾಟ್ ಕೊಹ್ಲಿಯ ಕರೇಜಿಯಸ್ ಆಟಕ್ಕೆ ಹೋರಾಟಕ್ಕೆ ಪಾಕಿಸ್ತಾನ ಮುದುರಿ ಕೂತಿದೆ. ಇವತ್ತಿನ ಪಾಕ್ ವಿರುದ್ಧದ ಭಾರತದ ಟಿ 20 ವಿಶ್ವಕಪ್ ನ ಹೈವೋಲ್ಟೆಚ್ ಪಂದ್ಯದಲ್ಲಿ 6 ವಿಕೆಟ್‍ಗಳ ರೋಚಕ ಜಯದೊಂದಿಗೆ ಭಾರತೀಯರಿಗೆ ಜಯದ ಗೌರವ ದೊರೆತಿದೆ.

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನೀಡಿದ 160 ರನ್‍ಗಳ ಉತ್ತಮ ಮೊತ್ತವನ್ನು ಭಾರತಕ್ಕೆ ನೀಡಿತ್ತು. ಈ ಟಾರ್ಗೆಟ್ ಅನ್ನು ಬೆನ್ನಟ್ಟಿದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು. ಅದರ ನಡುವೆಯೇ ಕೊಹ್ಲಿ, ಪಾಂಡ್ಯ ಉತ್ತಮ ಜೊತೆಯಾಟ ಆಡಿದರು. ಅವರ ನೆರವಿನಿಂದ ಕೊನೆಯ ಎಸೆತದಲ್ಲಿ ಅಶ್ವಿನ ಸಿಡಿಸಿದ ಬೌಂಡರಿಯ ಮೂಲಕ ಭಾರತವು 4 ವಿಕೆಟ್‍ಗಳ ಭರ್ಜರಿ ಅಂತರದಿಂದ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗು ಬಡಿಯಿತು. ಈ ಗೆಲುವಿನೊಂದಿಗೆ ಟಿ 20 ವಿಶ್ವಕಪ್‍ನಲ್ಲಿ ಭಾರತ ಶುಭಾರಂಭ ಕಂಡಿದೆ.

ಆರಂಭಿಕ ಅಘಾತದ ನಡುವೆಯೇ ಚೇತರಿಸಿಕೊಂಡ ಭಾರತ :

ಪಾಕಿಸ್ತಾನದ 160 ರನ್‍ಗಳ ಪೈಪೋಟಿಯ ಮೊತ್ತವನ್ನು ಚೇಸಿಂಗ್ ಮಾಡಲು ಹೊರಟ ಭಾರತ ಆರಂಭಿಕ ಅಘಾತ ಎದುರಿಸಿತು. ತಲಾ 4 ರನ್‍ಗಳಿಗೆ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಸುಸ್ತಾಗಿ ಮರಳಿದರು.

ಅವರನ್ನು ಅನುಸರಿಸಿ ಬಂದ ಸೂರ್ಯಕುಮಾರ್ ಯಾದವ್ ಸೈಲೆಂಟ್ ಆಗಿಬಿಟ್ಟರು. ಅಷ್ಟರಲ್ಲಿ ಅವರ ವಿಕೆಟ್ ಒಪ್ಪಿಸುವ ಸಮಯ ಬಂದಿತ್ತು .10 ಎಸೆತ ಎದುರಿಸಿ 15 ರನ್ ಸಿಡಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ಅದರಲ್ಲಿ 2 ಬೌಂಡರಿ ಕೂಡಾ ಸೇರಿದ್ದು, ಸ್ಫೋಟಕ ಆಟ ಪ್ರದರ್ಶಿಸುವ ಮುನ್ಸೂಚನೆ ನೀಡಿದರು. ಆದ್ರೆ ಮೋಡ ಮಾತ್ರ ಕಟ್ಟಿದ್ದು, ಮಳೆ ಸುರಿಯಲೆ ಇಲ್ಲ.
ಅಕ್ಷರ್ ಪಟೇಲ್ 2 ರನ್ ಗೆ ತೃಪ್ತರಾಗಿ ಬ್ಯಾಟ್ ಕಂಕುಳ ಕೆಳಗೆ ಇಟ್ಟುಕೊಂಡು ಪೆವಿಲಿಯನ್ ಸೇರಿದರು. ಅದಾಗಲೇ ಕೇವಲ 31 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಭಾರತೀಯರ ಬೀಪಿ ಚೆಕ್ ಮಾಡುತ್ತಿತ್ತು ಮ್ಯಾಚು. ಆಗ ನಡೆದಿತ್ತು ಮ್ಯಾಜಿಕ್ : ಜುಗಲ್ ಬಂಧಿ ಶುರು ಮಾಡಿಕೊಂಡಿದ್ದರು – ಪಾಂಡ್ಯ ಮತ್ತು ಕೊಹ್ಲಿ !

ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಎಚ್ಚರಿಕೆಯ ಆಟ ಶುರು ಇಟ್ಟುಕೊಂಡರು. ನಿಧಾನವಾಗಿ ಪಾಕ್ ಬೌಲರ್ಗಳ ಬಾಲ್ ನಿಧಾನಕ್ಕೆ ಬಿಸಿ ಪಡೆದುಕೊಂಡಿತು. ಬಾಲ್ ಗಳು ಆಗಾಗ
ಬೌಂಡರಿ ಲೈನ್ ಬೇಲಿಯನ್ನು ನೆಗೆದುಕೊಳ್ಳಲು ಆರಂಭ ಮಾಡಿದ್ದವು. ಹಾಗೆ ಪಾಂಡ್ಯ 40 ರನ್ (37 ಎಸೆತ, 1 ಬೌಂಡರಿ, 3 ಸಿಕ್ಸ್) ಸಿಡಿಸಿದಾರಿ. ಅವರು ಕೊನೆಯ ಓವರ್ ನಲ್ಲಿ ಔಟ್ ಆದರು. ಆಗ ಕೊಹ್ಲಿ ಗೆಲುವಿಗಾಗಿ ಟೊಂಕ ಕಟ್ಟಿ ನಿಂತು ಅಜೇಯ 82 ರನ್ (53 ಎಸೆತ, 6 ಬೌಂಡರಿ, 4 ಸಿಕ್ಸ್) ಚಚ್ಚಿ ಗೆಲುವಿನ ರೂವಾರಿ ಎನಿಸಿದರು. ಹಾಗೆ ಮ್ಯಾಚ್ ಪಾಕಿನಕಡೆಗೆ ವಾಲಿದ್ದರೂ, ಸ್ವಶಕ್ತಿಯಿಂದ ಭಾರತಕ್ಕೆ ಗೆಲುವು ತಂದುಕೊಟ್ಟರು ಪಾಂಡ್ಯ ಮತ್ತು ಕೊಹ್ಲಿ ಜೋಡಿ.

ಭಾರತ ಗೆಲುವು ಸಾಧಿಸುತ್ತಿದ್ದಂತೆ ಮೈದಾನದಲ್ಲಿದ್ದ ಆರ್ ಅಶ್ವಿನ್ ಹಾಗೂ ವಿರಾಟ್ ಕೊಹ್ಲಿ ಸಂಭ್ರಮಾಚರಣೆ ಮಾಡಿದರು. ಅಲ್ಲದೆ ಈ ವೇಳೆ ಕೊಹ್ಲಿ ಖುಷಿಯ ಕಣ್ಣೀರು ಹಾಕಿದರು. ತಂಡದ ಗೆಲುವಿನ ನಂತರ ನಾಯಕ ರೋಹಿತ್ ಶರ್ಮಾ ಮೈದಾನಕ್ಕೆ ಬಂದು ವಿರಾಟ್ ಕೊಹ್ಲಿಯನ್ನು ಭುಜದ ಮೇಲೆ ಎತ್ತಿ ತಿರುಗಿದರು.
ಪಂದ್ಯ ಮುಗಿದ ನಂತರ, ಹಾರ್ದಿಕ್ ಪಾಂಡ್ಯ ಆಂಕರ್ ಇರ್ಫಾನ್ ಪಠಾಣ್ ಅವರೊಂದಿಗೆ ಮಾತನಾಡುವಾಗ, ಅವರ ಕಣ್ಣುಗಳಿಂದ ನೀರು ಬರಲು ಪ್ರಾರಂಭಿಸಿತು. ಈ ಪ್ರೀತಿ ಮತ್ತು ಗೌರವಕ್ಕಾಗಿ ಮಾತ್ರ ನಾವು ಆಡುತ್ತೇವೆ ಎಂದು ಹೇಳಿದರು. ಮುಂದೆಯೂ ಈ ಗೆಲುವಿನ ಓಟವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

https://twitter.com/i/status/1584159515574145025

Leave A Reply

Your email address will not be published.