Google Contacts : ಮೊಬೈಲ್ ನಲ್ಲಿದ್ದ ಕಾಂಟ್ಯಾಕ್ಟ್ ಡಿಲೀಟ್ ಆದರೆ ವಾಪಾಸ್ ಪಡೆಯುವ ಬಗೆ ಹೇಗೆ? ಸುಲಭ ಟ್ರಿಕ್ ಇಲ್ಲಿದೆ!!!
ಈಗಿನ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನಕ್ಕೆ ಸಂಬಂಧ ಪಟ್ಟ ಪ್ರತಿಯೊಂದು ಸಮಸ್ಯೆಗಳಿಗೆ ಒಂದು ಪರಿಹಾರ ಇದ್ದೇ ಇರುತ್ತದೆ. ಹಾಗಿರುವಾಗ ಚಿಂತೆ ಯಾಕೆ.
ಹೌದು ನಿಮ್ಮ ಫೋನ್ ಕಳೆದುಹೋದಾಗ, ಹಾನಿಗೊಳಗಾದಾಗ, ಹೊಸ ಮೊಬೈಲ್ ಅನ್ನು ಖರೀದಿಸಿದಾಗ ಅಥವಾ ತಪ್ಪಿ ಕಾಂಟೆಕ್ಟ್ ಹೇಗೋ ಡಿಲೀಟ್ ಆದಾಗ ಅದನ್ನು ಪುನಃ ಪಡೆಯುವುದು ದೊಡ್ಡ ಸಮಸ್ಯೆ ಅಂದುಕೊಳ್ಳಬೇಡಿ.
ಸ್ಮಾರ್ಟ್ಫೋನ್ನಲ್ಲಿ ಕಾಂಟಾಕ್ಟ್ ಎನ್ನುವುದು ಅತ್ಯಂತ ಪ್ರಮುಖವಾದದ್ದು. ಯಾರೋ ಅತೀ ಮುಖ್ಯ ವ್ಯಕ್ತಿ ಯ ನಂಬರ್ ಕಳೆದು ಕೊಂಡರೆ ಒಮ್ಮೆಲೇ ಚಿಂತೆ ಆಗೋದು ಸಹಜ.
ನಮ್ಮ ಕುಟುಂಬದವರು, ಸ್ನೇಹಿತರಿಂದ ಹಿಡಿದು ಅಗತ್ಯ ವ್ಯಕ್ತಿಗಳ ನಂಬರ್ ಸೇವ್ ಮಾಡಿ ಇಟ್ಟಿರುತ್ತವೆ. ಆದರೆ, ಫೋನ್ ಕಳೆದುಹೋದಾಗ, ಹಾನಿಗೊಳಗಾದಾಗ, ಹೊಸ ಮೊಬೈಲ್ ಅನ್ನು ಖರೀದಿಸಿದಾಗ ಅಥವಾ ತಪ್ಪಿ ಕಾಂಟೆಕ್ಟ್ ಹೇಗೋ ಡಿಲೀಟ್ ಆದಾಗ ಅದನ್ನು ಪುನಃ ಪಡೆಯುವುದು ಮತ್ತು ಕಾಂಟಾಕ್ಟ್ ಲಿಸ್ಟ್ ನಲ್ಲಿರುವ ಅಷ್ಟೂ ನಂಬರ್ಗಳನ್ನು ಮತ್ತೆ ಪಡೆಯುವುದು ಸಾಧ್ಯವಿಲ್ಲ ಅಂದುಕೊಳ್ಳುವುದು ನಮ್ಮ ದಡ್ಡತನ. ಆದರೆ ಈಗ ಈ ಸಮಸ್ಯೆಗೂ ಪರಿಹಾರ ಇದೆ.
ಹೌದು ಕೇವಲ ನಿಮ್ಮ ಇ ಮೇಲ್ ಐಡಿ ಹಾಕಿ ಲಾಗಿನ್ ಆದರೆ, ಎಲ್ಲವೂ ಅಲ್ಲಿ ನಿಮಗೆ ಸಿಗುತ್ತದೆ. ಮತ್ತು ಡಿಫಾಲ್ಟ್ ಸ್ಟೋರೇಜ್ ಇ ಮೇಲ್ ಇದ್ದರೆ, ಪ್ರತಿ ಕಾಂಟಾಕ್ಟ್ ಸೇರಿಸುತ್ತಾ ಹೋದಾಗಲೂ, ಅದು ಫೋನ್ನಲ್ಲಿ ಇ ಮೇಲ್ಗೆ ಸಿಂಕ್ ಆಗಿ ಅಪ್ಡೇಟ್ ಆಗುತ್ತದೆ.
