ನಿಮಗೆ ಮದುವೆಯಾಗಿದ್ದರೆ ದೊರೆಯಲಿದೆ ರೂ.10,000 ಪಿಂಚಣಿ | ಹೇಗೆ ಅಂತೀರಾ? ಇಲ್ಲಿದೆ ಉತ್ತರ!!!

ನಾವು ನಿನ್ನೆ ಹೇಗಿದ್ದೆವೋ ಅದು ಕಳೆದು ಹೋದ ದಿನ ಆದರೆ ಇವತ್ತು ಅನ್ನೋದು ನಮಗೆ ಒಂದು ಹೊಸ ಅವಕಾಶ ಯಾಕೆಂದರೆ ಮುಂದಿನ ದಿನದ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಇಂದೇ ಸರಿಯಾದ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಇಂದಿನ ಹೂಡಿಕೆಯಿಂದ ನಾಳಿನ ದಿನಗಳಲ್ಲಿ ಖುಷಿಯಿಂದ ಕಾಲ ಕಳೆಯಬಹುದು.

 

ಮುಂದಿನ ದಿನದಲ್ಲಿ ನಾವು ಯಾರಿಗೂ ಅವಲಂಬಿತರಾಗದೆ ಸ್ವತಂತ್ರವಾಗಿ ಬದುಕಲು ಇವತ್ತಿನಿಂದಲೇ ಹೂಡಿಕೆ ಮಾಡಿಕೊಳ್ಳಿ. ಅದರಲ್ಲೂ ಹೂಡಿಕೆ ಮಾಡುವಾಗ ಸುರಕ್ಷಿತ ಯೋಜನೆಯನ್ನು ತಮ್ಮದಾಗಿಸಿಕೊಳ್ಳುವುದು ಬಹಳ ಮುಖ್ಯ.

ಹೌದು ಅಟಲ್ ಪಿಂಚಣಿ ಯೋಜನೆ ಸರ್ಕಾರದ ಯೋಜನೆಯಾಗಿದೆ. ಇದರಲ್ಲಿ, ಮಾಡುವ ಹೂಡಿಕೆ ಮತ್ತು ಹೂಡಿಕೆ ಮಾಡುವವರ ವಯಸ್ಸನ್ನು ಅವಲಂಬಿಸಿ, ಎಷ್ಟು ಪಿಂಚಣಿ ಸಿಗುತ್ತದೆ ಎಂದು ನಿರ್ಧರಿಸಲಾಗುತ್ತದೆ. ಯೋಜನೆಯಡಿ, ಕನಿಷ್ಟ 1000 ರೂ ಮತ್ತು ಗರಿಷ್ಠ 5000 ರೂ ಮಾಸಿಕ ಪಿಂಚಣಿ ಪಡೆಯಬಹುದು. ಅಲ್ಲದೆ, 2000, 3000 ಮತ್ತು 4000 ರೂಪಾಯಿ ಪಿಂಚಣಿಯನ್ನೂ ಪಡೆಯಬಹುದು. ಇದು ಸಂಪೂರ್ಣ ಸುರಕ್ಷಿತ ಹೂಡಿಕೆಯಾಗಿದೆ.

ಸುರಕ್ಷಿತ ಯೋಜನೆಗಳಲ್ಲಿ ಒಂದು ‘ಅಟಲ್ ಪಿಂಚಣಿ ಯೋಜನೆ’. ಇತ್ತೀಚಿನ ದಿನಗಳಲ್ಲಿ ಈ ಯೋಜನೆಯಲ್ಲಿ ಹೊಸ ಬದಲಾವಣೆಗಳನ್ನು ಸಹ ಮಾಡಲಾಗಿದೆ. ಈ ಯೋಜನೆಯಲ್ಲಿ ಪತಿ-ಪತ್ನಿ ಇಬ್ಬರ ಹೆಸರಿನಲ್ಲಿ ಪ್ರತ್ಯೇಕ ಖಾತೆಗಳನ್ನು ತೆರೆದು ಪ್ರತಿ ತಿಂಗಳು 10,000 ರೂಪಾಯಿ ವರೆಗೆ ಪಿಂಚಣಿ ಪಡೆಯಬಹುದು.

