ದೀಪಾವಳಿ ಧಮಾಕ | ಈ ಎರಡು ಬ್ಯಾಂಕ್ ನೀಡುತ್ತೆ ಕಡಿಮೆ ಬಡ್ಡಿ ದರದಲ್ಲಿ ಸಾಲ!
ಸಾಲಗಾರರ ದೊಡ್ಡ ಚಿಂತೆ ಬಡ್ಡಿ ಕಟ್ಟುವುದು ಆಗಿದೆ. ಯಾಕಂದ್ರೆ, ಸಾಲದ ಮೊತ್ತ ಹೇಗಾದ್ರು ಪಾವತಿಸಬಹುದು ಆದ್ರೆ ಅದಿಕೆ ಬೀಳೋ ಬಡ್ಡಿಯೇ ಹೆಚ್ಚು ತಲೆಬಿಸಿ. ದಿನದಿಂದ ದಿನಕ್ಕೆ ಬಡ್ಡಿ ಮೊತ್ತ ಏರಿಕೆ ಮಾಡುತ್ತಿರುವ ಕಾಲದಲ್ಲಿ ಈ ಬ್ಯಾಂಕ್ ಮಾತ್ರ ಸಾಲದ ಬಡ್ಡಿದರವನ್ನು ಕಡಿಮೆ ಮಾಡಿದೆ.
ಹೌದು. ಬ್ಯಾಂಕ್ ಆಫ್ ಇಂಡಿಯಾ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರ ಈ ಹಬ್ಬದ ಸೀಸನ್ ನಡುವೆ ಸಾಲದ ಬಡ್ಡಿದರವನ್ನು ಇಳಿಕೆ ಮಾಡಿದೆ. ಅಷ್ಟು ಮಾತ್ರವಲ್ಲದೆ ದೇಶದ ಅತೀ ದೊಡ್ಡ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹಾಗೂ ಎಚ್ಡಿಎಫ್ಸಿ ಲಿಮಿಟೆಡ್ಗಿಂತ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲವನ್ನು ಈ ಎರಡು ಬ್ಯಾಂಕುಗಳು ನೀಡುತ್ತದೆ.
ಎಸ್ಬಿಐ ಹಾಗೂ ಎಚ್ಡಿಎಫ್ಸಿ ಕೂಡ ದೀಪಾವಳಿ ಹಬ್ಬದ ಆಫರ್ ಆಗಿ ಸುಮಾರು ಶೇಕಡ 8.40ಯಷ್ಟು ಬಡ್ಡಿದರವನ್ನು ನೀಡುತ್ತದೆ. ಎಸ್ಬಿಐ ಗೃಹ ಸಾಲದಲ್ಲಿ ಶೇಕಡ 0.25ರಷ್ಟು ಬಡ್ಡಿದರ ಇಳಿಕೆ ಮಾಡಿದೆ. ಟಾಪ್ ಅಪ್ ಸಾಲದ ಮೇಲೆ ಶೇಕಡ 0.15ರಷ್ಟು ಬಡ್ಡಿದರ ಕಡಿತ ಮಾಡಿದೆ. ಇನ್ನು ಆಸ್ತಿ ಮೇಲಿನ ಸಾಲಕ್ಕೆ ಶೇಕಡ 0.30ರಷ್ಟು ಬಡ್ಡಿದರ ಇಳಿಕೆ ಮಾಡಿದೆ. ಹಾಗೆಯೇ ಎಸ್ಬಿಐ ಜನವರಿ 31, 2023ರವರೆಗೆ ಸಾಲದ ಪ್ರಕ್ರಿಯೆ ಶುಲ್ಕವನ್ನು ಮನ್ನಾ ಮಾಡಿದೆ. ಆದರೆ, ಈ ಎರಡು ಬ್ಯಾಂಕ್ ಎಸ್ಬಿಐ ಹಾಗೂ ಎಚ್ಡಿಎಫ್ಸಿ ಲಿಮಿಟೆಡ್ಗಿಂತ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲವನ್ನು ನೀಡುತ್ತದೆ.