ನಿಮ್ಮ ಗೂಗಲ್ ಅಕೌಂಟ್ ಮೂಲಕ ನಿಮ್ಮ ಬಳಿ ಡಿಲೀಟ್ ಆದ ಕಾಂಟಾಕ್ಟ್ ಅನ್ನು ತಕ್ಷಣವೇ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಹೊಸ ಫೋನ್ ಖರೀದಿಸಿದರೆ ಗೂಗಲ್ ಅಕೌಂಟ್ ಮೂಲಕ ಲಾಗಿನ್ ಆದರೆ ಅಲ್ಲೂ ಸಿಗುತ್ತದೆ. ಇದರ ಮೂಲಕ ನಿಮ್ಮ ಕಾಂಟಾಕ್ಟ್ ಅನ್ನು ಇತರರೊಂದುಗೆ ಶೇರ್ ಕೂಡ ಮಾಡಬಹುದು.
ಪ್ರಮುಖ ಕ್ರಮಗಳು:
•ಮೊದಲು ನೀವು ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ಗೂಗಲ್ ಕಾಂಟಾಕ್ಟ್ ಆ್ಯಪ್ ತೆರೆಯಿರಿ.
•ಅಲ್ಲಿ ಕಾಣಿಸುವ ಫಿಕ್ಸ್ ಮತ್ತು ಮ್ಯಾನೇಜ್ ಬಟಲ್ ಮೇಲೆ ಕ್ಲಿಕ್ ಮಾಡಿ.
•ನಂತರ ಎಕ್ಸ್ಪೋರ್ಟ್ ಟು ಫೈಲ್ ಬಟನ್ ಒತ್ತಿರಿ.
•ನೀವು ಕಾಂಟಾಕ್ಟ್ಗಳನ್ನು ಎಕ್ಸ್ಪೋರ್ಟ್ ಮಾಡಬಯಸುವ ಅಕೌಂಟ್ ಆಯ್ಕೆ ಮಾಡಿ.
•ಕೊನೆಯದಾಗಿ Export to .VCF file ಒತ್ತಿ
ಅಟೊಮೆಟಿಕ್ ಬ್ಯಾಕಪ್ ವಿಧಾನ :
•ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಸೆಟ್ಟಿಂಗ್ಗಳ ಅಪ್ಲಿಕೇಶನ್ ತೆರೆಯಿರಿ.
•ಸಿಸ್ಟಮ್ ಸೆಟ್ಟಿಂಗ್ಗಳ ಮೇಲೆ ಟ್ಯಾಪ್ ಮಾಡಿ.
ಬ್ಯಾಕಪ್ ಬಟನ್ ಒತ್ತಿರಿ.
•Google ಡ್ರೈವ್ಗೆ ಬ್ಯಾಕಪ್ ಮಾಡಲು ಟಾಗಲ್ ಅನ್ನು ಆನ್ ಅಥವಾ ಆಫ್ ಮಾಡಿದರೆ ಆಯಿತು.
ಡುಪ್ಲಿಕೇಟ್ ಕಾಂಟಾಕ್ಟ್ ಡಿಲೀಟ್ ಮಾಡುವ ವಿಧಾನ :
ಸ್ಮಾರ್ಟ್ಫೋನ್ ಮೂಲೆಯಲ್ಲಿ ಅಡಗಿರುವ ನಕಲಿ ಕಾಂಟಾಕ್ಟ್ಗಳನ್ನ ನಿಮಿಷಾರ್ಧದಲ್ಲಿ ಡಿಲೀಟ್ ಮಾಡಬಹುದಾಗಿದೆ. ಅದಕ್ಕಾಗಿ ನಾನಾ ಥರ್ಡ್ ಪಾರ್ಟಿ ಆ್ಯಪ್ಗಳು ಪ್ಲೇ ಸ್ಟೋರ್ ನಲ್ಲಿವೆ. ಹಾಗಾಗಿ ಅದನ್ನು ಬಳಸಿ ಸರಿಯಾದ ಕಾಂಟಾಕ್ಟ್ ಯಾವುದು? ಡುಪ್ಲಿಕೇಟ್ ಕಾಂಟಾಕ್ಟ್ ಯಾವುದು ಎಂದು ತಿಳಿಯುವ ಮೂಲಕ ಬೇಡವಾದ ನಂಬರ್ ಅನ್ನು ಡಿಲೀಟ್ ಮಾಡಬಹುದು.