ಹೊಸ ನಿಯಮ :
ಹೊಸ ಬದಲಾವಣೆಯ ಅಡಿಯಲ್ಲಿ, ಆದಾಯ ತೆರಿಗೆ ಕಾಯ್ದೆಯಡಿ ಆದಾಯ ತೆರಿಗೆ ಪಾವತಿಸುವ ಯಾವುದೇ ವ್ಯಕ್ತಿ ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ತೆರಿಗೆ ಪಾವತಿದಾರರು ಅಕ್ಟೋಬರ್ 1 ರ ನಂತರ ಅಟಲ್ ಪಿಂಚಣಿ ಯೋಜನೆಗಾಗಿ ಖಾತೆಯನ್ನು ತೆರೆದರೆ, ಅವರ ಖಾತೆಯನ್ನು ರದ್ದು ಮಾಡಲಾಗುತ್ತದೆ.

10,000 ಪಿಂಚಣಿ ಪಡೆಯುವ ಕ್ರಮ:
*ಈ ಯೋಜನೆಯ ಲಾಭವನ್ನು 39 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗಂಡ ಮತ್ತು ಹೆಂಡತಿ ಪಡೆಯಬಹುದು.

*30 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಗಂಡ ಮತ್ತು ಹೆಂಡತಿಯಾಗಿದ್ದರೆ, ಅವರು APY ಖಾತೆಗೆ ಪ್ರತಿ ತಿಂಗಳು 577 ರೂ. ಪಾವತಿಸಬೇಕು.

*ಗಂಡ ಮತ್ತು ಹೆಂಡತಿಯ ವಯಸ್ಸು 35 ವರ್ಷವಾಗಿದ್ದರೆ, ಅವರು ಪ್ರತಿ ತಿಂಗಳು ತಮ್ಮ ಎಪಿವೈ ಖಾತೆಯಲ್ಲಿ 902 ರೂಪಾಯಿಗಳನ್ನು ಹಾಕಬೇಕಾಗುತ್ತದೆ.

*ಖಾತರಿಪಡಿಸಿದ ಮಾಸಿಕ ಪಿಂಚಣಿ ಜೊತೆಗೆ, ಸಂಗಾತಿಗಳಲ್ಲಿ ಒಬ್ಬರು ಮರಣಹೊಂದಿದರೆ, ಬದುಕಿರುವ ಸಂಗಾತಿಯು ಪ್ರತಿ ತಿಂಗಳು ಪಿಂಚಣಿಯೊಂದಿಗೆ 8.5 ಲಕ್ಷ ರೂ. ಸಿಗುತ್ತದೆ.

ಅಟಲ್ ಪಿಂಚಣಿ ಯೋಜನೆಯನ್ನು 2015 ರಲ್ಲಿ, ಆರಂಭವಾಯಿತು. ಆಗ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ಮಾತ್ರ ಈ ಯೋಜನೆಯನ್ನು ಆರಂಭಿಸಲಾಗಿತ್ತು. ನಂತರ ಈ ನಿಯಮವನ್ನು ಬದಲಾಯಿಸಲಾಯಿತು. ಬದಲಾದ ನಿಯಮದ ಅನ್ವಯ, 18 ರಿಂದ 40 ವರ್ಷದವರೆಗಿನ ಭಾರತೀಯ ನಾಗರಿಕರು, ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಯೋಜನೆಯಲ್ಲಿ, 60 ವರ್ಷಗಳ ನಂತರ ಪಿಂಚಣಿ ಪ್ರಾರಂಭವಾಗುತ್ತದೆ. ಆದರೆ ಅಕ್ಟೋಬರ್ 1 ರಿಂದ, ಮತ್ತೆ ಈ ಯೋಜನೆಯ ನಿಯಮ ಬದಲಾಯಿಸಲಾಗಿದೆ.

Leave A Reply

Your email address will not be published.