Viral video: Village Wedding : ಮದುವೆ ಮನೆಯಲ್ಲಿ ತಾವು ಉಂಡ ತಟ್ಟೆಯನ್ನು ತಾವೇ ತೊಳೆದ ಅತಿಥಿಗಳು | ಅದು ಎಲ್ಲೆಂದು ತಿಳಿದರೆ ಖಂಡಿತ ಆಶ್ಚರ್ಯ ಪಡ್ತೀರಿ!!!

ಕಾಲ ಎಷ್ಟೇ ಬದಲಾದರೂ ಕೂಡ ಹಳ್ಳಿಯ ಜನರು ತಮ್ಮ ಸಂಸ್ಕೃತಿ ಆಚರಣೆ ಹವ್ಯಾಸಗಳನ್ನೂ ಎಂದಿಗೂ ಬಿಡುವುದಿಲ್ಲ.

 

ಅದರ ಜೊತೆಗೆ ಪಟ್ಟಣದ ಮಂದಿಯಂತೆ ಥಳಕು ಬಳಕು ಜೀವನಕ್ಕೆ ಒಗ್ಗಿಕೊಳ್ಳದೆ ಅನಿಸಿದನ್ನು ನೇರವಾಗಿ ಹೇಳಿ ಮುಗ್ಧತೆಯ ಜೊತೆಗೆ ಪ್ರಬುದ್ಧತೆಯನ್ನೂ ಹೊಂದಿರುತ್ತಾರೆ.ನಡೆ ನುಡಿಯಲ್ಲು ಅಷ್ಟೆ ಸರಳತೆಯ ಶೋಭೆಯ ಹೊತ್ತು ತಿರುಗುತ್ತಾರೆ.

ಮದುವೆಯಲ್ಲಿ ನಡೆದ ಪ್ರಹಸನವೊಂದು ಬಾರಿ ದೊಡ್ದ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದು, ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ.

ಅಷ್ಟಕ್ಕೂ ನಡೆದಿದ್ದಾರೂ ಏನು?? ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಮದುವೆ ಮನೆಯಲ್ಲಿ ಅಳವಡಿಸಿದ್ದ ಕಾರಂಜಿಯಲ್ಲಿ ಪಾತ್ರೆ ತೊಳೆದಿರುವ ಘಟನೆ ಸಾಕಷ್ಟು ವೈರಲ್ ಆಗಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ.

ಮದುವೆಯಲ್ಲಿ ಆಕರ್ಷಣೆಗಾಗಿ ನೀರಿನ ಕಾರಂಜಿ ಅಳವಡಿಸಲಾಗಿತ್ತು. ಪಾಪ..ಹಳ್ಳಿಯ ಜನರಿಗೇನು ಗೊತ್ತು?? ಇದು ಆಕರ್ಷಣೆಗೆ ಅಳವಡಿಸಿದ್ದು ಎಂದು?? ಹಾಗಾಗಿ ಉಂಡ ತಕ್ಷಣ ತಟ್ಟೆಗಳನ್ನು ತೊಳೆದಿಡಲು ನೀರು ಹುಡುಕಿದಾಗ ಎದುರಿಗೆ ತಕ್ಷಣ ಕಂಡ ಕಾರಂಜಿಯಿಂದ ತಟ್ಟೆಗಳನ್ನು ತೊಳೆದಿಟ್ಟಿದ್ದಾರೆ.

ಈ ವೀಡಿಯೊ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕರೆ, ವಿಡಿಯೋ ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

ಕೆಲವರು ತಮ್ಮ ತಟ್ಟೆಗಳನ್ನು ಸ್ವತಃ ತೊಳೆಯುತ್ತಿದ್ದಾರೆ ಎನ್ನುವ ಅಂಶವನ್ನು ಗಮನಿಸಿ ಪ್ರಶಂಸಿಸಿದರೆ, ಮತ್ತೆ ಕೆಲವರು, ಸದ್ಯ ಅಲ್ಲಿಯ ಗಾರ್ಗಲ್​ ಮಾಡಲಿಲ್ಲವಲ್ಲ ಎಂದು ಹಾಸ್ಯ ಮಾಡಿದ್ದಾರೆ.


