Post Office, FD, RD : ಪೋಸ್ಟ್ ಆಫೀಸ್, ಎಫ್ ಡಿ, ಆರ್ ಡಿ ಆನ್ಲೈನ್ ನಲ್ಲಿ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
ಟೈಮ್ ಅನ್ನೋದು ತನ್ನಷ್ಟಕ್ಕೆ ಓಡುತ್ತಲೇ ಇರುತ್ತೆ. ಮನುಷ್ಯರು ಸಹ ತಮ್ಮ ಜೀವನದಲ್ಲಿ ಮನೆ ಕೆಲಸ ಕಚೇರಿ ಕೆಲಸ, ಜವಾಬ್ದಾರಿ ಕರ್ತವ್ಯಗಳ ನಡುವೆ ತಮ್ಮ ಕೆಲವು ಸಣ್ಣ ಪುಟ್ಟ ಕೆಲಸಗಳಿಗೆ ಸಮಯ ಇಲ್ಲದಂತ ಪರಿಸ್ಥಿತಿ ಇರುತ್ತದೆ. ಆದರೆ ಈ ಸಣ್ಣ ಪುಟ್ಟ ಕೆಲಸಗಳಿಗಾಗಿ ಎಲ್ಲ ಕಾರ್ಯವನ್ನು ಆನ್‌ಲೈನ್ ಮೂಲಕವೇ, ಸರಳ ಹಾಗೂ ಸುಲಭವಾಗಿ ಮಾಡಬಹುದಾಗಿದೆ.
ಹೌದು ಈಗಾಗಲೇ ಹಲವಾರು ಬ್ಯಾಂಕುಗಳು ತಮ್ಮ ಎಲ್ಲ ಬ್ಯಾಂಕಿಂಗ್ ವಹಿವಾಟುಗಳನ್ನು ಗ್ರಾಹಕರು ಆನ್‌ಲೈನ್ ಮೂಲಕವೇ ನಡೆಸಲು ಅವಕಾಶ ನೀಡಿದೆ. ಈ ನಡುವೆ ನಾವು ಅಂಚೆ ಕಚೇರಿಯ ಎಫ್‌ಡಿ ಹಾಗೂ ಆರ್‌ಡಿಗೆ ಆನ್‌ಲೈನ್‌ನಲ್ಲಿ ಹೂಡಿಕೆ ಹಾಗೂ ಆನ್‌ಲೈನ್‌ನಲ್ಲಿ ಅದರ ಬ್ಯಾಲೆನ್ಸ್ ಚೆಕ್ ಮಾಡಲು ಸಹ ಸಾಧ್ಯ.
ಈ ಹಿಂದೆ ಅಂಚೆ ಕಚೇರಿಯ ಯಾವುದೇ ವಹಿವಾಟು ವ್ಯವಹಾರ ನಡೆಸಲು ನಾವು ಅಂಚೆ ಕಚೇರಿಗೆ ಭೇಟಿ ನೀಡಬೇಕಾಗಿತ್ತು. ಇಲ್ಲವಾದರೆ ಅಂಚೆ ಕಚೇರಿ ಸಿಬ್ಬಂದಿ ಮೂಲಕ ವಹಿವಾಟು ನಡೆಸಬೇಕಾಗಿತ್ತು. ಆದರೆ ನೀವು ಪ್ರಸ್ತುತ ಅಂಚೆ ಕಚೇರಿಗೆ ಭೇಟಿ ನೀಡದೆಯೇ ನಿಮ್ಮ ಮೊಬೈಲ್, ಕಂಪ್ಯೂಟರ್‌ನಲ್ಲಿ ನಿಮ್ಮ ಅಂಚೆ ಕಚೇರಿ ಯೋಜನೆಗಳ ಬ್ಯಾಲೆನ್ಸ್ ಪರಿಶೀಲನೆ ಮಾಡಬಹುದು.
ನಿಮ್ಮ ಹಣ ಡಬಲ್ ಮಾಡುವ ಯೋಜನೆ
ನೀವು ಅಂಚೆ ಕಚೇರಿಯಲ್ಲಿ ಫಿಕ್ಸಿಡ್ ಡೆಪಾಸಿಟ್ ಖಾತೆ ಹಾಗೂ ಆರ್‌ಡಿ ಖಾತೆಯನ್ನು ತೆರೆದಿದ್ದರೆ ಅದಕ್ಕೆ ಡೆಪಾಸಿಟ್ ಮಾಡುವುದು ಹೇಗೆ, ಅದರ ಬ್ಯಾಲೆನ್ಸ್ ಪರಿಶೀಲನೆ ಮಾಡುವುದು ಹೇಗೆ ಎಂದು ಇನ್ನು ಮುಂದೆ ಚಿಂತೆ ಬೇಡ.
