ದ್ವಿತೀಯ ಪಿಯುಸಿ ‘ವಾರ್ಷಿಕ ಪರೀಕ್ಷೆ’ಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಬೆಂಗಳೂರು: ಮಾರ್ಚ್ 2023ರಲ್ಲಿ ನಡೆಯಲಿರುವಂತ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಕಟಿಸಿದೆ. ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಮಾಹಿತಿ ಬಿಡುಗಡೆ ಮಾಡಿದ್ದು ಮಾರ್ಚ್ 2023ರಲ್ಲಿ ನಡೆಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ದಿನಾಂಕ 10-03-2023ರಿಂದ 29-03-2023ರವರೆಗೆ ನಡೆಸಲು ತೀರ್ಮಾನಿಸಿದೆ. ತಾತ್ಕಾಲಿಕ ವೇಳಾಪಟ್ಟಿಯನ್ನು ಈ ಕೆಳಕಂಡಂತೆ ಪ್ರಕಟಿಸಲಾಗಿದೆ ಎಂದಿದೆ. ಇನ್ನೂ ವಿದ್ಯಾರ್ಥಿಗಳು ಈ ವೇಳಾಪಟ್ಟಿಗೆ ಆಕ್ಷೇಪಣೆಗಳಿದ್ದರೇ ದಿನಾಂಕ 21-11-2022ರ ಒಳಗಾಗಿ jdexam.dpue@gmail.com ಗೆ ಸಲ್ಲಿಸುವಂತೆ ತಿಳಿಸಿದ್ದಾರೆ.

ಹೀಗಿದೆ ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ
ದಿನಾಂಕ 10-03-2023 – ಕನ್ನಡ, ಅರೇಬಿಕ್
ದಿನಾಂಕ 11-03-2023 – ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ
ದಿನಾಂಕ 13-03-2023 – ಅರ್ಥಶಾಸ್ತ್ರ
ದಿನಾಂಕ 14-03-2023- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ
ದಿನಾಂಕ 15-03-2023 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ದಿನಾಂಕ 16-03-2023 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ದಿನಾಂಕ 17-03-2023 – ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್
ದಿನಾಂಕ 18-03-2023 – ಭೂಗೋಳಶಾಸ್ತ್ರ, ಜೀವಶಾಸ್ತ್ರ
ದಿನಾಂಕ 20-03-2023 – ಇತಿಹಾಸ, ಭೌತಶಾಸ್ತ್ರ
ದಿನಾಂಕ 21-03-2023 – ಹಿಂದಿ
ದಿನಾಂಕ 23-03-2023 – ಇಂಗ್ಲೀಷ್
ದಿನಾಂಕ 25-03-2023 – ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ದಿನಾಂಕ 27-03-2023 – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
ದಿನಾಂಕ 29-03-2023 – ಸಮಾಜ ಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಪ್ರತಿದಿನ ಒಂದು ವಿಷಯಕ್ಕೆ ಮಾತ್ರ ನಡೆಯಲಿದ್ದು, ಬೆಳಿಗ್ಗೆ 10-15 ರಿಂದ ಮಧ್ಯಾಹ್ನ 01-30 ರವರೆಗೆ ಪರೀಕ್ಷೆ ನಡೆಯಲಿದೆ.

ಕರ್ನಾಟಕ ಮಾರ್ಚ್ 2023ರ ದ್ವಿತೀಯ ಪಿಯುಸಿ ತಾತ್ಕಾಲಿಕ ವಿಷಯವಾರು ವೇಳಾಪಟ್ಟಿ ಈ ಕೆಳಗಿನಂತೆ ಇದೆ.

3 Comments
  1. https://novoluxe.top says

    Wow, awesome weblog layout! How lengthy have you been blogging for?
    you make running a blog look easy. The full glance of your
    web site is great, let alone the content material!
    You can see similar here najlepszy sklep

  2. AA List says

    Hello! Do you know if they make any plugins to help with
    SEO? I’m trying to get my blog to rank for some targeted keywords but I’m not seeing very good gains.
    If you know of any please share. Appreciate it!

    I saw similar text here: Scrapebox List

  3. SnapTik says

    You are so awesome! I do not suppose I’ve truly read through a single thing like that before. So good to find someone with a few original thoughts on this topic. Really.. many thanks for starting this up. This site is one thing that is needed on the internet, someone with a bit of originality.

Leave A Reply

Your email address will not be published.