Karnataka Weather Report : ವಾಯುಭಾರ ಕುಸಿತ | ಭಾರೀ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಮಳೆಯ ಅವಾಂತರ ಒಂದಲ್ಲ ಎರಡಲ್ಲ. ಪ್ರತಿಯೊಬ್ಬರ ಜೀವನ ಅಸ್ತ ವ್ಯಸ್ತ ಆಗಿ ಕಂಗಳಾಗಿ ಹೋಗಿದ್ದಾರೆ. ಆದ್ದರಿಂದ ಎಲ್ಲೆಡೆ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಸಿತ್ರಾಂಗ್ ಹೆಸರಿನ ಈ ಚಂಡಮಾರುತದಿಂದ ಕರ್ನಾಟಕಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದ್ರೂ ಅಲ್ಪ ಪ್ರಮಾಣದಲ್ಲಿ ಮಳೆ ಆಗುತ್ತೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹೌದು ಬಂಗಾಳಕೊಲ್ಲಿಯಿಂದ ಎದ್ದ ಸಿತ್ರಾಂಗ್ ಚಂಡಮಾರುತ ಉತ್ತರ ಮತ್ತು ಈಶಾನ್ಯದ ಕಡೆಗೆ ವೇಗವಾಗಿ ಚಲಿಸುತ್ತಿದೆ. ಈ ಚಂಡಮಾರುತವು ಕಳೆದ 6 ಗಂಟೆಗಳಲ್ಲಿ ಗಂಟೆಗೆ 15 ಕಿ.ಮೀ ವೇಗದಲ್ಲಿ ಮುನ್ನಡೆದಿದೆ. ಹವಾಮಾನ ಇಲಾಖೆ ಪ್ರಕಾರ, ಈ ಚಂಡಮಾರುತವು ಮುಂದಿನ 12 ಗಂಟೆಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದೆ ಮತ್ತು ಅದರ ತೀವ್ರತೆಯೂ ಹೆಚ್ಚಾಗುತ್ತದೆ. ಇದು ನಾಳೆ ಬೆಳಿಗ್ಗೆ ಅಂದರೆ ಮಂಗಳವಾರ ಅಕ್ಟೋಬರ್ 25 ರಂದು ಬಾಂಗ್ಲಾದೇಶದ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ ಎಂಬ ಮಾಹಿತಿ ದೊರೆತಿದೆ.

ಹವಾಮಾನ ಇಲಾಖೆಯ ಪ್ರಕಾರ, ‘ಸಿತ್ರಾಂಗ್’ ಚಂಡಮಾರುತವು ಮಂಗಳವಾರ ಬೆಳಿಗ್ಗೆ ಟಿಂಕೋನಾ ದ್ವೀಪ ಮತ್ತು ಸ್ಯಾಂಡ್ವಿಪ್ನಲ್ಲಿ ಬಾಂಗ್ಲಾದೇಶದ ಕರಾವಳಿಯನ್ನು ದಾಟಲಿದೆ. ಇದರೊಂದಿಗೆ ಉತ್ತರ ಕರಾವಳಿ ಒಡಿಶಾದಲ್ಲಿ ಈ ಅವಧಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭುವನೇಶ್ವರದ ಹವಾಮಾನ ಇಲಾಖೆಯ ವಿಜ್ಞಾನಿ ಉಮಾಶಂಕರ್ ದಾಸ್ ತಿಳಿಸಿದ್ದಾರೆ.

https://twitter.com/Indiametdept/status/1584300479684964352/photo/1?ref_src=twsrc%5Etfw%7Ctwcamp%5Etweetembed%7Ctwterm%5E1584300479684964352%7Ctwgr%5Eacc85f412ad584d9887bcf9d1c864188b33e6280%7Ctwcon%5Es1_&ref_url=https%3A%2F%2Fd-908668088177319543.ampproject.net%2F2210010655000%2Fframe.html

ಹವಾಮಾನ ಇಲಾಖೆಯ ಪ್ರಕಾರ ಜಿಲ್ಲಾವಾರು ಹವಾಮಾನ ವರದಿ:
(ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)
ಬೆಂಗಳೂರು: 27-15,
ಚಿಕ್ಕಬಳ್ಳಾಪುರ:26-14,
ಬಾಗಲಕೋಟೆ: 30-17,
ಬೆಂಗಳೂರು ಗ್ರಾಮಾಂತರ: 27-15,
ಕೋಲಾರ: 27-16,
ಮಂಗಳೂರು: 31-22,
ಕಾರವಾರ: 32-23,
ರಾಯಚೂರು: 30-18,
ಶಿವಮೊಗ್ಗ: 29-16,
ಚಾಮರಾಜನಗರ: 29-18,
ಬೀದರ್: 28-16,
ಕಲಬುರಗಿ: 29-17,
ಹಾವೇರಿ: 30-17,
ಕೊಪ್ಪಳ: 30-18
ಚಿಕ್ಕಮಗಳೂರು:27-13,
ದಾವಣಗೆರೆ: 29-16,
ರಾಮನಗರ: 28-15,
ವಿಜಯಪುರ: 29-17,
ಹಾಸನ: 28-14,
ಬೆಳಗಾವಿ: 28-16,
ಮಡಿಕೇರಿ: 26-13,
ಯಾದಗಿರಿ: 31-18,
ಬಳ್ಳಾರಿ: 30-18,
ಗದಗ: 29-17,
ತುಮಕೂರು: 27-14,
ಉಡುಪಿ: 32-22,
ಮೈಸೂರು: 29-17,
ಮಂಡ್ಯ: 29-15,

ಈಗಾಗಲೇ ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗುತ್ತಿದೆ. ನದಿಪಾತ್ರದ ಮೂಲಕ ಯಾದಗಿರಿಯ ಬಸವ ಸಾಗರಕ್ಕೆ ಹೊರ ಹರಿವು ಹೆಚ್ಚಾಗಿದೆ. 26 ಕ್ರಸ್ಟ್ ಗೇಟ್ ಗಳ ಮೂಲಕ 1.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ.

Leave A Reply

Your email address will not be published.