ಅಂಚೆ ಕಚೇರಿ ಆರ್‌ಡಿ ಖಾತೆ:
ನೀವು ನಿರಂತರವಾಗಿ ಮಾಸಿಕ ಲೆಕ್ಕಾಚಾರದಲ್ಲಿ ನಿಮ್ಮ ಹಣವನ್ನು ಉಳಿತಾಯ ಮಾಡಬೇಕಾದರೆ ಅದಕ್ಕೆ ಉತ್ತಮ ಆಯ್ಕೆ ಅಂಚೆ ಕಚೇರಿ ಆರ್‌ಡಿ ಅಥವಾ ರಿಕ್ಯೂರಿಂಗ್ ಡೆಪಾಸಿಟ್ ಆಗಿದೆ. ಯಾರಿಗೆ ದೊಡ್ಡ ಮೊತ್ತವನ್ನು ಒಂದೇ ಸಮಯದಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲವೋ ಅವರಿಗೆ ಈ ಆರ್‌ಡಿ ಉತ್ತಮ ಉಳಿತಾಯ ಅವಕಾಶವಾಗಿದೆ. ನಿಮ್ಮ ಮಾಸಿಕ ವೇತನದಲ್ಲಿ ಸ್ವಲ್ಪ ಮೊತ್ತವನ್ನು ನೀವು ಆರ್‌ಡಿಗೆ ಹೂಡಿಕೆ ಮಾಡಬಹುದು. ನಿಮ್ಮ ಅಂಚೆ ಕಚೇರಿ ಉಳಿತಾಯ ಖಾತೆಯಿದ್ದರೆ, ನೀವು ಆನ್‌ಲೈನ್ ಮೂಲಕವೇ ಈ ಯೋಜನೆಯಲ್ಲಿ ಹೂಡಿಕೆ ಆರಂಭ ಮಾಡಬಹುದು. ನೆಟ್ ಬ್ಯಾಕಿಂಗ್ ಇಲ್ಲವಾದರೆ ನೀವು ಸಮೀಪದ ಅಂಚೆ ಕಚೇರಿಗೆ ಹೋಗಿ ಈ ಖಾತೆಯನ್ನು ತೆರೆಯಬಹುದು.
ಆರ್‌ಡಿಗೆ ಆನ್‌ಲೈನ್ ಹೂಡಿಕೆ ಮಾಡುವ ಕ್ರಮ :
ನೀವು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಯೋಜನೆ ಅಡಿಯಲ್ಲಿ ಅಂಚೆ ಕಚೇರಿ ಆರ್‌ಡಿ ಮೇಲೆ ಆನ್‌ಲೈನ್‌ನಲ್ಲೇ ಹೂಡಿಕೆ ಮಾಡಲು ಸಾಧ್ಯವಾಗಲಿದೆ. ಪ್ಲೇಸ್ಟೋರ್‌ನಿಂದ ಆಪ್ ಅನ್ನು ಮೊದಲು ಡೌನ್‌ಲೋಡ್ ಮಾಡಿಕೊಂಡು ಬಳಿಕ ಡಿಜಿಟಲ್ ಸೇವಿಂಗ್ಸ್ ಅಕೌಂಟ್‌ಗೆ ಲಾಗಿನ್ ಆಗಿ. ಎಲ್ಲ ಮಾಹಿತಿಯನ್ನು ಭರ್ತಿಮಾಡಿಕೊಳ್ಳಿ.
