PM Rojgar Mela 2022 : ಪಿಎಂ ಉದ್ಯೋಗ ಮೇಳ ಯೋಜನೆ | ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರ ಇಲ್ಲಿದೆ!!!

ಕೇಂದ್ರ ಸರ್ಕಾರ ಯುವ ಜನತೆಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಿ ಉದ್ಯೋಗ ಅರಸುವ ಆಕಾಂಕ್ಷಿಗಳಿಗೆ ನೆರವಾಗುತ್ತಿದ್ದಾರೆ.

10 ಲಕ್ಷ ಮಂದಿಗೆ ಉದ್ಯೋಗ ನೀಡುವ ಬೃಹತ್ ಉದ್ಯೋಗ ಮೇಳಕ್ಕೆ (Rozgar Mela) ಪ್ರಧಾನಿ (Prime Minister) ನರೇಂದ್ರ ಮೋದಿ (Narendra Modi) ಚಾಲನೆ ನೀಡಿದ್ದಾರೆ.

ದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಮೋದಿ ಸುಮಾರು 75,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರವನ್ನು ಕೂಡ ಈ ಕಾರ್ಯಕ್ರಮದಲ್ಲಿ ವಿತರಣೆ ಮಾಡಿದ್ದಾರೆ. ಯುವಕರಿಗೆ ಉದ್ಯೋಗ ನೀಡುವುದರ ಜತೆಗೆ ನಾಗರಿಕರ ಕಲ್ಯಾಣವನ್ನು ಖಾತರಿಪಡಿಸುವ ಪ್ರಧಾನ ಮಂತ್ರಿಗಳ ಆಶಯದ ಮತ್ತು ನಿರ್ದೇಶನದ ಮೇರೆಗೆ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ (ಪಿಎಂಒ) ಪ್ರಕಟಣೆ ನೀಡಿದ ಬೆನ್ನಲ್ಲೇ ಅದರ ಜಾರಿಗೆ ಮುಂದಾಗಿದೆ.

ಯುವಕರಿಗೆ ಉದ್ಯೋಗ ಕಲ್ಪಿಸುವುದಕ್ಕಾಗಿ ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮವು ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಮಾರ್ಗದರ್ಶನದಲ್ಲಿ ಉದ್ಯೋಗ ಮೇಳ ಕಾರ್ಯಕ್ರಮವನ್ನು ಕೈಗೊಂಡಿದೆ.

ಈ ಯೋಜನೆ ಅಡಿಯಲ್ಲಿ ಸುಮಾರು 10 ಲಕ್ಷ ಮಂದಿಗೆ ಉದ್ಯೋಗ ನೀಡುವ ಗುರಿಯನ್ನೂ ಹೊಂದಿದೆ. ಗ್ರೂಪ್ ಎ ಶ್ರೇಣಿಯ 23,876, ಗ್ರೂಪ್ ಬಿ ಶ್ರೇಣಿಯ 25,836 ಹಾಗೂ ಗ್ರೂಪ್ ಸಿ ಶ್ರೇಣಿಯ 7.6 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ‘ಸಿಸಿಐಎಂ ಇಂಡಿಯಾ’ ತಾಣವು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಕೇಂದ್ರದ 38 ಸಚಿವಾಲಯದ ಇಲಾಖೆಗಳಿಗಾಗಿ ದೇಶದಾದ್ಯಂತ ನೇಮಕಾತಿ ಗ್ರೂಪ್ ಎ ಶ್ರೇಣಿಯಿಂದ ಹುದ್ದೆಗಳಿಂದ ತೊಡಗಿ ಗ್ರೂಪ್ ಸಿ ಶ್ರೇಣಿಯ ಹುದ್ದೆಗಳ ವರೆಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ಕೇಂದ್ರ ಸಶಸ್ತ್ರ ಪಡೆ ಸಿಬ್ಬಂದಿ, ಸಬ್-ಇನ್‌ಸ್ಪೆಕ್ಟರ್‌ಗಳು, ಕಾನ್‌ಸ್ಟೆಬಲ್‌ಗಳು, ಎಲ್‌ಡಿಸಿ, ಸ್ಟೆನೋ, ಪಿಎ, ಆದಾಯ ತೆರಿಗೆ ಇನ್ಸ್‌ಪೆಕ್ಟರ್‌ಗಳು ಮತ್ತು ಎಂಟಿಎಸ್ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ.

