Ola S1 Air : ಓಲಾ ಎಸ್ 1 ಏರ್ ಇವಿ ಸ್ಕೂಟರ್ | ಅಚ್ಚರಿಯ ಬೆಲೆಯಲ್ಲಿ ನಿಮ್ಮ ಮುಂದೆ!!!

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪಾದಕ ಕಂಪನಿ ಓಲಾ ಎಲೆಕ್ಟ್ರಿಕ್ ದೀಪಾವಳಿಗೂ ಮುನ್ನವೇ ಗ್ರಾಹಕರಿಗೆ ಆಫರ್ ನೀಡಲು ಮುಂದಾಗಿದೆ.

ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಓಲಾ ಎಲೆಕ್ಟ್ರಿಕ್ ಭಾರತೀಯ ಮಾರುಕಟ್ಟೆಯಲ್ಲಿ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಪಡೆದುಕೊಳ್ಳುವ ಸುವರ್ಣ ಅವಕಾಶ ಕಲ್ಪಿಸಿದೆ.


ಎಸ್1 ಪ್ರೊ ಮತ್ತು ಎಸ್1 ಬಿಡುಗಡೆಯ ನಂತರ ಕಂಪನಿಯು ಇದೀಗ ಎಸ್1 ಏರ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಸಾಂಪ್ರದಾಯಿಕ ಪೆಟ್ರೋಲ್ ಸ್ಕೂಟರ್ ಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.


Ola S1 Air ಹೊಸ ಮಾಡೆಲ್ ಸ್ಕೂಟಿಯ ಬೆಲೆಯನ್ನು 84,999 ರೂ ಗಳಿಗೆ ನಿಗದಿಪಡಿಸಲಾಗಿದ್ದು, ಆದರೆ ಅಕ್ಟೋಬರ್ 24 ರ ಒಳಗೆ ಬುಕ್ಕಿಂಗ್ ಮಾಡಿಕೊಳ್ಳುವ ಗ್ರಾಹಕರಿಗೆ ಎಕ್ಸ್ ಶೋ ರೂಂ ಪ್ರಕಾರ 79,999 ರೂ. ಬೆಲೆಯಲ್ಲಿ ಲಭ್ಯವಿರಲಿದೆ.


ಆಸಕ್ತ ಖರೀದಿದಾರರು ಇಂದಿನಿಂದ (ಅಕ್ಟೋಬರ್ 22) ₹999 ಪಾವತಿಸಿ ವಾಹನವನ್ನು ಮುಂಗಡವಾಗಿ ಬುಕ್ ಮಾಡಬಹುದಾಗಿದ್ದು, ಅಕ್ಟೋಬರ್ 24 ರವರೆಗೆ ₹79,999ರ ರಿಯಾಯಿತಿ ದರದಲ್ಲಿ ಲಭ್ಯ ಇರುತ್ತದೆ.

ಆದರೆ 25ರ ನಂತರ ಬುಕಿಂಗ್ ಸಲ್ಲಿಸುವ ಗ್ರಾಹಕರಿಗೆ ರೂ. 84,999 ಬೆಲೆ ವಿಧಿಸುವುದಾಗಿ ಕಂಪನಿ ಘೋಷಣೆ ಮಾಡಿದೆ.


ಎಲೆಕ್ಟ್ರಿಕ್ ಸ್ಕೂಟರ್‌ನ ವಿತರಣೆಗಳು 2023ರ ಏಪ್ರಿಲ್ ಮೊದಲ ವಾರದಲ್ಲಿ, 2023ರ ಫೆಬ್ರವರಿ ಪಾವತಿ ವಿಂಡೋ ತೆರೆಯುವುದರೊಂದಿಗೆ ಪ್ರಾರಂಭ ಆಗುತ್ತದೆ.


ಓಲಾ S1 ಏರ್ ಕಂಪನಿಯ ಮೂರನೇ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಕಂಪನಿಯು ಸದ್ಯಕ್ಕೆ ದೇಶದಲ್ಲಿ ಓಲಾ S1 ಮತ್ತು ಓಕಾ S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೀಡುತ್ತಿದೆ.

ಎಲ್ಲ-ಹೊಸ ಓಲಾ S1 ಏರ್ 2.5KWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು 4.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.