• IPPB ಆಪ್ ಅನ್ನು ಮೊದಲು ಡೌನ್‌ಲೋಡ್ ಮಾಡಿಕೊಳ್ಳಿ
•ಮುಖ್ಯ ಮಾಹಿತಿಯನ್ನು ಭರ್ತಿ ಮಾಡಿ ಲಾಗಿನ್ ಆಗಿ
•Department of Posts (DoP) Products ಮೆನು ನಿಮಗೆ ಕಾಣಬಹುದು
•ಅಲ್ಲಿ Recurring Deposit ಅನ್ನು ಆಯ್ಕೆ ಮಾಡಿಕೊಳ್ಳಿ
•ಡಿಒಪಿ ಕಸ್ಟಮರ್ ಐಡಿ ಬಳಿಕ ಆರ್‌ಡಿ ಖಾತೆ ಸಂಖ್ಯೆಯನ್ನು ಹಾಕಿ
•ಎಷ್ಟು ಅವಧಿ, ಎಷ್ಟು ಮೊತ್ತ ಎಂಬುವುದನ್ನು ಆಯ್ಕೆ ಮಾಡಿಕೊಳ್ಳಿ
•ಪೇಮೆಂಟ್ ಯಶಸ್ವಿಯಾದರೆ ನಿಮಗೆ ಸಂದೇಶದ ಮೂಲಕ ಮಾಹಿತಿ ನೀಡಲಾಗುತ್ತದೆ.
ಅಂಚೆ ಕಚೇರಿ ಎಫ್‌ಡಿ :
ಅಂಚೆ ಕಚೇರಿಯ ಫಿಕ್ಸಿಡ್ ಡೆಪಾಸಿಟ್ ಅನ್ನು ಅಂಚೆ ಕಚೇರಿಯ ಟೈಮ್ ಡೆಪಾಸಿಟ್ ಎಂದು ಕೂಡಾ ಕರೆಯಲಾಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರು ನಿಗದಿತ ಅವಧಿಯಲ್ಲಿ ನಿರ್ದಿಷ್ಟ ಮೊತ್ತವನ್ನು ರಿಟರ್ನ್ ಆಗಿ ಪಡೆಯಲು ಸಾಧ್ಯವಾಗುತ್ತದೆ. ಇದು ಉತ್ತಮ ಉಳಿತಾಯ ಯೋಜನೆಯಾಗಿದೆ. ನಮ್ಮ ಹಣವನ್ನು ಉಳಿತಾಯ ಮಾಡುವುದರ ಜೊತೆಗೆ ಬಡ್ಡಿಯನ್ನು ಪಡೆಯುವ ಯೋಜನೆ ಇದಾಗಿದೆ. ಅಂಚೆ ಕಚೇರಿ ಯೋಜನೆಗಳು ಸರ್ಕಾರದಿಂದ ಗ್ಯಾರಂಟಿ ನೀಡಬಲ್ಲ ಸುರಕ್ಷಿತ ಯೋಜನೆಯಾದ ಕಾರಣ ಹಲವಾರು ಮಂದಿ ಇಲ್ಲಿ ಹೂಡಿಕೆ ಮಾಡುತ್ತಾರೆ. ಇದರಲ್ಲಿ ಹೂಡಿಕೆದಾರರು ಅಂಚೆ ಕಚೇರಿಗೆ ಭೇಟಿ ನೀಡದೆಯೇ ಹೂಡಿಕೆ ಮಾಡಬಹುದು.
ಅಂಚೆ ಕಚೇರಿ ಎಫ್‌ಡಿಗೆ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡುವ ಕ್ರಮ:
• India Post Mobile Banking app ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ
•ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಲಾಗಿನ್ ಆಗಿ
•ಎಫ್‌ಡಿ ಹೂಡಿಕೆ ಮಾಡಬೇಕಾದರೆ Requests ಮೇಲೆ ಟ್ಯಾಪ್ ಮಾಡಿ.
•ಮೊತ್ತವೆಷ್ಟು, ಅವಧಿ ಎಷ್ಟು ಎಂಬುವುದನ್ನು ಮೊದಲೇ ಯೋಚನೆ ಮಾಡಿಟ್ಟುಕೊಳ್ಳಿ.
•ಡೆಪಾಸಿಟ್ ಸಂಬಂಧಿತ ಎಲ್ಲ ಅಗತ್ಯ ಮಾಹಿತಿಯನ್ನು ನಮೂದಿಸಿ.
• Transfers ಮೇಲೆ ಕ್ಲಿಕ್ ಮಾಡಿ, ಆನ್‌ಲೈನ್ ಮೂಲಕ ಖಾತೆಗೆ ಹಣ ಜಮೆ ಮಾಡಿ
ಈ ರೀತಿಯಾಗಿ ನೀವು ಆನ್ ಲೈನ್ ಮೂಲಕವೇ ಅಂಚೆ ಕಚೇರಿ ವಹಿವಾಟು ನಡೆಸಬಹುದಾಗಿದೆ.