ಬ್ಯಾಂಕ್ ಆಫ್ ಇಂಡಿಯಾ (ಬಿಒಐ) ಗೃಹ ಸಾಲದ ಬಡ್ಡಿದರವನ್ನು ಶೇಕಡ 8.30ಕ್ಕೆ ಇಳಿಕೆ ಮಾಡಿದೆ. ಅಕ್ಟೋಬರ್ 19, 2022ರಂದು ತನ್ನ ಸ್ಟೇಟ್ಮೆಂಟ್ನಲ್ಲಿ ಬ್ಯಾಂಕ್ ಈ ಬಗ್ಗೆ ಮಾಹಿತಿ ನೀಡಿದೆ. “ಸ್ಪರ್ಧಾತ್ಪಕ ಬಡ್ಡಿದರವನ್ನು ನಾವು ನೀಡುತ್ತಿದ್ದೇವೆ. ನಮ್ಮ ಗೃಹ ಸಾಲದ ಬಡ್ಡಿದರ ಶೇಕಡ 8.30ರಿಂದ ಆರಂಭವಾಗುತ್ತದೆ. ಹಾಗೆಯೇ ಇಎಂಐ ಅತೀ ಅಗ್ಗವಾಗಿದೆ. 755 ರೂಪಾಯಿಯಿಂದ ಇಎಂಐ ಆರಂಭವಾಗುತ್ತದೆ. ಗ್ರಾಹಕರು ಬೇರೆ ಬ್ಯಾಂಕುಗಳಲ್ಲಿ ಇರುವ ಗೃಹ ಸಾಲವನ್ನು ನಮ್ಮ ಬ್ಯಾಂಕಿಗೆ ವರ್ಗಾವಣೆಯನ್ನು ಮಾಡುವ ಅವಕಾಶ ಕೂಡಾ ಇದೆ ಎಂದು ಬ್ಯಾಂಕ್ ಆಫ್ ಇಂಡಿಯಾ ಹೇಳಿಕೊಂಡಿದೆ.
ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡುವ ಗ್ರಾಹಕರು ಮೂರು ಪ್ರಯೋಜನಗಳನ್ನು ಪಡೆಯಬಹುದು. ಕಡಿಮೆ ಬಡ್ಡಿದರ, ಸುಲಭವಾದ ಲಿಕ್ವಿಡಿಟಿ ಮಾತ್ರವಲ್ಲದೆ ತೆರಿಗೆ ಪ್ರಯೋಜನ ಕೂಡಾ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗೃಹ ಸಾಲ ಪಡೆದವರಿಗೆ ಲಭ್ಯವಾಗಲಿದೆ. ನೀವು ಜಮೀನನ್ನು ಅಥವಾ ಮನೆಯನ್ನು ಕಟ್ಟಲು ಈ ಗೃಹ ಸಾಲವನ್ನು ಪಡೆಯಲಬಹುದು. ಹಾಗೆಯೇ ಹಳೆಯ ಅಥವಾ ಹೊಸ ಫ್ಲ್ಯಾಟ್ ಅನ್ನು ಖರೀದಿ ಮಾಡಲು ಕೂಡಾ ಈ ಗೃಹ ಸಾಲವನ್ನು ಪಡೆಯಬಹುದು. ನಿಮ್ಮ ಮನೆ ಅಥವಾ ಫ್ಲ್ಯಾಟ್ ಅನ್ನು ರಿನೋವೇಷನ್ ಮಾಡಲು ಕೂಡಾ ಸಾಲವನ್ನು ಪಡೆಯಬಹುದು.
