ಇದೊಂದು ಗ್ರಾಮದಲ್ಲಿ ದಿನಕ್ಕೊಂದು ಗಂಟೆ ಡಿಜಿಟಲ್‌ಗೆ ಬಹಿಷ್ಕಾರ !

ಪ್ರತಿದಿನ ಸಂಜೆ 7 ಗಂಟೆಯಾದಾಕ್ಷಣ ಈ ಮರದ ಊರಿನ ಮುಖ್ಯ ಶಿಕ್ಷಕರು ಜಿಲ್ಲಾ ಪರಿಷತ್‌ ಕಚೇರಿಯ ಮೇಲಿರುವ ಸೈರನ್ ಮೊಳಗಿಸುತ್ತಾರೆ.

ತಕ್ಷಣವೇ ಇಡೀ ಊರಿನಲ್ಲಿ ಟಿವಿ, ಮೊಬೈಲ್ ಎಲ್ಲವೂ ಬಂದ್.ಪ್ರತಿದಿನ ಸಂಜೆ 7 ರಿಂದ 8 ಗಂಟೆಯವರೆಗೆ ಪ್ರತಿ ಮನೆಯಲ್ಲಿ ಮಕ್ಕಳು ಪುಸ್ತಕ ಹಿಡಿದು ಓದುತ್ತಾರೆ.

ಹೌದು, ಎಲ್ಲಾ ಮಕ್ಕಳ ಮೊಬೈಲ್ ಆನ್‌ಲೈನ್‌ ಗೇಮ್‌ಗಳಲ್ಲಿ ಮುಳುಗಿರುವಂತ ಈ ಕಾಲಮಾನದಲ್ಲಿ ಮಹರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಖೇರಾಡೆವಾಂಗಿ ಗ್ರಾಮದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಲಾಗಿದೆ.

ಕೊರೊನಾ ಸಮಯದಲ್ಲಿ ಮಕ್ಕಳು ಪುಸ್ತಕಗಳನ್ನು ಮರೆತು ಮೊಬೈಲ್, ಲ್ಯಾಪ್ ಟಾಪ್‌ನಲ್ಲಿ ತರಗತಿಗೆ ಹಾಜರಾಗುತ್ತಿದ್ದ ಹಿನ್ನೆಲೆಯಲ್ಲಿ ಊರಿನ ಕೆಲವರು ಸೇರಿಕೊಂಡು ಇಂಥದ್ದೊಂದು ಯೋಜನೆ ರೂಪಿಸಿದ್ದಾರೆ.

ಮಕ್ಕಳಿಗೆ ಪುಸ್ತಕ ಪ್ರೀತಿ ಬಿಟ್ಟು ಹೋಗಬಾರದು ಎನ್ನುವ ದೃಷ್ಟಿಯಿಂದ ದಿನಕ್ಕೆ ಒಂದು ಗಂಟೆಯನ್ನು ಕಡ್ಡಾಯವಾಗಿ ಪುಸ್ತಕಗಳಿಗೆ ಮೀಸಲಿಡಲು ಮನೆಯವರು ಮುಂದಾಗಿದ್ದಾರೆ. ಈ ಸಮಯದಲ್ಲಿ ಪೋಷಕರು, ಮನೆಯ ಸದಸ್ಯರು ಯಾರೂ ಕೂಡ ಡಿಜಿಟಲ್ ಸಲಕರಣೆ ಉಪಯೋಗ ಮಾಡುವುದಿಲ್ಲ ಎನ್ನುವುದು ವಿಶೇಷ.

ಊರಿನ ಜನರು ಪ್ರತಿ ಮನೆಗೆ ತೆರಳಿ ಈ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಇದೀಗ ಜಿಲ್ಲೆಯಲ್ಲಿ ಕನಿಷ್ಠ ಆರು ಗ್ರಾಮಗಳು ಈ ಅಭ್ಯಾಸವನ್ನು ರೂಢಿ ಮಾಡಿಕೊಂಡಿವೆ ಎನ್ನುತ್ತಾರೆ ಜಿಲ್ಲೆಯ ಅಧಿಕಾರಿ ಜಿತೇಂದ್ರ.

Leave A Reply

Your email address will not be published.