ಮೋದಿ ಸರ್ಕಾರದ ವಿರುದ್ದ ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಫುಲ್ ಪೇಜ್ ಜಾಹೀರಾತು ; ನಿರ್ಮಲಾ ಸೀತಾರಾಮನ್ ಸೇರಿದಂತೆ 11 ಮಂದಿಯನ್ನು ನಿಷೇಧಿಸಲು ಆಗ್ರಹ !

ಇತ್ತೀಚಿನ ದಿನಗಳಲ್ಲಿ ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಎಂಬ ಪತ್ರಿಕೆಯಲ್ಲಿ ಜಾಹೀರಾತೊಂದು ಪ್ರಕಟವಾಗಿದ್ದು, ಈ ಜಾಹಿರಾತಿನ  ಕುರಿತಾಗಿ ಸಾಕಷ್ಟು ವಾದ- ವಿವಾದಗಳು ಈಗಾಗಲೇ ಶುರುವಾಗಿವೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಜಾರಿ ನಿರ್ದೇಶನಾಲಯ ಮತ್ತು ದೇವಾಸ್-ಆಂಟ್ರಿಕ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಬೇಕಾಗಿದ್ದಾರೆ ಎಂದು ಹೇಳುವ ಮೂಲಕ ನಿಷೇಧಕ್ಕೆ ಸ್ವಾಗತ ಮಾಡಲಾಗಿದೆ.

ನಿರ್ಮಲಾ ಸೀತಾರಾಮನ್ ಅಮೆರಿಕವನ್ನು ಭೇಟಿ  ನೀಡಿದ ಸಂದರ್ಭದಲ್ಲಿ ಈ ಜಾಹೀರಾತು ಪ್ರಕಟಿಸಲಾಗಿದೆ.ಈ ಜಾಹೀರಾತನ್ನು US ಮೂಲದ ಸರ್ಕಾರೇತರ ಸಂಸ್ಥೆಯಾದ ಫ್ರಾಂಟಿಯರ್ಸ್ ಆಫ್ ಫ್ರೀಡಮ್ ಬಿಡುಗಡೆ ಮಾಡಿದೆ.ಅಕ್ಟೋಬರ್ 13 ರ ಸಂಚಿಕೆಯಲ್ಲಿ ಪ್ರಕಟಿಸಲಾಗಿದ್ದು, ಇದರ ಶೀರ್ಷಿಕೆಗೆ ‘ಮೋದಿಯ ಮ್ಯಾಗ್ನಿಟ್ಸ್ಕಿ 11’ ಎಂದು ನೀಡಲಾಗಿದೆ. ಕೆಲವು ವರ್ಷಗಳ ಹಿಂದೆ ಅಂದರೆ 2016 ರಲ್ಲಿ  US  ‘ ಗ್ಲೋಬಲ್ ಮ್ಯಾಗ್ನಿಟ್ಸ್ಕಿ’  ಎಂಬ ಕಾಯಿದೆಯನ್ನು ಜಾರಿಗೊಳಿಸಿತ್ತು.
ಈ ಕಾಯಿದೆಯ ಅಡಿಯಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ವಿದೇಶಿ ಸರ್ಕಾರಿ ಅಧಿಕಾರಿಗಳನ್ನು ನಿಷೇಧಿಸಲಾಗಿದೆ. ‘ಭಾರತವನ್ನು ಹೂಡಿಕೆಗೆ ಅಸುರಕ್ಷಿತ  ಸ್ಥಳವನ್ನಾಗಿ ಮಾಡಿದ ಅಧಿಕಾರಿಗಳನ್ನು ಭೇಟಿ ಮಾಡಿ’ ಎಂದು ಜಾಹೀರಾತಿನಲ್ಲಿ ಬರೆಯಲಾಗಿದೆ.

ಮೊದಲೇ  ತಿಳಿಸಿದಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿದೇಶ ಪ್ರವಾಸದಲ್ಲಿರುವಾಗ ಈ ಜಾಹೀರಾತು ಪ್ರಕಟಿಸಲಾಗಿದೆ. ನಿರ್ಮಲಾ  ಸೀತಾರಾಮನ್ ಅವರು ಅಮೆರಿಕವನ್ನು ಭೇಟಿ ನೀಡಿದ ಕುರಿತಾಗಿ ಪ್ರಕಟವಾದ ಜಾಹೀರಾತು.ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ಸೀತಾರಾಮನ್ ಅಕ್ಟೋಬರ್ 11 ರಂದು ವಾಷಿಂಗ್ಟನ್‌ಗೆ ಆಗಮಿಸಿದ್ದರು. ಭಾನುವಾರ ರಾತ್ರಿ ಅಮೆರಿಕದಿಂದ ಭಾರತಕ್ಕೆ ತೆರಳಲಿದ್ದಾರೆ.

