ಶಾಲೆಗೆ ಹೋಗು ಎಂದಿದ್ದೇ ತಪ್ಪಾಯ್ತು | ಅಮ್ಮನ ಸೀರೆಯಲ್ಲೇ ನೇಣಿಗೆ ಶರಣಾದ ಬಾಲಕ!!!

ಜೀವನದ ಬಂಡಿಯಲ್ಲಿ ಬಲು ದೂರ ಪ್ರಯಾಣ ಮಾಡಬೇಕಿದ್ದ ಬಾಲಕನೋರ್ವ ಆತ್ಮ ಹತ್ಯೆಗೆ ಶರಣಾಗಿ ಕಾಣದ ಲೋಕಕ್ಕೆ ತೆರಳಿದ ಘಟನೆಯೊಂದು ವರದಿಯಾಗಿದೆ.

 

7ನೇ ತರಗತಿ ವಿದ್ಯಾರ್ಥಿ ಇನ್ನೂ ಈಗ ಪ್ರಪಂಚದ ಆಗುಹೋಗುಗಳ ಅರಿವೇ ಇಲ್ಲದ ಬಾಲಕ ಕೇವಲ ಅಮ್ಮನ ಬೈಗಳವನ್ನೇ ಗಂಭೀರವಾಗಿ ಪರಿಗಣಿಸಿ ದುಡುಕಿನ ನಿರ್ಧಾರ ಕೈಗೊಂಡಿರುವ ಘಟನೆ ನಡೆದಿದೆ.

ಮಕ್ಕಳು ತಪ್ಪು ಮಾಡಿದಾಗ ಬೈದು ಹೊಡೆದು ತಿದ್ದಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವುದು ಪ್ರತಿ ಪೋಷಕರ ಜವಬ್ದಾರಿ. ಆದರೆ , ಕೆಲವೊಮ್ಮೆ ಮಕ್ಕಳ ಸೂಕ್ಷ್ಮ ಮನಸ್ಥಿತಿ ಯಾವುದನ್ನು ಪರಾಮರ್ಶೆ ಮಾಡಲು ಸಾಧ್ಯವಾಗದೆ ಸಣ್ಣ ಸಣ್ಣ ವಿಚಾರಕ್ಕೂ ಸಾಯುವ ಮಟ್ಟಕ್ಕೆ ಇಳಿಯುತ್ತಿರುವುದೂ ಶೋಚನೀಯ.

ಮಗನನ್ನು ಸರಿದಾರಿಗೆ ತರಲು ತಾಯಿ ಬೈದ ಪ್ರಕರಣವೇ ತಾಯಿಗೆ ಮುಳುವಾಗಿ ಪರಿಣಮಿಸಿದ ಘಟನೆ ನಡೆದಿದೆ. ಹೌದು..ಬೆಂಗಳೂರು ಉತ್ತರ ತಾಲೂಕಿನ ಕಡಬಗೆರೆ ಗ್ರಾಮದ ಮಂಜುನಾಥ್ ಹಾಗೂ ಸವಿತಾ ದಂಪತಿಯ 12 ವರ್ಷದ ಪುತ್ರ ಪೃಥ್ವಿರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗ್ರಾಮದ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ಬಾಲಕ ಶಾಲೆಗೆ ಹೋಗಲು ದಿನವೂ ಕಳ್ಳತನ ಮಾಡುತ್ತಲೇ ಇದ್ದು, ಶಾಲೆಗೆ ಹೋಗಲು ನಿತ್ಯ ಹಠ ಹಿಡಿದು ಕೂರುತ್ತಿದ್ದ.

ಇದರ ಜೊತೆಗೆ ಶಿಕ್ಷಕರು ಕೂಡಾ ಪೋಷಕರಿಗೆ ಕಂಪ್ಲೆಂಟ್‌ ಮಾಡಿದ ಹಿನ್ನಲೆಯಲ್ಲಿ ನಿನ್ನೆ ಮಗನಿಗೆ ಶಾಲೆಗೆ ಹೋಗಲು ಒತ್ತಾಯಿಸಿದ್ದು, ಆದರೆ ಅದಕ್ಕೆ ಬಾಲಕ ಕ್ಯಾರೇ ಎನ್ನದೆ ಇದ್ದಾಗ ತಾಯಿ ಹೊಡೆದು ಬುದ್ಧಿ ಹೇಳಿದ್ದಾರೆ.

ಆದರೆ, ಇಷ್ಟಕ್ಕೆ ಕೋಪಗೊಂಡ ಪೃಥ್ವಿ, ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡ ಪೃಥ್ವಿರಾಜ್‌, ಅಮ್ಮನ ಸೀರೆಯಿಂದಲೇ ಮನೆಯಲ್ಲಿರೋ ಸೀಟ್ ಕಂಬಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮನೆಯ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡು ಮಗನ ನ್ನು ಸಾಕುತ್ತಿದ್ದ ತಾಯಿ ಸವಿತಾ ನೂರಾರು ಕನಸು ಹೊತ್ತು ಮಗ ಮುಂದೆ ಓದಿ, ಮನೆಯ ಜವಾಬ್ದಾರಿ ಹೊರುವ ಆಶಯ ಹೊಂದಿದ್ದರು..

ಇದರ ನಡುವೆ ತನ್ನ ಚಿಕ್ಕಮ್ಮನಿಗೆ ನಿತ್ಯ ಫೋನ್‌ ಮಾಡಿ ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಅಂತಾ ಕೇಳುತ್ತಿದ್ದ ಎನ್ನಲಾಗಿದ್ದು, ಆದರೆ ಕಳೆದ ಎರಡು ದಿನದಿಂದ ಅವರಿಗೂ ಫೋನ್ ಕೂಡ ಮಾಡಿರಲಿಲ್ಲ.

ಇದರ ಬೆನ್ನಲ್ಲೆ ಸೂಸೈಡ್‌ ಮಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಬೇಕಿದ್ದ ಬಾಲಕ ಇಹಲೋಕಕ್ಕೆ ವಿದಾಯ ಹೇಳಿದ್ದು ವಿಪರ್ಯಾಸ.

ಇದೀಗ ಚಿಕ್ಕ ಬಾಲಕನ ದುಡುಕಿನ ನಿರ್ಧಾರಕ್ಕೆ ಇಡೀ ಕುಟುಂಬ ಕಣ್ಣೀರಾಗಿದ್ದು, ಅರಳಬೇಕಿದ್ದ ಹೂವೊಂದು ಅರಳುವ ಮುನ್ನವೇ ಬಾಡಿ ಹೋಗಿದ್ದು ಬೇಸರದ ಸಂಗತಿ.

Leave A Reply

Your email address will not be published.