ಕಾಂತಾರ ಸಿನಿಮಾ ಥಿಯೇಟರ್ ಮೇಲೆ ಬರೋಬ್ಬರಿ 200 ಮಂದಿ ಪೊಲೀಸರ ದಾಳಿ, ಕುಟುಂಬದವರ ಸಮ್ಮುಖದಲ್ಲಿ !
ಕಾಂತಾರ ಕಾಂತಾರ ಎಲ್ಲಿ ನೋಡಿದರೂ ಕಾಂತಾರ. ಅದ್ಭುತ ನಟ ನಿರ್ದೇಶಕ ರಿಷಬ್ ಶೆಟ್ಟಿಯ ಕೈ ಚಳಕದಿಂದ ಮೂಡಿ ಬಂದ ಸಿನಿಮಾವೇ ಕಾಂತಾರ. ಎಲ್ಲಾ ಕಡೆ ಕಾಂತಾರದ್ದೇ ಮಾತು. ಸ್ಯಾಂಡಲ್ವುಡ್ ಅಷ್ಟೇ ಅಲ್ಲ, ಕಾಲಿವುಡ್, ಬಾಲಿವುಡ್, ಮಾಲಿವುಡ್, ಟಾಲಿವುಡ್ನಲ್ಲಿಯೂ ಈ ಕ್ರೇಜ್ ಇನ್ನೂ ಹೆಚ್ಚಿದೆ. ಬೆಣ್ಣೆನಗರಿ ದಾವಣಗೆರೆಯಲ್ಲಂತೂ ‘ಕಾಂತಾರ’ ಹವಾ ಬೆಣ್ಣೆಯಂತೆ ಕರಗದೆ ಗಟ್ಟಿಯಾಗುತ್ತಾ ಹೋಗಿದೆ.
ಹಲವಾರು ಊರಿನ ಜನರು ತಂಡೋಪತಂಡವಾಗಿ ಜನ ‘ಕಾಂತಾರ’ ಸಿನಿಮಾವನ್ನು ನೋಡುತ್ತಿದ್ದಾರೆ. ಬಸ್ಸು ಮಾಡಿಕೊಂಡು, ಹಳ್ಳಿಗಳಿಂದ, ಟೆಂಪೋ, ಬಸ್ಸುಗಳನ್ನು ಮಾಡಿಕೊಂಡು ಬಂದು ಸಿನಿಮಾ ನೋಡುತ್ತಿದ್ದಾರೆ. ಆದರೆ ದಾವಣಗೆರೆಯಲ್ಲಿ ತುಸು ಭಿನ್ನವಾಗಿ ಪೊಲೀಸ್ ಇಲಾಖೆ ಸಿಬ್ಬಂದಿ ತಮ್ಮ ಕುಟುಂಬವನ್ನು ಕರೆದುಕೊಂಡು ಚಿತ್ರಮಂದಿರಕ್ಕೆ ಬಂದು ಒಟ್ಟಾಗಿ ಸಿನಿಮಾ ನೋಡಿ ಆನಂದಿಸಿದ್ದಾರೆ. ಪೊಲೀಸ್ ಇಲಾಖೆಯ 200ಕ್ಕೂ ಹೆಚ್ಚು ಸಿಬ್ಬಂದಿ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ.
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಸೇರಿದಂತೆ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸಿನಿಮಾ ನೋಡಿದರು.
ನಗರದ ಗೀತಾಂಜಲಿ ಚಿತ್ರಮಂದಿರದ ಮಾಲೀಕರ ಜೊತೆ ಮಾತನಾಡಿ ಪೊಲೀಸ್ ಸಿಬ್ಬಂದಿ ಮತ್ತು ಕುಟುಂಬದವರಿಗೆ ಪ್ರತ್ಯೇಕ ಶೋ ವ್ಯವಸ್ಥೆ ಮಾಡಲಾಗಿತ್ತು. ಈ ಚಿತ್ರಮಂದಿರದಲ್ಲಿ ‘ಕಾಂತಾರ’ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಜನರು ಸಹ ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ಟಿಕೆಟ್ ಕೂಡ ಮುಂಗಡವಾಗಿ ಬುಕ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು.