ಯುವತಿಯರಿಬ್ಬರ ನಡುವೆ ಚಿಗುರಿತು ಪ್ರೀತಿ | ಸಂಬಂಧ ಗಟ್ಟಿ ಆಗುತ್ತಿದ್ದಂತೆ ನಡೆದೇ ಹೋಯ್ತು ನಂಬಲಸಾಧ್ಯವಾದ ಸಂಗತಿ!

ಸಾಮಾನ್ಯವಾಗಿ ನಾವು-ನೀವು ನೋಡಿದ ಹಾಗೆ ಹುಡುಗ ಹುಡುಗಿ ಮಧ್ಯೆ ಸ್ನೇಹ ಹುಟ್ಟಿಕೊಳ್ಳೋದು ಕಾಮನ್. ಅದರಂತೆ ಇವರಿಬ್ಬರ ನಡುವೆ ಯಾರಾದರೂ ಮೂಗು ತುರಿಸಿಕೊಂಡು ಬಂದ್ರೆ, ಅಥವಾ ಕ್ಲೋಸ್ ಆಗಿ ವರ್ತಿಸಿದ್ರೆ ಫ್ರೆಂಡ್ ಆದವನಿಗೆ ಕೋಪ ಬರೋದು ಮಾಮೂಲ್. ಅದ್ರಂತೆ ದ್ವೇಷನೂ ಹುಟ್ಟಿಕೊಳ್ಳುತ್ತದೆ. ಆದ್ರೆ, ವಿಚಿತ್ರ ಏನಪ್ಪಾ ಅಂದ್ರೆ, ಇಲ್ಲಿ ಹುಡುಗಿ-ಹುಡುಗಿ ನಡುವೆ ಪ್ರೇಮಾಂಕುರವಾಗಿದೆ. ಅಷ್ಟೇ ಆದ್ರೆ ವಿಷ್ಯ ಬಿಟ್ ಬಿಡಬಹುದಿತ್ತು. ಆದ್ರೆ ಇಲ್ಲಿ ಆಗಿದ್ದೇ ಬೇರೆ.

 

ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನೂ ಎಂಬುದನ್ನು ಇಲ್ಲಿ ಹೇಳುತ್ತೇವೆ ನೋಡಿ. ದಾವಣಗೆರೆ ಶಾಂತಿನಗರದಲ್ಲಿ ಯುವತಿಯರಿಬ್ಬರ ನಡುವೆ ಪ್ರೇಮಾಂಕುರವಾಗಿ ಆಗಬಾರದ್ದು ಆಗಿರುವ ಘಟನೆ ನಡೆದಿದೆ. ಸ್ನೇಹ ಹಾಗೂ ಲಾಸಿ ಎನ್ನುವ ಯುವತಿಯರಿಬ್ಬರು ದಾವಣಗೆರೆಯಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು. ಇವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅತ್ಮೀಯವಾಗಿದ್ದರು. ಬಳಿಕ ಇಬ್ಬರ ಮಧ್ಯೆ ಪ್ರೀತಿ ಬೇರೆ ಹುಟ್ಟಿಕೊಂಡಿದೆ. ಇದು ಸಲಿಂಗಕಾಮಿ ಲವ್. ಇಷ್ಟು ಪ್ರೀತಿ ಹುಟ್ಟುಕೊಂಡ ಮೇಲೆ ಇನ್ನೊಬ್ಬರು ನಡುವೆ ಬಂದ್ರೆ ಆ ಜೀವ ಸಹಿಸ್ಕೊಳ್ಳಬೇಕೇ? ಹಾಗೇನೇ ಇಲ್ಲಿ ಏನೇನೊ ನಡೆದೇ ಹೋಗಿದೆ.

ಹೌದು. ಸ್ನೇಹ ಎಂಬ ಯುವತಿಯು ಪರ ಯುವತಿಯೊಂದಿಗೆ ಫೋನ್​ನಲ್ಲಿ ಮಾತನಾಡಿದ್ದಾಳೆ. ಇದರಿಂದ ಕೋಪಗೊಂಡ ಕಡೂರು ಮೂಲದ ಲಾಸಿ ದಾವಣಗೆರೆಯ ಶಾಂತಿ ನಗರದ ಸ್ನೇಹ ಎನ್ನುವ ಯುವತಿಗೆ ಅ.20 ರಂದು ರೇಡಿಯಂ ಕಟರ್ ನಿಂದ ಹಲ್ಲೆ ನಡೆಸಿ ಕುತ್ತಿಗೆ, ಕೆನ್ನೆ, ಹಾಗೂ ಕೈಗೆ ಗಂಭೀರ ಗಾಯಗೊಳಿಸಿದ್ದಾಳೆ. ಬಳಿಕ ತಾನು ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಲಾಸಿ ಹಾಗು ಸ್ನೇಹ ಇಬ್ಬರು ಯುವತಿಯರನ್ನು ನೋಡಿ ಕುಟುಂಬಸ್ಥರು ಒಂದು ಕ್ಷಣ ಶಾಕ್ ಆಗಿದ್ದಾರೆ. ಬಳಿಕ ಇಬ್ಬರು ಯುವತಿಯರನ್ನು ಸ್ಥಳೀಯರು ಹಾಗೂ ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಇಬ್ಬರು ಕೂಡ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಯತ್ನ ನಡೆಸಿದ ಲಾಸಿ ವಿರುದ್ಧ 307 ಕೇಸ್ ದಾಖಲಾಗಿದೆ. ಸ್ನೇಹ ಹಾಗೂ ಲಾಸಿ ಖಾಸಗಿ ಕಾಲೇಜ್ ನಲ್ಲಿ ಅಂತಿಮ ಡಿಗ್ರಿ ವ್ಯಾಸಾಂಗ ಮಾಡುತ್ತಿದ್ದು, ಯುವತಿಯರು ಸಾಕಷ್ಟು ವರ್ಷಗಳಿಂದ ಸ್ನೇಹಿತರಾಗಿದ್ದರು. ಬಳಿಕ ಅದು ಪ್ರೇಮಕ್ಕೆ ತಿರುಗಿದೆ. ಅಲ್ಲದೇ ಇತ್ತೀಚೆಗೆ ಸಲ್ಲಿಂಗ ಕಾಮಿಗಳಾಗಿದ್ದರು ಎಂದು ಎಸ್ಪಿ ಸಿಬಿ ರಿಷ್ಯಂತ್ ಮಾಹಿತಿ ನಿಡಿದ್ದಾರೆ.

Leave A Reply

Your email address will not be published.