ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ಆಟಮ್ | ಏನಿದರ ವಿಶೇಷತೆ ಗೊತ್ತೇ?

ಜನಪ್ರಿಯ ಮಹೀಂದ್ರಾ ಎಲೆಕ್ಟ್ರಿಕ್ ಆಟೋಮ್ ಕ್ವಾಡ್ರಿಸೈಕಲ್ ಅನ್ನು ಟ್ರೆಯೋ ಆಟೋ, ಟ್ರಿಯೋ ಜೋರ್ ಡೆಲಿವರಿ ವ್ಯಾನ್, ಟ್ರೀಯೋ ಟಿಪ್ಪರ್ ರೂಪಾಂತರ ಮತ್ತು ಇ-ಆಲ್ಫಾ ಮಿನಿ ಟಿಪ್ಪರ್ನೊಂದಿಗೆ ಪರಿಚಯಿಸಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ರೇಜ್ ಹೆಚ್ಚುತ್ತಿರುವುದರಿಂದ ಕಂಪನಿಗಳ ಜೊತೆಗೆ ಗ್ರಾಹಕರು ಈ ವಾಹನಗಳ ಬಗ್ಗೆ ಆಸಕ್ತಿ ವಹಿಸಲು ಪ್ರಾರಂಭಿಸಿದ್ದಾರೆ. ಇಂಧನಗಳ ಬೆಲೆ ಏರಿಕೆಯ ಬಳಿಕ ಬಹುತೇಕರು ಎಲೆಕ್ಟ್ರಿಕ್ ವಾಹನದತ್ತ ಮುಖ ಮಾಡುತ್ತಿದ್ದಾರೆ.
ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ 2020ರ ಆಟೋ ಎಕ್ಸ್‌ಪೋದಲ್ಲಿ ಆಟಮ್ ಕ್ವಾಡ್ರಿಸೈಕಲ್ ಅನ್ನು ಕಾನ್ಸೆಪ್ಟ್ ಮಾದರಿಯಾಗಿ ಅನಾವರಣಗೊಳಿಸಿತ್ತು. ಎರಡು ವರ್ಷಗಳ ಬಳಿಕ ಮಹೀಂದ್ರಾ ಕಂಪನಿಯು ಈ ಆಟಮ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.


ಮಹೀಂದ್ರಾ ಆಟಮ್ ಭಾರತದ ಮೊದಲ ಎಲೆಕ್ಟ್ರಿಕ್ ಕ್ವಾಡ್ರಿಸೈಕಲ್ ಆಗಲಿದೆ. ಇದರ ಬಿಡುಗಡೆಯ ಮುಂಚಿತವಾಗಿ, ಮಹೀಂದ್ರಾ ಆಟಮ್ ಬಗ್ಗೆ ವಿವರಗಳನ್ನು ಟೈಪ್ ಅಪ್ರೂವಲ್ ಸರ್ಟಿಫಿಕೇಟ್ ಮೂಲಕ ಹೊರತಂದಿದ್ದು ಇತ್ತೀಚಿನ ಪ್ರಮಾಣಪತ್ರವನ್ನು ‘ಸಾರಿಗೆ’ ವರ್ಗದ ಅಡಿಯಲ್ಲಿ ನೀಡಲಾಗಿದೆ.


ಮಹೀಂದ್ರಾ ಎಲೆಕ್ಟ್ರಿಕ್ 3-ವೀಲರ್ ವಿಭಾಗದಲ್ಲಿ 73.4 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದ್ದು, ಈ ಕಾರಣದಿಂದಾಗಿ ಕಂಪನಿಯು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಎಲೆಕ್ಟ್ರಿಕ್ ಚಾಲಿತ ಮಹೀಂದ್ರಾ ಆಟಮ್ ಆರಾಮದಾಯಕ ಮತ್ತು ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಶುದ್ಧ ಶಕ್ತಿಯನ್ನು ಹೊಂದಿದೆ. ಆಟಮ್ ಜೊತೆಗೆ, ಮಹೀಂದ್ರಾ ಇ-ಆಲ್ಫಾ ಮಿನಿ ಪ್ಲಾಟ್ಫಾರ್ಮ್ ಅನ್ನು ಆಧರಿಸಿದ ಎಲೆಕ್ಟ್ರಿಕ್ ಆಲ್ಫಾ ಟಿಪ್ಪರ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ.


