ಕಾಂತಾರದ ಕ್ಲೈಮಾಕ್ಸ್ ಜತೆ ನಿನ್ನೆಯ ಇಂಡೋ ಪಾಕ್ ಟಿ 20 ಮ್ಯಾಚಿನ ಹೋಲಿಕೆ | ಟ್ರೆಂಡ್ ಸೃಷ್ಟಿಯಾಗಿದೆ “ಓ…” ಕೂಗು !

‘ಕಾಂತರ’ ಇತ್ತೀಚಿನ ಟ್ರೆಂಡ್ ಭರ್ಜರಿ ಹಿಟ್ ಸಿನಿಮಾ. ತುಳುನಾಡಿನ ಸಂಸ್ಕೃತಿ, ದೈವಾರಧನೆಯನ್ನೊಳಗೊಂಡ ‘ಕಾಂತರ’ವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೊನೆಯ 20 ನಿಮಿಷ ರಿಷಬ್ ಶೆಟ್ಟಿಯ ಅಭಿನಯವಂತೂ ಕ್ಲೈಮಾಕ್ಸ್ ಸೀನ್ ನಲ್ಲಿ ಮೈ ನವಿರೇಳಿಸುವ ರೋಮಾಂಚನಕಾರಿ ಅನುಭವ.

 

ಈ ಕ್ಲೈಮಾಕ್ಸ್ ಸೀನ್ ಅನ್ನು ಭಾನುವಾರ ವಿಶ್ವಕಪ್ ಟೂರ್ನಿನ ಭಾರತ -ಪಾಕಿಸ್ತಾನ ಕ್ರಿಕೆಟ್ ತಂಡಗಳ ಪಂದ್ಯಕ್ಕೆ ಹೋಲಿಸಿ ಟ್ವಿಟ್ಟರ್ ನಲ್ಲಿ ಹಂಚಿ ಕೊಳ್ಳಲಾಗಿದೆ. ‘ಡಿವೈನ್ ಸ್ಟಾರ್’ ಎಂದೇ ಪ್ರಸಿದ್ಧಿ ಹೊಂದಿದ ರಿಷಬ್ ಶೆಟ್ಟಿಯು ಕಾಂತರ ಸಿನಿಮಾದ ಕೊನೆಯಲ್ಲಿ ದೈವ ನರ್ತಕನಾಗಿ ‘ಓ…’ ಎಂದು ಕೂಗುವ ದೃಶ್ಯದೊಂದಿಗೆ ನಿನ್ನೆಯ ಪಂದ್ಯದ ದೃಶ್ಯವನ್ನು ಹೋಲಿಸಿ ಇಡಲಾಗಿದೆ.

ಕೊಹ್ಲಿಯು ತಂಡದ ಗೆಲುವಿನ ಸಂದರ್ಭದ ವೇಳೆ ‘ಓ…’ ಎಂದು ಕೂಗುತ್ತಿರುವುದನ್ನು ಹೋಲಿಕೆ ಮಾಡಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಟಿ -20 ಎಷ್ಯಾಕಪ್ ಮೂಲಕ ಮರಳಿರುವ ಕೊಹ್ಲಿ ಮೊದಲ ಪಂದ್ಯದಲ್ಲೇ ಪಾಕ್ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ಗೆಲುವಿಗಾಗಿ ಅಂತಿಮ ಕ್ಷಣದಲ್ಲಿ ಕೊಹ್ಲಿ ತೋರಿದ ಪ್ರದರ್ಶನ ‘ಕಾಂತರ’ ದ ಕ್ಲೈಮಾಕ್ಸ್ ಸೀನ್ ನಂತೆ ಅದ್ಭುತ ಪ್ರದರ್ಶನ ಕಂಡಿದೆ.

ನಿನ್ನೆ ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ ಹೋರಾಡಿ ಗೆಲುವನ್ನು ಕಂಡಿದೆ.159 ರನ್ ಗಳಿಸಿದ್ದ ಪಾಕ್ ತಂಡ ಟೀಮ್ ಇಂಡಿಯಾ ಗೆ 160 ರನ್ ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಸ್ಪೋಟಕ ಬ್ಯಾಟ್ ಗಾರ ಕೊಹ್ಲಿ ಮತ್ತು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯರ ಆಟದಿಂದ ಭರ್ಜರಿ ಜಯಭೇರಿ ಸಾಧಿಸಿದೆ.

https://twitter.com/Vijay1721_/status/1584159433554153472?s=20&t=JTXpR4eXITdz673maLUBAg

Leave A Reply

Your email address will not be published.