ಈ ಜಾಹೀರಾತಿನಲ್ಲಿ ಭಾರತದ 11 ಜನರ ಹೆಸರನ್ನು ಬರೆಯಲಾಗಿದೆ. ಅವರ ಹೆಸರಿನ ನಂತರ ನೇರವಾಗಿ ವಿಷಯವನ್ನು ಮಂಡಿಸಿದವರು , “ಮೋದಿ ಸರ್ಕಾರದ ಈ 11 ಜನ ಅಧಿಕಾರಿಗಳು ರಾಜಕೀಯ ಮತ್ತು ವ್ಯಾಪಾರ ಪ್ರತಿಸ್ಪರ್ಧಿಗಳಿಂದ ಖಾತೆಗಳನ್ನು ಇತ್ಯರ್ಥಗೊಳಿಸಲು ಸರ್ಕಾರಿ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸಿಕೊಂಡು ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡಿದ್ದಾರೆ. ಅವರು ಹೂಡಿಕೆದಾರರಿಗೆ ಭಾರತವನ್ನು ಅಸುರಕ್ಷಿತವಾಗಿಸಿದ್ದಾರೆ ಎಂದು ಸ್ಪಷ್ಟವಾಗಿ ದೂರಲಾಗಿದೆ ಮತ್ತು ಗ್ಲೋಬಲ್  ಮ್ಯಾಗ್ನಿಟ್ಸ್ಕಿ ಮಾನವ ಹಕ್ಕುಗಳ ಹೊಣೆಗಾರಿಕೆ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಆರ್ಥಿಕ ಮತ್ತು ವೀಸಾ ನಿರ್ಬಂಧಗಳನ್ನು ವಿಧಿಸಲು ನಾವು US ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದೂ ಕೂಡ ಬರೆಯಲಾಗಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆಂಟ್ರಿಕ್ಸ್ ಅಧ್ಯಕ್ಷ ರಾಕೇಶ್ ಶಶಿಭೂಷಣ್, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್ ವೆಂಕಟರಾಮನ್, ನ್ಯಾಯಮೂರ್ತಿ ಹೇಮಂತ್ ಗುಪ್ತಾ, ನ್ಯಾಯಮೂರ್ತಿ ವಿ ರಾಮಸುಬ್ರಮಣ್ಯಂ, ಸಿಬಿಐ ಡಿಎಸ್‌ಪಿ ಆಶಿಶ್ ಪಾರಿಕ್, ಇಡಿ ನಿರ್ದೇಶಕ ಸಂಜಯ್ ಇವರೆಲ್ಲಾ ಜಾಹೀರಾತಿನಲ್ಲಿ ನಿಷೇಧಕ್ಕೆ ಬೇಡಿಕೆಯಲ್ಲಿರುವ ಭಾರತೀಯರು.

ಈ ಜಾಹೀರಾತು ಪ್ರಕಟಣೆಯಾದ ನಂತರ ಭಾರತದಲ್ಲಿ ಕೋಲಾಹಲ ಎಬ್ಬಿಸಿದೆ. ಜಾಹೀರಾತಿನ ಬಗ್ಗೆ ಹಲವರು  ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರರಾದ ಕಾಂಚನ್ ಗುಪ್ತಾ ಟ್ವೀಟ್ ಮಾಡಿ ಅಮೆರಿಕದ ಮಾಧ್ಯಮವನ್ನು ವಂಚಕರು ಅಸ್ತ್ರವಾಗಿ ಬಳಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಬರೆದುಕೊಂಡಿದ್ದಾರೆ.ಒಂದು ಜಾಹಿರಾತಿನಿಂದ ಒಂದಲ್ಲ ಒಂದು ರೀತಿಯಲ್ಲಿ ವಾದ-ವಿವಾದಗಳು ಆರಂಭವಾಗುತ್ತಿದೆ.

ಕೊನೆಗೆ ಉಳಿಯುವ ಪ್ರಶ್ನೆ ಏನೆಂದರೆ ಹೊಗೆಯಾಡದೆ ಬೆಂಕಿ ಉರಿಯದು, ಎಲ್ಲದಕ್ಕೂ ಮೂಲ ಕಾರಣ ಮೂಲವೇ.ಈ  ಜಾಹೀರಾತುಗಳ ಹಿಂದೆ ಯಾರ ಕೈವಾಡವಿದೆ ಗೊತ್ತಿದೆಯ ಎಂದು ಕಾಂಚನ್ ಗುಪ್ತಾ  ಪ್ರಶ್ನಿಸಿದಾಗ, ತಿಳಿದುಬಂದ ಮಾಹಿತಿಯ ಪ್ರಕಾರ ದೇವಾಸ್‌ನ CEO ಆಗಿದ್ದ ಪರಾರಿಯಾದ ರಾಮಚಂದ್ರ ವಿಶ್ವನಾಥನ್ ಅವರು ಈ ಜಾಹೀರಾತಿನ ಪ್ರಚಾರವನ್ನು ನಡೆಸುತ್ತಿದ್ದರು. ಬ್ರಿಟಿಷ್ ಮಿಡಲ್ ಈಸ್ಟ್ ಸೆಂಟರ್ ಫಾರ್ ಸ್ಟಡೀಸ್ ಅಂಡ್ ರಿಸರ್ಚ್‌ನಲ್ಲಿ ಕಾರ್ಯತಂತ್ರದ ರಾಜಕೀಯ ವ್ಯವಹಾರಗಳಲ್ಲಿ ಪರಿಣಿತರಾದ ಅಮ್ಜದ್ ತಾಹಾ ಅವರು ವಾಲ್ ಸ್ಟ್ರೀಟ್ ಜರ್ನಲ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ. ಇದು ಪತ್ರಿಕೋದ್ಯಮವಲ್ಲ ಮಾನಹಾನಿಕರ ಹೇಳಿಕೆ ಎಂದು ಟ್ವೀಟ್ ಮಾಡಿದ್ದಾರೆ.ಮತ್ತು ಇದು ಪತ್ರಿಕೋದ್ಯಮಕ್ಕೆ ಕಳಂಕ ಎಂದು ಹೇಳಿದರು.

Leave A Reply

Your email address will not be published.