ಮಹೀಂದ್ರಾ ಆಟಮ್ K1, K2, K3 ಮತ್ತು K4 ಎಂಬ ಒಟ್ಟು ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. K2 ರೂಪಾಂತರವು 7.4 kWh, 144 Ah ಬ್ಯಾಟರಿ ಪ್ಯಾಕ್ ಹೊಂದಿದ್ದರೆ, ಆಟಮ್ K3 ಮತ್ತು K4 ರೂಪಾಂತರಗಳು 11.1 kWh, 216 Ah ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತವೆ.
ಮಹೀಂದ್ರಾ ಆಟಮ್‌ನ ಗರಿಷ್ಠ ಮೋಟಾರ್ ಪವರ್ ಅನ್ನು 3,950 rpm ನಲ್ಲಿ 8 kW ನಲ್ಲಿ ರೇಟ್ ಮಾಡಲಾಗಿದೆ.

AIS-039 ಮಾನದಂಡಗಳ ಪ್ರಕಾರ ಎಲೆಕ್ಟ್ರಿಕಲ್ ಎನರ್ಜಿ ಬಳಕೆಯು K1 ಮತ್ತು K2 ಗೆ ಪ್ರತಿ ಕಿಮೀಗೆ 90 Wh ಮತ್ತು K3 ಮತ್ತು K4 ಗೆ 106 Wh. K1 ಮತ್ತು K2 ಮತ್ತು ಅಂದಾಜು 80 ಕಿಮೀ ರೇಂಕ್ ಅನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇನ್ನು ಕೆ3 ಮತ್ತು ಕೆ4 ರೂಪಾಂತರಗಳು 100 ಕಿ.ಮೀ ರೇಂಜ್ ಅನ್ನು ನೀಡುತ್ತದೆ.
ಪೈಸಾ ವಸೂಲ್ ಕಾರು ಎಂದೇ ಹೇಳಲಾಗಿದ್ದು, ಇದರ ಬೆಲೆಯು ತುಂಬಾ ಕಡಿಮೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಈ ಕಾರಿನ ಬೆಲೆ ಸುಮಾರು 3 ಲಕ್ಷ ರೂ . ಇರಬಹುದು ಎಂದು ಅಂದಾಜಿಸಲಾಗಿದೆ.

ಮಹೀಂದ್ರ ಆಟಮ್ ಗರಿಷ್ಠ 50 ಕಿಮೀ / ಗಂ ವೇಗವನ್ನು ಹೊಂದಿರುತ್ತದೆ. ಅದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.


ಆಟಮ್ ಎಲೆಕ್ಟ್ರಿಕ್ ಕ್ವಾಡ್ರಿಸೈಕಲ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 120 ಕಿ.ಮೀ ವರೆಗೆ ಓಡಿಸಬಹುದು. ಎಲೆಕ್ಟ್ರಿಕ್ ಆಟೋ-ರಿಕ್ಷಾಕ್ಕೆ ಇದು ಉತ್ತಮ ಆಯ್ಕೆಯಾಗಿ ಹೊರಹೊಮ್ಮಿದೆ ಎನ್ನಲಾಗಿದೆ.

ಈ ರೇಂಜ್ ಗಳು ಎಸಿ ಅಲ್ಲದ ರೂಪಾಂತರಗಳು ಪೂರ್ಣ ಚಾರ್ಜ್‌ನಲ್ಲಿ ಹೆಚ್ಚಿನ ಮೈಲುಗಳನ್ನು ಕ್ರಮಿಸಲು ಸಾಧ್ಯವಾಗುತ್ತದೆ. ಈ ಮಹೀಂದ್ರಾ ಆಟಮ್ ವಿಶಿಷ್ಟವಾದ ಗ್ರಿಲ್ ವಿನ್ಯಾಸ, ಪ್ರಮುಖ ಹೆಡ್‌ಲ್ಯಾಂಪ್‌ಗಳು, ದೊಡ್ಡ ವಿಂಡ್‌ಸ್ಕ್ರೀನ್ ಮತ್ತು ವೀಂಡೋಗಳನ್ನು ಹೊಂದಿದೆ.

