ಹಿಂದೂ ಧರ್ಮ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮಗಳು ಆಮದು ಮಾಡಿಕೊಂಡ ಧರ್ಮಗಳು | ಮತ್ತೆ ಶುರು ಹಚ್ಚಿಕೊಂಡ ನಟ ಚೇತನ್ !

ಕಾಂತಾರ ಚಿತ್ರದ ಸಕ್ಸಸ್ ನಂತರ ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ಹೇಳಿಕೆ ಮೂಲಕ ಸಂಚಲನ ಮೂಡಿಸುತ್ತಿರುವ ನಟ ಚೇತನ್ (Chetan ahimsa) ಇದೀಗ ಮತ್ತೆ ಧರ್ಮಗಳ ಬಗ್ಗೆ ಟ್ವೀಟ್ ಮಾಡುವ ಮೂಲಕ ಹೊಸ ವಿವಾದಕ್ಕೆ ಕೊಡಿ ಕೊಟ್ಟಿದ್ದಾರೆ.

 

`ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ಹೇಳಿಕೆ ಮೂಲಕ ವಿರೋಧ ಮತ್ತು ಚರ್ಚೆ ನಡೆದಿತ್ತು. ಈಗ ಇವೆಲ್ಲಆಮದು ಮಾಡಿಕೊಂಡ ಧರ್ಮಗಳು ಎಂಬುದಾಗಿ ನಟ ಚೇತನ್ ಟ್ವೀಟ್ ಮಾಡಿದ್ದಾರೆ. ಟ್ವೀಟ್ ನಲ್ಲಿ ಏನಿದೆ ಸಾರಾಂಶ ?

“ಭಾರತವು ವೈವಿಧ್ಯಮಯವಾದ ಮತ್ತು ರೋಮಾಂಚಕವಾದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಹೊಂದಿದೆ. ನಮ್ಮ ಆದಿವಾಸಿ- ಅಲೆಮಾರಿ- ಮೂಲನಿವಾಸಿ ವಿಶ್ವಗಳನ್ನು ಸಂರಕ್ಷಿಸುವ ಮತ್ತು ಗುರುತಿಸುವ ಆಂದೋಲನವು ನಡೆಯುತ್ತಿದೆ” ಎಂದಿದ್ದಾರೆ ಚೇತನ್.

ಮುಂದುವರೆದು, ” ಹಿಂದೂ ಧರ್ಮ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮ ಇಂತಹ ಆಮದು ಮಾಡಿಕೊಂಡ ಧರ್ಮಗಳು – ಇತರ ಎಲ್ಲಾ ಧರ್ಮಗಳಂತೆಯೇ ಅವಿಭಾಜ್ಯವಾಗಿವೆ”
ಕೊನೆಯಲ್ಲಿ ‘ ಎಲ್ಲಾ ಅಸಮಾನತೆಗಳನ್ನ ನಾವು ವಿರೋಧಿಸಬೇಕು ‘ ಎಂದಿದ್ದಾರೆ. ಕೊನೆಯ ಸಾಲು ಇಲ್ಲಿನ ಚರ್ಚೆಗೆ ಸನ್ನಿವೇಶಕ್ಕೆ ಸರಿ ಹೊಂದದ ಸಂದರ್ಭ. ಒಟ್ಟಾರೆ ಪ್ರಚಾರ ಪ್ರಿಯತೆ ಮತ್ತು ಬುದ್ದಿ ಜೀವಿ ಅನ್ನಿಸಿಕೊಳ್ಳಬೇಕಾದ ಅನಿವಾರ್ಯತೆಯಿಂದ ಆತ ಹೀಗೆ ಹೇಳುತ್ತಿದ್ದಾರೆ ಎಂದು ಚೇತನ್ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ.

ಸಿನಿಮಾಗಿಂತ ವಿವಾದಗಳ ಮೂಲಕ ಸುದ್ದಿಯಾಗುವ ನಟ ಚೇತನ್‌, ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ವಿವಾದ್ಮಾತಕ ಹೇಳಿಕೆಯ ನಂತರ ಇದೀಗ ಧರ್ಮದ ಬಗ್ಗೆ ಮಾತನಾಡಿ ಚರ್ಚೆಗೆ ಗ್ರಾಸವಾಗಿದ್ದಾರೆ.

Leave A Reply

Your email address will not be published.