ಕರ್ನಾಟಕಕ್ಕೂ ಕಾಲಿಡುತ್ತಾ ಓಮಿಕ್ರಾನ್? ಒಹ್ ಮೈ ಗಾಡ್ ದೀಪಾವಳಿಗೆ ಬಂದೇ ಬಿಡುತ್ತಾ ಈ ವೈರಸ್

ಸತತ ಎರಡು ವರ್ಷಗಳಿಂದ ಕೊರೋನಾ ಜಗತ್ತನ್ನು ತಲ್ಲಣಗೊಳಿಸಿದೆ. ಎರಡು ವರ್ಷದಲ್ಲಿ ಕೋವಿಡ್‌ನಿಂದಾನೇ ಲಕ್ಷಾಂತರ ಮಂದಿ ಮೃತಪಟ್ಟರು. ಸಾಕಷ್ಟು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದರು. ಇಷ್ಟಾದರೂ ಕೊರೋನಾ ಕಾಟ ಮುಗಿದಿಲ್ಲ. ವೈರಸ್‌ನ ಹೊಸ ಹೊಸ ರೂಪಾಂತರಗಳು ಪತ್ತೆಯಾಗುತ್ತಲೇ ಇವೆ. ಸದ್ಯ ಚೀನಾದಲ್ಲಿ ಪತ್ತೆಯಾಗಿರುವ ಓಮಿಕ್ರಾನ್ ರೂಪಾಂತರ BF.7 ಮತ್ತು BA.5.1.7 ಜನರನ್ನು ಕಂಗೆಡಿಸಿದೆ. ಈ ಹೊಸ ರೂಪಾಂತರ ವೈರಸ್‌ ಈಗ ಜಗತ್ತಿನ ಎಲ್ಲೆಡೆ ವೇಗವಾಗಿ ಹರಡುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, “ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ ಪತ್ತೆಹಚ್ಚಿದಂತೆ BF.7 ನ ಮೊದಲ ಪ್ರಕರಣವು ಭಾರತದಲ್ಲಿ ಈಗಾಗಲೇ ಕಂಡುಬಂದಿದೆ.

 

ಈ ವೈರಸ್‌ ಬಹಳಷ್ಟು ಆಕ್ರಮಣಕಾರಿ ವೈರಸ್‌ ಆಗಿರುವುದರಿಂದ ಈ ಹಿಂದಿನ ಲಸಿಕೆಗಳು ಕೆಲಸ ಮಾಡದೇ ಇರಬಹುದು” ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಭಾರತದಲ್ಲಿ ಕಂಡು ಬಂದಿರುವ ಈ ವೈರಸ್‌ನಿಂದ ಮುಂದೆ ಅನೇಕ ಆರೋಗ್ಯ ಅಪಾಯಗಳು ಭಾರತಕ್ಕೆ ಕಾದಿವೆ ಎಂಬ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ. ಇದರ ಜೊತೆಗೆ ಈಗ ಭಾರತದಲ್ಲಿ ಸಾಲು-ಸಾಲು ಹಬ್ಬಗಳು ಇರುವುದರಿಂದ ಲಾಕ್‌ಡೌನ್‌ ಮತ್ತು ನಿರ್ಬಂಧಗಳು ಎಂಬ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತಿ ಮುಖ್ಯವಾಗಿದೆ.

ಭಾರತದಲ್ಲಿನ ಜನರು ಅತ್ಯಂತ ಉತ್ಸಾಹದಿಂದ ದೇಶದ ಅತಿದೊಡ್ಡ ಹಬ್ಬಗಳಲ್ಲಿ ಒಂದಾದ ದೀಪಾವಳಿಯನ್ನು ಆಚರಿಸಲು ಎದುರು ನೋಡುತ್ತಿದ್ದಾರೆ. ದೀಪಾವಳಿ ಮತ್ತಿತ್ತರ ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಎರಡೂ ವರ್ಷಗಳೇ ಆಗಿವೆ ಎಂಬುದು ಜನರ ಅಭಿಪ್ರಾಯವಾಗಿದೆ. ಆದರೆ ಈ ಸಲವೂ ಕೂಡ ದೀಪಾವಳಿ ಹಬ್ಬದ ಸಮಯದಲ್ಲಿಯೇ ಈ ಓಮಿಕ್ರಾನ್‌ ಹೊಸ ರೂಪಾಂತರ ವೈರಸ್‌ ಕಾಣಿಸಿಕೊಂಡು ಅಪಾಯದ ಎಚ್ಚರಿಕೆ ಗಂಟೆಯನ್ನು ಬಾರಿಸುತ್ತಿದೆ.