ಫ್ಲೀಟ್ ಕಾರ್ಯಾಚರಣೆಗಳಿಗೆ ಬಳಸಿದಾಗ ಬುಕಿಂಗ್ ಮತ್ತು ಪಾವತಿಗಳ ತ್ವರಿತ ಪ್ರಕ್ರಿಯೆಗಾಗಿ ಇದು 4G ಸಂಪರ್ಕವನ್ನು ಹೊಂದಿರುತ್ತದೆ.

ಆಯಾಮದಲ್ಲಿ, ಮಹೀಂದ್ರಾ ಆಟಮ್ 2,728 ಮಿಮೀ ಉದ್ದ, 1,452 ಎಂಎಂ ಅಗಲ ಮತ್ತು 1,576 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಮಾದರಿಯು 1,885 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ.

ಇದರ ಕಾಂಪ್ಯಾಕ್ಟ್ ಗಾತ್ರದ ಹೊರತಾಗಿಯೂ, ಮಹೀಂದ್ರಾ ಆಟಮ್‌ ವಿಶಾಲವಾದ ಒಳಾಂಗಣವನ್ನು ಹೊಂದಿರುತ್ತದೆ.
ಈ ಕ್ವಾಡ್ರಿಸೈಕಲ್ ಮೊನೊಕಾಕ್ ಚಾಸಿಸ್ ಅನ್ನು ಬಳಸುತ್ತದೆ ಮತ್ತು ನೇರವಾದ, ಬಾಕ್ಸ್ ವಿನ್ಯಾಸವನ್ನು ಹೊಂದಿದೆ. ವ್ಹೀಲ್ ಗಳನ್ನು ತೀವ್ರ ತುದಿಗಳಲ್ಲಿ ಇರಿಸಲಾಗುತ್ತದೆ.

ಕ್ವಾಡ್ರಿಸೈಕಲ್‌ಗೆ ಭವಿಷ್ಯದ ನೋಟ ಮತ್ತು ಭಾವನೆಯನ್ನು ಖಾತ್ರಿಗೊಳಿಸುತ್ತದೆ. ಒಳಭಾಗದಲ್ಲಿ, ಆಟಮ್ ಪ್ರಯೋಜನಕಾರಿ ವೈಶಿಷ್ಟ್ಯಗಳ ಮೇಲೆ ಕೇಂದ್ರೀಕರಿಸುತ್ತದೆ.


ಬ್ಯಾಟರಿ ಪ್ಯಾಕ್ ಮತ್ತು ಎಸಿ, ನಾನ್ ಎಸಿ ರೂಪಾಂತರಗಳಲ್ಲಿನ ವ್ಯತ್ಯಾಸದಿಂದಾಗಿ, ಎಲ್ಲಾ ನಾಲ್ಕು ರೂಪಾಂತರಗಳು ವಿಭಿನ್ನ ಕರ್ಬ್ ತೂಕ ಮತ್ತು ಗ್ರಾಸ್ ವೆಹಿಕಲ್ ವೇಟ್ (ಜಿವಿಡಬ್ಲ್ಯು) ಹೊಂದಿದೆ.

ಚಿಕ್ಕ ಬ್ಯಾಟರಿ ಪ್ಯಾಕ್ 98 ಕೆಜಿ ತೂಕವನ್ನು ಹೊಂದಿದ್ದರೆ, ದೊಡ್ಡ ಯುನಿಟ್ 47 ಕೆಜಿ ತೂಕವನ್ನು ಹೊಂದಿರುತ್ತದೆ. ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಿದ್ದು ಹಗುರವಾದ ಹಾಗೂ ಸುರಕ್ಷಿತ ಕಾರ್ಯಾಚರಣೆಗಳ ಮೂಲಕ ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಇದರ ಜೊತೆಗೆ ಕನಿಷ್ಠ ನಿರ್ವಹಣೆ ಮತ್ತು ಸುಧಾರಿತ ಡಿಸ್ಚಾರ್ಜ್ ಮತ್ತು ಚಾರ್ಜ್ ಬ್ಯಾಟರಿ ತಂತ್ರಜ್ಞಾನವನ್ನು ಹೊಂದಿದ್ದು ಲಿಥಿಯಂ ಐರನ್ ಫಾಸ್ಫೇಟ್ (LiFePO4 ಅಥವಾ LFP), ಇದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

Leave A Reply

Your email address will not be published.