ಇಷ್ಟೇ ಅಲ್ಲದೆ, ರಕ್ಷಣೆ, ರೈಲ್ವೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಗೆ 10,000 ಹುದ್ದೆಗಳನ್ನು ನಿಗದಿಪಡಿಸಲಾಗಿದ್ದು, 2023ರ ಅಂತ್ಯದ ಒಳಗಾಗಿ ಎಲ್ಲ ನೇಮಕಾತಿಗಳನ್ನು ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದ ಪ್ರಜೆಯಾಗಿದ್ದು, 18-29 ವರ್ಷ ವಯಸ್ಸಿನವರಾಗಿರಬೇಕು. ಅಲ್ಲದೆ, ಅರ್ಜಿ ಸಲ್ಲಿಸಲು ಪದವಿ, 10ನೇ ತರಗತಿ ಹಾಗೂ 12ನೇ ತರಗತಿ ಶಿಕ್ಷಣ ಪಡೆದಿರಬೇಕು.

ಜೊತೆಗೆ ಉದ್ಯೋಗಕ್ಕಾಗಿಲಿಖಿತ ಪರೀಕ್ಷೆ ಮತ್ತು ಸಾಮಾನ್ಯ ಮೌಖಿಕ ಸಂದರ್ಶನದಲ್ಲಿ ತೇರ್ಗಡೆಯಾಗಬೇಕಾಗುತ್ತದೆ.

ಇದರ ಜೊತೆಗೆ ಮುಖ್ಯವಾಗಿ ಅರ್ಜಿದಾರರು ಯಾವುದೇ ಘೋರ ಅಪರಾಧ ಅಥವಾ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಬಾರದು.

ಅಭ್ಯರ್ಥಿಗಳು ಮೂಲ DMC ಗಳ ಸ್ಕ್ಯಾನ್ ಮಾಡಿದ ಪ್ರತಿಗಳು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟಿಂಗ್ ಕಾರ್ಡ್‌ನಂತಹ ಐಡಿ ಜೊತೆಗೆ ಹಿಂದಿನ ಕೆಲಸದ ಅನುಭವ ಪ್ರಮಾಣಪತ್ರವನ್ನೂ ಲಗತ್ತಿಸಬೇಕು. ಅಭ್ಯರ್ಥಿಗಳು ಲಗತ್ತಿಸಿದ ಎಲ್ಲಾ ದಾಖಲೆಗಳು ಸ್ಪಷ್ಟವಾಗಿರಬೇಕು.

ಪಿಎಂ ರೋಜ್​ಗಾರ್ ಯೋಜನೆಯಡಿ 2022ರ ಅಕ್ಟೋಬರ್ 22ರಿಂದ ಅರ್ಜಿ ಸಲ್ಲಿಸಬಹುದು. 2023ರ ಕೊನೆಯವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅರ್ಜಿ ಸಲ್ಲಿಸಲು psc.gov,in, ssc.nic.in ಹಾಗೂ ಇತರ ಅಧಿಕೃತ ನೇಮಕಾತಿ ತಾಣಗಳಿಗೆ ಭೇಟಿ ನೀಡಬೇಕು. ನಂತರ PM Rozgar Mela 2022 Online Registration ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿಕೊಂಡು ಎಲ್ಲ ವೈಯಕ್ತಿಕ ವಿವರಗಳನ್ನು ದಾಖಲಿಸಬೇಕು.

ಬಳಿಕ ಸಬ್​ಮಿಟ್ ಬಟನ್ ಕ್ಲಿಕ್ ಮಾಡಬೇಕು. ಈ ಪ್ರಕ್ರಿಯೆ ಮೂಲಕ ಪಿಎಂ ರೋಜ್​ಗಾರ್ ಮೇಳದಲ್ಲಿ ನೋಂದಣಿ ಮಾಡಿಕೊಳ್ಳಬಹುದು.

Leave A Reply

Your email address will not be published.