ಇದರ ಜೊತೆಗೆ ಪ್ರತಿಯೊಬ್ಬರು ತಮ್ಮ ಆರೋಗ್ಯ ದೃಷ್ಟಿಯಿಂದ ಮಾಸ್ಕ್‌ ಧರಿಸಿಕೊಳ್ಳಬೇಕು ಮತ್ತು ಕೊರೋನಾದ ರೋಗಲಕ್ಷಣಗಳು ಕಾಣಿಸಿದರೆ ಕೂಡಲೇ ಆರೋಗ್ಯ ಚಿಕಿತ್ಸೆಯನ್ನು ಸೂಕ್ತ ಸಮಯದಲ್ಲಿ ತೆಗೆದುಕೊಳ್ಳಬೇಕು, ಇದು ಪ್ರತಿಯೊಬ್ಬರ ಜವಬ್ದಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಮಕ್ಕಳು, ವೃದ್ಧರು, ಕ್ಯಾನ್ಸರ್‌ನಿಂದ ಬಳಲಿದವರು, ಕ್ಯಾನ್ಸರ್ ರೋಗಿಗಳು, ಕಸಿ ರೋಗಿಗಳು ಇಂತಹವರಿಗೆ ಈ ವೈರಸ್‌ ಬೇಗ ಹರಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಇವರ ರಕ್ಷಣೆಯನ್ನು ಮನೆಯ ಸದಸ್ಯರು ನೋಡಿಕೊಳ್ಳುವುದು ಸೂಕ್ತ.

ಭಾರತಕ್ಕೂ ಕಾಲಿಡುತ್ತಾ ಓಮಿಕ್ರಾನ್‌ನ ರೂಪಾಂತರ ವೈರಸ್?ಓಮಿಕ್ರಾನ್‌ ಸ್ಪಾನ್‌ಓಮಿಕ್ರಾನ್‌ ಹೊಸ ರೂಪಾಂತರಗಳಾದ BA.5.1.7 ಮತ್ತು BF.7 ಅನ್ನು ಓಮಿಕ್ರಾನ್‌ ಸ್ಪಾನ್ ಎಂದು ಸಹ ಕರೆಯುತ್ತಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಪ್ರಪಂಚದೆಲ್ಲೆಡೆ ಕೋವಿಡ್ -19 ಪಾಸಿಟಿವ್‌ ಪ್ರಕರಣಗಳ ಸಂಖ್ಯೆಯಲ್ಲಿ ಕ್ರಮೇಣ ಇಳಿಮುಖವಾಗುತ್ತಿದ್ದರೂ ಈ ವೈರಸ್ ನಿರಂತರವಾಗಿ ಹೊಸ ಹಾಗೂ ಹೆಚ್ಚು ರೂಪಾಂತರಗಳಾಗಿ ವಿಕಸನಗೊಳ್ಳುತ್ತಿರುವುದೇ ಈಗ ಆರೋಗ್ಯ ತಜ್ಞರ ಆತಂಕವನ್ನು ಹೆಚ್ಚಿಸಿದೆ.

ಸಾಧ್ಯವಾದಷ್ಟು ಕನಿಷ್ಠ ಜನರನ್ನು ಭೇಟಿ ಮಾಡಲು ಪ್ರಯತ್ನಿಸಿ. ಹಬ್ಬದಲ್ಲಿ ನಡೆಸುವ ಕೂಟಗಳನ್ನು ಮನೆಯೊಳಗೆ ನಡೆಸಬೇಡಿ.ಕೈಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆಯುವ ಮೂಲಕ ನೆಗಡಿ ಮತ್ತು ಕೆಮ್ಮನ್ನು ತಡೆಗಟ್ಟಿ. ಇದರ ಜೊತೆಗೆ ದೇಹ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.ಬಾಯಿ ಮತ್ತು ಮೂಗನ್ನು ಮುಚ್ಚುವ ಮಾಸ್ಕ್‌ ಅನ್ನು ಧರಿಸಿ.

ಕೊನೆಯ ಮಾತು: ಆರೋಗ್ಯವೇ ಭಾಗ್ಯ ಎಂಬುದು ಸುಳ್ಳಾದ ಮಾತಲ್ಲ. ಆರೋಗ್ಯವೊಂದಿದ್ದರೆ, ನಾವು ಏನನ್ನಾದರೂ ಸಾಧಿಸಬಹುದು. ಆದ್ದರಿಂದ ಆರೋಗ್ಯ ಬಗ್ಗೆ ಗಮನವಿರಲಿ.

Leave A Reply

Your email address will not be published.