ಬ್ಯಾಂಕ್ ಆಫ್ ಇಂಡಿಯಾದ ಸ್ಟಾರ್ ಹೋಮ್ ಲೋನ್ನಲ್ಲಿ ಮರುಪಾವತಿ ಅವಧಿ 30 ವರ್ಷಗಳಾಗಿದೆ. ಹಾಗೆಯೇ ಇಎಂಐ ಬೇರೆ ಬೇರೆ ಅವಧಿಯಲ್ಲಿ ಇದೆ. ಇಎಂಐ ಪಾವತಿ ಮಾಡಿದಿದ್ದರೆ ಹಾಗೂ ಮೊದಲೇ ಅಧಿಕ ಮೊತ್ತ ಪಾವತಿ ಮಾಡುವುದಾದರೆ ಅದಕ್ಕೆ ಶುಲ್ಕವನ್ನು ವಿಧಿಸಲಾಗುತ್ತದೆ. ಕಡಿಮೆ ಬಡ್ಡಿದರವನ್ನು ವಿಧಿಸುವ ನಿಟ್ಟಿನಲ್ಲಿ ದೈನಂದಿನ ಆಧಾರದಲ್ಲಿ ಬಡ್ಡಿದರವನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಹಾಗೆಯೇ ಡಿಸೆಂಬರ್ 31, 2022ರವರೆಗೆ ಬ್ಯಾಂಕ್ ಆಫ್ ಇಂಡಿಯಾ ಯಾವುದೇ ಪ್ರಕ್ರಿಯೆ ಶುಲ್ಕ ಇಲ್ಲದೆಯೇ ಸಾಲ ನೀಡುತ್ತದೆ. ಹಾಗೆಯೇ ಬ್ಯಾಂಕ್ ಆಫ್ ಇಂಡಿಯಾ ಫರ್ನಿಚರ್ಗಳಿಗಾಗಿ ಸಾಲವನ್ನು ನೀಡುತ್ತದೆ.
ಬ್ಯಾಂಕ್ ಆಫ್ ಇಂಡಿಯಾದಂತೆ ಬ್ಯಾಂಕ್ ಆಫ್ ಮಹಾರಾಷ್ಟ್ರವು ಕೂಡಾ ಸಾಲದ ಬಡ್ಡಿದರವನ್ನು ಕಡಿತ ಮಾಡಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರದ ವಿವಿಧ ಗೃಹ ಸಾಲ ಮತ್ತು ವೈಯಕ್ತಿಕ ಸಾಲದ ಮೇಲಿನ ಬಡ್ಡಿದರಗಳು ಗಣನೀಯವಾಗಿ ಇಳಿಸಿದೆ. ಗೃಹ ಸಾಲದ ಬಡ್ಡಿ ದರ 30 ರಿಂದ 70 ಬೇಸಿಸ್ ಪಾಯಿಂಟ್ವರೆಗೂ ಇಳಿಕೆಯಾಗಿದೆ. ಇನ್ನು ಪರ್ಸನಲ್ ಲೋನ್ ಮೇಲಿನ ಬಡ್ಡಿ ದರ ಕೂಡ 245 ಮೂಲಾಂಕಗಳಷ್ಟು ಕಡಿಮೆಯಾಗಿದೆ. ಅಂದರೆ ಬ್ಯಾಂಕ್ ಮಹಾರಾಷ್ಟ್ರದಲ್ಲಿ ಗೃಹ ಸಾಲದ ಮೇಲಿನ ವಾರ್ಷಿಕ ಬಡ್ಡಿ ದರ ಶೇ. 8ರಿಂದ ಆರಂಭವಾಗುತ್ತದೆ. ವೈಯಕ್ತಿಕ ಸಾಲಕ್ಕೆ ಶೇ. 11.35ರಷ್ಟಿದ್ದ ಬಡ್ಡಿ ದರವನ್ನು ಶೇ. 8.9ಕ್ಕೆ ಇಳಿಸಲಾಗಿದೆ. ಸಾಲ ಪಡೆಯುವವರ ಸಿಬಿಲ್ ಸ್ಕೋರ್ ಆಧಾರದಲ್ಲಿ ಇದು ನಿರ್ಧಾರವಾಗುತ್ತದೆ.