ಡುಪ್ಲಿಕೇಟ್ ಕಾಂಟಾಕ್ಟ್ ಡಿಲೀಟ್ ಮಾಡುವ ಸಮಸ್ಯೆಗೆ ಪರಿಹಾರವನ್ನು ನೀಡುವ ಸಲುವಾಗಿ ಡುಪ್ಲೀಕೆಟ್ ಕಾಂಟಾಕ್ಟ್ಗಳನ್ನು ಡಿಲೀಟ್ ಮಾಡುವ ಮತ್ತು ಮರ್ಜ್ ಮಾಡಲು ಅನೇಕ ಆ್ಯಪ್ಗಳು ಮತ್ತು ಸೇವೆಗಳು ಲಭ್ಯವಿದ್ದು, ಇವುಗಳ ಬಳಕೆಯಿಂದಾಗಿ ಆಂಡ್ರಾಯ್ಡ್ ಫೋನಿನಲ್ಲಿ ಡುಪ್ಲಿಕೇಟ್ ಕಾಂಟಾಕ್ಟ್ ಗಳನ್ನು ಮ್ಯಾನೆಜ್ ಮಾಡುವುದು ಇನ್ನು ಮುಂದೆ ನಿಮಗೆ ಸುಲಭವಾಗಲಿದೆ.
ನಿಮ್ಮ ಕಾಂಟಾಕ್ಟ್ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವ ಸಲುವಾಗಿ ಸಿಂಪಲ್ ಮರ್ಜ್ ಡುಪ್ಲಿಕೆಟ್ಸ್ ಎನ್ನುವ ಆ್ಯಪ್ ಒಂದನ್ನು ನಿಮ್ಮ ಸ್ಮಾರ್ಟ್ಫೋನಿನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. ಡೌನ್ಲೋಡ್ ಮಾಡಿದ ನಂತರದಲ್ಲಿ ಈ ಆ್ಯಪ್ ಅನ್ನು ಸ್ಮಾರ್ಟ್ಫೋನಿನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ. ಇದಾದ ಮೇಲೆ ಆ್ಯಪ್ ನಿಮ್ಮ ಸ್ಮಾರ್ಟ್ಫೋನಿನಲ್ಲಿರುವ ಕಾಂಟಾಕ್ಟ್ ಗಳನ್ನು ಸ್ಕ್ಯಾನ್ ಮಾಡಿಕೊಳ್ಳುತ್ತದೆ. ಮಾಡಿಕೊಳ್ಳಿ. ಇದಾದ ಮೇಲೆ ಆ್ಯಪ್ ನಿಮ್ಮ ಸ್ಮಾರ್ಟ್ಫೋನಿನಲ್ಲಿರುವ ಕಾಂಟಾಕ್ಟ್ ಗಳನ್ನು ಸ್ಕ್ಯಾನ್ ಮಾಡಿಕೊಳ್ಳುತ್ತದೆ.
ಮುಖ್ಯ ವಿಷಯ ಎಂದರೆ ಗೂಗಲ್ ಅಕೌಂಟ್ ಮೂಲಕ ನಿಮ್ಮ ಬಳಿ ಡಿಲೀಟ್ ಆದ ಕಾಂಟಾಕ್ಟ್ ಅನ್ನು ತಕ್ಷಣವೇ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಹೊಸ ಫೋನ್ ಖರೀದಿಸಿದರೆ ಗೂಗಲ್ ಅಕೌಂಟ್ ಮೂಲಕ ಲಾಗಿನ್ ಆದರೆ ಅಲ್ಲೂ ಸಿಗುತ್ತದೆ ಆದರೆ ಗೂಗಲ್ ಅಕೌಂಟ್ ನ ಪಾಸ್ವರ್ಡ್ ನ್ನು ಕಳೆದುಕೊಳ್ಳಬಾರದು. ನಾವು ಪಾಸ್ವರ್ಡ್ ನ್ನು ಸರಿಯಾಗಿ ನೆನಪಿನಲ್ಲಿ ಇರಿಸಬೇಕಾಗುತ್ತದೆ.