ಹೊಸ ಎಸ್1 ಏರ್ ಸ್ಕೂಟರ್ ಗೆ ವಿಭಿನ್ನ ವಿನ್ಯಾಸ ನೀಡಿದ್ದು, ಸಸ್ಷೆಂಷನ್ ಸೌಲಭ್ಯಕ್ಕಾಗಿ ಹೊಸ ಸ್ಕೂಟರಿನ ಮುಂಭಾಗದಲ್ಲಿ ಸ್ಪೋರ್ಟ್ಸ್ ಕನ್ವರ್ಷನಲ್ ಟೆಲಿಸ್ಕೊಪಿಕ್ ಮತ್ತು ಹಿಂಬದಿಯಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ವರ್ ನೀಡಲಾಗಿದೆ.


ಹಾಗೆಯೇ ಹೊಸ ಸ್ಕೂಟರಿನಲ್ಲಿ ಕಡಿಮೆ ಸಾಮರ್ಥ್ಯದ ಬ್ಯಾಟರಿ ನೀಡಿರುವುದರಿಂದ ಈ ಬಾರಿ ಪ್ಲ್ಯಾಟ್ ಫುಟ್ ರೇಸ್ಟ್ ಸಿಗಲಿದ್ದು, ನಿಯೋ ಮಿಂಟ್, ಕೋಲ್ ಗ್ಲಾಮ್, ಲಿಕ್ವಿಡ್ ಸಿಲ್ವರ್ ಮತ್ತು ಜೆಟ್ ಬ್ಲ್ಯಾಕ್, ಪೊರ್ಸೊಲೈನ್ ವೈಟ್ ಬಣ್ಣಗಳ ಆಯ್ಕೆಗಳಿವೆ.


ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ 2.5kWh ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದ್ದು, ಈ ಹೊಸ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಇಕೋ ಮೋಡ್‌ನಲ್ಲಿ ಸವಾರಿ ಮಾಡುವಾಗ ಸಿಂಗಲ್ ಚಾರ್ಜ್‌ನಲ್ಲಿ 101 ಕಿಲೋಮೀಟರ್ (ARAI) ರೇಂಜ್ ಅನ್ನು ನೀಡುತ್ತದೆ.

ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಪ್ಯಾಕ್ ಹಬ್-ಮೌಂಟೆಡ್ ಎಲೆಕ್ಟ್ರಿಕ್ ಮೋಟರ್ ಅನ್ನು ಫೀಡ್ ಮಾಡುತ್ತದೆ ಅದು 4.5kW ಅಥವಾ 6.03 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 4.3 ಸೆಕೆಂಡುಗಳಲ್ಲಿ 0-40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ .


ಹೊಸ ಸ್ಕೂಟರ್ ನಲ್ಲಿ ಕನೆಕ್ಟೆಡ್ ಫೀಚರ್ಸ್ ಗಳಿಗಾಗಿ 7 ಇಂಚಿನ ಟಚ್ ಸ್ಕೀನ್ ಡಿಸ್ ಪ್ಲೇ ನೀಡಲಾಗಿದ್ದು, ಇನ್ ಬಿಲ್ಟ್ ಮೂವ್ ಎಸ್ಒ ಹೊಂದಿರುವ ಹೊಸ ಸ್ಕೂಟರ್ ನಲ್ಲಿ ವೆಕೆಷನ್ ಮೋಡ್, ಮಲ್ಟಿಪಲ್ ಪ್ರೊಫೈಲ್, ಕಾಲಿಂಗ್, ನ್ಯಾವಿಗೇಷನ್ ಸೌಲಭ್ಯಗಳಿವೆ.

ಇದು ಮೂರು ವಿಭಿನ್ನ ವಿಧಾನಗಳನ್ನು ಹೊಂದಿದೆ – ಇಕೋ, ಸ್ಪೋರ್ಟ್ ಮತ್ತು ರಿವರ್ಸ್. ಸ್ಕೂಟರ್ 99ಕೆಜಿ ತೂಕ ಹೊಂದಿದ್ದು, ಇದು ಅದೇ ಬೆಲೆಯ ಇಂಟರ್ನಲ್‌ ಕಂಬಶ್ಚನ್ ಎಂಜಿನ್ (ICE) ಸ್ಕೂಟರ್‌ಗಳಿಗಿಂತ ಹಗುರವಾಗಿದೆ.

ಹೊಸ ಓಲಾ S1 ಏರ್‌ನೊಂದಿಗೆ ಗ್ರಾಹಕರು ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳಲ್ಲಿ ಡ್ರಮ್ ಬ್ರೇಕ್‌ಗಳನ್ನು ಪಡೆಯಬಹುದು.

ಒಟ್ಟಾರೆಯಾಗಿ, ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಕೈಗೆಟುಕುವ ಬೆಲೆ ಮತ್ತು ಉತ್ತಮ ರೇಂಜ್ ಅನ್ನು ಹೊಂದಿದೆ.

Leave A Reply

Your email address will not be published.