ನಗರಪ್ರದೇಶಗಳಿಗೆ ಹೋಲಿಸಿದರೆ ಹಳ್ಳಿಗರಲ್ಲಿ ಸಂಸ್ಕೃತಿಯ ವಿಷಯವಾಗಿ ತಿಳಿವಳಿಕೆ ಮತ್ತು ಬುದ್ಧಿವಂತಿಕೆ ಹೆಚ್ಚಿದೆ ಎಂದು ಹೇಳಿಕೆ ನೀಡಿದರೆ, ಮತ್ತೆ ಕೆಲವರು ನಗರಪ್ರದೇಶದ ಮಂದಿ ನಯನಾಜೂಕು, ಅಲಂಕಾರ, ಆಡಂಬರದ ನೆಪದಲ್ಲಿ ಮನಸ್ಸನ್ನು ಬರಡಾಗಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.


ಹಳ್ಳಿಗರು ಏನಿದ್ದರು ಸಾದಾ ಸೀದಾ ಸ್ವಚ್ಛ ಮನಸ್ಸಿನವರು ಅದರ ಬದಲಾಗಿ ಎಲ್ಲೆಂದರಲ್ಲಿ ಎಂಜಲು ತಟ್ಟೆಗಳನ್ನು ಇಟ್ಟು ಹೋಗದೆ, ಕಾರಂಜಿಯ ನೀರಲ್ಲಿ ತಟ್ಟೆ ತೊಳೆದಿಟ್ಟು ಹೋಗಿದ್ದಾರೆ.

https://twitter.com/JaikyYadav16/status/1582566994976514049?ref_src=twsrc%5Etfw%7Ctwcamp%5Etweetembed%7Ctwterm%5E1582566994976514049%7Ctwgr%5E026dd8d5579f2bbbbfe3ed7687e329ac6b9368f2%7Ctwcon%5Es1_c10&ref_url=http%3A%2F%2Fapi-news.dailyhunt.in%2F

ವೈರಲ್ ಆಗಿರುವ ಈ ವಿಡಿಯೋ ಅನ್ನು ಅಕ್ಟೋಬರ್ 18ರಂದು ಟ್ವೀಟ್​ ಮಾಡಲಾಗಿದ್ದು, @JaikyYadav16 ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.

ಹಳ್ಳಿಯ ಜನರು ಆಹಾರ, ನೀರಿನ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ವಹಿಸುತ್ತಾರೆ. ಏಕೆಂದರೆ ಆ ವಸ್ತುಗಳ ಮೌಲ್ಯ ಹಾಗೂ ತಮ್ಮ ಕೃಷಿ ಚಟುವಟಿಕೆಗಳಿಗೆ ದಿನನಿತ್ಯ ಬಳಸುವ ನೀರಿನ ಮಹತ್ವ ಹಳ್ಳಿಯವರಿಗಿಂತ ಹೆಚ್ಚಾಗಿ ಬೇರೆ ಯಾರು ಅರಿತಿರಲು ಸಾಧ್ಯವೇ ಇಲ್ಲ.

ಬಹುಶಃ ಹಳ್ಳಿಗರಿಗೆ ಇದನ್ನು ತಿಳಿ ಹೇಳುವವರು ಯಾರಾದರು ಇದ್ದಿದ್ದರೆ ಖಂಡಿತ ಕಾರಂಜಿ ನೀರಲ್ಲಿ ತಟ್ಟೆ ತೊಳೆಯುತ್ತಿರಲಿಲ್ಲ. ಆದರೂ ಅದೇನು ಮಹಾಪರಾಧವಂತು ಅಲ್ಲ.!!! ಇದು ಕೇವಲ ಅವರ ಮುಗ್ಧತೆಯ ಸಂಕೇತವಷ್ಟೆ!!

Leave A Reply

Your email address will not be published.